ಪ್ರೋ. ಎಲ್.ಆರ್ ನಾಯಕರಿಗೆ ಸನ್ಮಾನ


ಕೊಪ್ಪಳ ಸ್ನಾತಕೋತ್ತರ ಕೇಂದ್ರಕ್ಕೆ ಸದ್ಯ ಸ್ವಂತ ಕಟ್ಟಡ, ಗಣಕಯಂತ್ರಗಳು, ಸಿಬ್ಬಂದಿಗಳ ಕೊರತೆಯಂತಹ ಸಣ್ಣ ಪುಟ್ಟ ಸಮಸ್ಯಗಳು ಇದ್ದಾಗ್ಯು ಅವನ್ನು ಮೆಟ್ಟಿ ನಿಂತು ಬೆಳೆಯುತ್ತಿರುವ ಸಂಗತಿ ಹೆಮ್ಮೆಯ ವಿಷಯವಾಗಿದೆ ಎಂದು ಪ್ರೋ. ಎಲ್.ಆರ್ ನಾಯಕ್ ತಿಳಿಸಿದರು. ಸ್ನಾತಕೋತ್ತರ ಕೇಂದ್ರದ ಬೆಳವಣಿಗೆ ಮತ್ತು ಅಭಿವೃದ್ದಿಯನ್ನು ಅಭೂತಪೂರ್ವವಾಗಿ ಕೊಂಡಾಡಿದ ಅವರು ಬರುವ ದಿನಮಾನಗಳಲ್ಲಿ ಕೊಪ್ಪಳದಲ್ಲೆ ಸ್ವತಂತ್ರ ವಿಶ್ವವಿದ್ಯಾಲಯ ಆರಂಭವಾದರೆ ಅಚ್ಚರಿಯ ವಿಷಯವೆನಲ್ಲ ಎಂದು ಅಭಿಪ್ರಾಯಪಟ್ಟರು.

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾಕೋತ್ತರ ಕೇಂದ್ರ, ಕೊಪ್ಪಳದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೋಂಡು ಸನ್ಮಾನ ಸ್ವೀಕರಿಸಿ, ಸಮಸ್ಯಗಳಿಗೆ ಹೆಚ್ಚು ಒತ್ತು ಕೊಡುವ ಬದಲಾಗಿ ಸಮಸ್ಯಗಳಾಚೆ ಬೆಳೆದು ಗುರಿ ತಲುಪುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರಸ್ತುತ ಅಕ್ಕಮಹಾದೇವಿ ವಿಶ್ವವಿದ್ಯಾಲಯ, (ವಿಜಾಪೂರ) ಆಡಳಿತ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೂರ್ವದಲ್ಲಿ ವಿ.ಶ್ರೀ.ಕೃ. ವಿಶ್ವವಿದ್ಯಾಲಯ, ಬಳ್ಳಾರಿಯಲ್ಲಿ ಕುಸಚಿವರು (ಮೌಲ್ಯಮಾಪನ) ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಕಾರ್ಯಕ್ರಮಕ್ಕೆ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಪ್ರೋ. ಮಾಳಗಿ ಮಾತನಾಡಿ ವಿದ್ಯೆ ಯಾರಿಂದಲೂ ಅಪಹರಿಸದ ಆಸ್ತಿಯಾಗಿದ್ದು ಅಣ್ಣ ತಮ್ಮಂದಿರು ಸಹ ಪಾಲು ಕೇಳಲಾರರು. ವಿದ್ಯೆಯಿಂದ ಜೀವನಾಮೃತ ಉಣ್ಣುವಂತೆ ಅಧ್ಯಯನ ಮತ್ತು ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿಗಳಾದ ಡಾ. ಮನೋಜ್ ಡೊಳ್ಳಿ ಕೊಪ್ಪಳಕ್ಕೆ ಸ್ನಾತಕೋತ್ತರ ಕೇಂದ್ರ ಬರಲು ಪ್ರೋ. ಎಲ್.ಆರ್ ನಾಯಕ್ ಅವರ ಪಾತ್ರ ಸ್ಮರಣಿಯ ಮತ್ತು ಅವರ ಧಕ್ಷ ಕಾರ್ಯವೈಖರಿ ಮತ್ತು ಅವರ ಸಹನಶೀಲ ಗುಣಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಡಾ. ರಾಜಶೇಖರ ಜಮದಂಡಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಸಿಬ್ಬಂದಿವರ್ಗ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Please follow and like us:
error

Related posts