ಪ್ರೀತಂಗೌಡ ಪ್ರಕರಣ : ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆ

ಬಿಜೆಪಿ ಶಾಸಕರ ಮನೆಯ ಮೇಲಿನ ಜೆಡಿಎಸ್‌ನ ಗೂಂಡಾಗಳ ದಾಳಿಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು. ಬಿಜೆಪಿಯ ಕಾರ್ಯಕರಗತರು ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು ಕುಮಾರಸ್ವಾಮಿ ಹಾಗೂ ಹೆಚ್ಡಿ ರೇವಣ್ಣ ವಿರುದ್ದ ಧಿಕ್ಕಾರ ಕೂಗಿದರು.ಗೂಂಡಾಗಿರಿ ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮನವಿ ಸಲ್ಲಿಸಿದರು.

ಹಾಸನದ ಬಿಜೆಪಿ ಶಾಸಕರಾದ ಪ್ರೀತಮ್ ಗೌಡರ ಮನೆಯ ಮೇಲೆ ಜೆಡಿಎಸ್ ಗೂಂಡಾಗಳು ಗುಂಪು ಕಟ್ಟಿಕೊಂಡು ಹೋಗಿ ಅಲ್ಲಿನ ನಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ಬಿಜೆಪಿ ಖಂಡಿಸುತ್ತದೆ . * ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಈ ರೀತಿಯ ಗೂಂಡಾ ಪ್ರವೃತ್ತಿಗೆ ಪ್ರೇರಣೆ ನೀಡುತ್ತಿರುವುದು ಹೇಯಕೃತ್ಯ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ವಿರೋಧ ಪಕ್ಷದ ನಾಯಕರ ಮನೆಗೆ ನುಗ್ಗಿ ಹಲ್ಲೆ ನಡೆಸಿದಾಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು . ಆದರೆ ಅವರ ವಿರುದ್ಧ ಯಾವುದೇ ರೀತಿಯ ಸರಿಯಾದ ಕ್ರಮ ತೆಗೆದುಕೊಳ್ಳದೇ ಇರುವುದು ಸರ್ಕಾರದ ಈ ರೀತಿಯ ಘಟನೆಗಳು ಮರುಕಳಿಸಲು ಪ್ರೇರಣೆಯಾಗಿದೆ . ಶಾಸಕರ ಮನೆಗೆ ರಕ್ಷಣೆ ಕೊಡದ ಪೋಲಿಸರ ಕರ್ತವ್ಯವನ್ನು ಪ್ರಶ್ನೆ ಮಾಡುವಂತಾಗಿದೆ . ಮಾನ್ಯ ಮುಖ್ಯ ಮಂತ್ರಿಗಳೇ , ಗೃಹ ಸಚಿವರೇ ತಕ್ಷಣ ಈ ಜೆಡಿಎಸ್ ಗೂಂಡಾಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು . ಈ ಒಂದು ಘಟನೆಗೆ ನೇರವಾಗಿ ಕಾರಣಿ ಭೂತರಾಗಿರುವ ಶ್ರೀ ಹೆಚ್ ಡಿ ರೇವಣ್ಣನವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು . ರಾಜ್ಯದಲ್ಲಿ ಕಾನೂನು ಸೂವ್ಯವಸ್ಥೆಯನ್ನು ಕಾಪಾಡಬೇಕು , – ಮುಖ್ಯಮಂತ್ರಿಗಳು ಈ ಹಿಂದೆ ಬಿಜೆಪಿ ವಿರುದ್ಧ ಧಂಗೆ ಹೇಳುವಂತೆ ಜನರಿಗೆ ಕರೆ ನೀಡಬೇಕಾದಿತು ಎಂದು ಹೇಳಿದ್ದರು ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರೇರಣೆಗೊಳ್ಳಲು ಇದೆ ಕಾರಣ . ಬಿಜೆಪಿಯ ಶಾಸಕರ ಮನೆಗೆ ಹಾಗೂ ಸಮಸ್ತ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಮತ್ತು ಬಂದೋಬಸ್ತ್ರ ಒದಗಿಸಲು ಕೋರಿಕೆ ಹಾಗೂ ತಕ್ಷಣವೇ ಕ್ರಮಕೈಗೊಳ್ಳದಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಹಾಗೂ ಎಲ್ಲಾ ಸಚಿವರ ಮನೆಯ ಮುಂದೆ ಧರಣಿ ಕುಳಿತುಕೊಳ್ಳಬೇಕಾಗುತ್ತದೆ .

ಎಂದು ಸುನೀಲ್ ಹೆಸರೂರು ಅದ್ಯಕ್ಷರು ಬಿಜೆಪಿ ನಗರ ಘಟಕ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಪಾಟೀಲ್, ಗವಿಸಿದ್ದಪ್ಪ ಕರಡಿ, ಶಿವಕುಮಾರ ಕುಕನೂರ, ಹೇಮಲತಾ ನಾಯಕ್, ಗಿರೀಶ ಜ್ಞಾನಸುಂದರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error