ಪ್ರೀತಿಸಿ ಮದುವೆಯಾದ ಜೋಡಿಗೆ ಜೀವಬೆದರಿಕೆ

ಪ್ರೀತಿಸಿ ಮದುವೆಯಾದ ಜೋಡಿ ನಾಲ್ಕು ವರ್ಷ ಕಳೆದರೂ ಊರಿಗೆ ಕಾಲಿಡಲಾಗುತ್ತಿಲ್ಲ. ಬೇರೆ ಬೇರೆ ಜಾತಿಗೆ ಸೇರಿದ್ದೇ ದೊಡ್ಡ ತಪ್ಪಾಗಿದೆ. ಹನುಮಮ್ಮಳ ಆಸ್ತಿಯ ಮೇಲೆ ಕಣ್ಣಿಟ್ಟ ಮಾವಂದಿರು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಹೆದರಿದ ಗಂಡ ಹೆಂಡತಿ ಪೋಲಿಸ್ ಮೊರೆ ಹೋಗಿದ್ದಾರೆ

.

ಪ್ರೀತಿಸಿ ಮದುವೆಯಾದ ತಪ್ಪಿಗೆ ನಾಲ್ಕು ವರ್ಷಗಳಿಂದ ಊರು ಬಿಟ್ಟು ಹೋಗಿದ್ದ ಜೋಡಿ ಮರಳಿ ಸ್ವಂತ ಊರಿಗೆ ಬರಬೇಕೆಂದರೆ ಕೊಲೆ ಬೆದರಿಕೆಗೊಳಗಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ತಾವರಗೇರಾ ಹತ್ತಿರದ ಕಳ್ಳಮಳ್ಳಿಯ ಆದಪ್ಪ ಉಪ್ಪಾರ ಮತ್ತು ಹನುಮಮ್ಮ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ತಿಳಿದುಕೊಂಡ ಹನುಮಮ್ಮನ ಕಡೆಯವರು ಅವಳ ಮದುವೆಗಾಗಿ ಸಿದ್ದತೆ ಮಾಡಿದ್ದರು. ಹನುಮಮ್ಮಳಿಗೆ ಸಾಮೂಹಿಕ ಮದುವೆಯಲ್ಲಿ ಮದುವೆ ಮಾಡಲು ಪ್ರಯತ್ನಿಸಿದರೂ ಹುಡುಗ ಹುಡುಗಿ ವಯಸ್ಸು ಕಡಿಮೆಯಿದ್ದರಿಂದ ಅವರನ್ನು ಅಲ್ಲಿಂದ ಕಳಿಸಲಾಗಿತ್ತು. ಹನುಮಮ್ಮಳಿಗೆ ತಾಯಿಯಿಂದ ಬಳುವಳಿಯಾಗಿ ಬಂದ 9 ಎಕರೆ ಜಾಗೆ ಇದೆ. ತಂದೆ ತಾಯಿಯನ್ನು ಕಳೆದುಕೊಂಡ ಬಳಿಕ ಹನುಮಮ್ಮ ತನ್ನ ಹೆಣ್ಣಜ್ಜಿಯ ಮನೆಯಲ್ಲಿಯೂ ಇದ್ದಳು. ಅವಳ ಆಸ್ತಿಯನ್ನು ಲಪಟಾಯಿಸಲು ಅವಳ ಮಾವಂದಿರು ಯತ್ನಿಸಿ ಅವಳ ಮದುವೆಗಾಗಿ ಪ್ರಯತ್ನ ಪಟ್ಟಿದ್ದರು. ಇದನ್ನು ನೋಡಿದ್ದ ಹನುಮಮ್ಮ ತಾನು ಪ್ರೀತಿಸಿಸುತ್ತಿದ್ದ ಆದಪ್ಪನ ಜೊತೆ ಊರು ಬಿಟ್ಟುಹೋಗಿದ್ದಳು. ಆದಪ್ಪಮತ್ತು ಹನುಮಮ್ಮ ಬೆಂಗಳೂರಿನಲ್ಲಿಯೇ ಮದುವೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿಯೇ ವಾಸವಾಗಿದ್ದಾರೆ. ಡ್ರೈವರ್ ಕೆಲಸ ಮಾಡುವ ಆದಪ್ಪತನ್ನ ತಾಯಿಯನ್ನು ಕಳಮಳ್ಳಿಯಲ್ಲಿ ಬಿಟ್ಟು ಹೋಗಿದ್ದಾನೆ. ಮದುವೆಯಾದಾಗಿನಿಂದ ಗಂಡ ಹೆಂಡತಿ ಇಬ್ಬರೂ ಊರಿಗೆ ಬಂದಿಲ್ಲ. ಊರಿಗೆ ಬರಬೇಕೆಂದರೆ ಹನುಮಮ್ಮಳ ಮಾವಂದಿರು ಹಾಗೂ ಸಂಬಂಧಿಕರ ಧಮಕಿಯಿಂದ ಹೆದರಿದ್ದಾರೆ. ಕೆಲವು ದಿನಗಳ ಹಿಂದೆ ಹನುಮಮ್ಮಳ ಹೆಸರಿನಲ್ಲಿದ್ದ ಜಮೀನನ್ನು ಏಕಾಏಕಿ ಅವಳ ಹೆಣ್ಣಜ್ಜಿಯ ಹೆಸರಿಗೆ ವರ್ಗ ಮಾಡಿದ್ದಾರೆ. ಅಲ್ಲದೇ ಇವರಿಬ್ಬರೂ ಮರಳಿ ಕಳಮಳ್ಳಿ ಗೆ ಬಂದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಆದಪ್ಪಮತ್ತು ಹನುಮಮ್ಮ ಪೋಲಿಸ್ ರಕ್ಷಣೆ ಕೋರಿ ಎಸ್ಪಿ ಅನೂಪ್ ಶೆಟ್ಟಿ ಮೊರೆ ಹೋಗಿದ್ದರು. ಇದರ ಮಾಹಿತಿ ತಾವರಗೇರಾ ಪೊಲಿಸ್ ಸ್ಟೇಷನ್ ಗೆ ನೀಡಲಾಗಿತ್ತು. ಇವರು ಎಸ್ಪಿ ಮೊರೆ ಹೋಗಿದ್ದನ್ನು ಅರಿತ ಹನುಮಮ್ಮಳ ಮಾವಂದಿರಾದ ಭೀಮನಗೌಡ ಹಾಗೂ ಇತರರು ಇವರಿಗೆ ಜೀವ ಬೆದರಿಕೆ ಹಾಕಿದ್ದು ಊರಿಗೆ ಬಂದರೆ ಕೊಲ್ಲುವುದಾಗಿ ಎಚ್ಚರಿಸಿದ್ದಾರೆ. ಜಾತಿ ವೈಷಮ್ಯದಿಂದ ಈಗಲೂ ಆದಪ್ಪನ ಮೇಲೆ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಫೊನ್ ಮೂಲಕ ಧಮಕಿ ಹಾಕಿರುವ ಅವರು ಹನುಮಮ್ಮಳ ಆಸ್ತಿಯ ಮೇಲೆ ಕಣ್ಣಿಟ್ಟು ಈ ರೀತಿಮಾಡುತ್ತಿದ್ದಾರೆ ಎಂದು ಹನುಮಮ್ಮ ಹೇಳುತ್ತಿದ್ಧಾಳೆ. ಬೆದರಿಕೆ ಹೆದರಿರುವ ಗಂಢ ಹೆಂಡತಿ ತಮ್ಮಪುಟ್ಟ ಮಗು ಸಿಂಚಾಳೊಂದಿಗೆ ಈಗ ಮತ್ತೆ ಎಸ್ಪಿ ಮೊರೆಹೋಗಿದ್ಧಾರೆ.