Sio ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ

ಕೊಪ್ಪಳ : ಕೊಪ್ಪಳದಲ್ಲಿಂದು ಎಸ್ ಐಓ ಘಟಕದವರು ವಿದ್ಯಾರ್ಥಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಕ್ರಿಯಾ ಖಾನ್, ಜೀಷಾನ್ ಅಖಿಲ್ ಸಿದ್ದಿಖಿ, ಮುಸ್ತಫಾ ನಾಲಬಂದ ಹಾಗೂ ಫಹದ್ ಹುಸೇನ್ ಮಾತನಾಡಿ

ರಾಷಾ ದ್ಯಂತ ಇಂದು ವಿದ್ಯಾರ್ಥಿ ಸಮುದಾಯ ಮತ್ತು ಯುವಕರು ಹತ್ತಾರು ಸಮರ್ಗ ಎದುರಿಸುತ್ತಿದ್ದಾರೆ . ಅದು ಸರಕಾರವಿರಲಿ ಅಥವಾ ಶಿಕ್ಷಣ ಸಂಸ್ಥೆಗಳಿರಲಿ ಯಾರೂ ಸಮಸ . ಬಗೆಹರಿಸಲು ಪ್ರಯತ್ನಿಸುತ್ತಿ ಸೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ( ಎಸ್ . ಐ . ಸಿ ) . ಕರ್ನಾಟಕವು ಚುನಾವಣಾ ವಿದ್ಯಾರ್ಥಿ ಪ್ರಣಾಳಿಕೆಯನ್ನು ತರುತ್ತಿದ್ದು ಮತ್ತು ಎಂದಿನಂತೆ ಸಾಮಾನ್ಯವಾಗಿ ಧರ್ಮ ಜಾತಿ ಅಧಾರದಲ್ಲಿ ದೇಶದ ಭವಿಷ್ಯದ ಬಗ್ಗೆ ತೀರ್ಮಾನ ಮಾಡದೆ ಸಮಾಜದ ನೈಜ ವಿಚಾರಗಳಾದ ಶಿಕ್ಷಣ , ಉದ್ಯೋಗ ಮತ್ತು ವಿದ್ಯಾರ್ಥಿ ಸಮಸೆಗಳ ಬಗ್ಗೆ ಸಮಾಜದಲ್ಲಿ ಚರ್ಚೆಗಳು ನಡೆದು ಆ ಮೂಲಕವಾಗಿ ರಾಜಕೀಯ ಪಕ್ಷಗಳು ಈ ಸಮಸ್ಯೆಗಳ ಕುರಿತು ಸಮಗ್ರ ಪರಿಹಾರಕ್ಕಾಗಿ ಕಾರ್ಯಪ್ರವೃತರಾಗಬೇಕಿದೆ . ಈ ಹಿನ್ನಲೆ ಐದು ಮುಖ್ಯ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಣಾಳಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ . ಶಿಕ್ಷಣ , ಉದ್ಯೋಗ , ಪರಿಸರ , ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಡಿಯಲ್ಲಿ ಅತೀ ಮುಖ್ಯವಾಗಿ ಅಗತ್ಯವಿರುವ ಮುಖ್ಯಾಂಶಗಳನ್ನು ಈ ವಿದ್ಯಾರ್ಥಿ ಪ್ರಣಾಳಿಕೆ ಚರ್ಚಿಸಿಸುತ್ತದೆ . ಶಿಕ್ಷಣದ ಭಾಗವಾಗಿ ಹಲವು ಶಿಕ್ಷಣ ಆಯೋಗಗಳ ಶಿಫಾರಸಿನಂತೆ ಶಿಕ್ಷಣದ ಮೇಲಿನ ವೆಚ್ಚದ ಪ್ರಮಾಣವನ್ನು GDPಯ ಶೇ . 8 % ಕ್ಕೆ ಏರಿಸಬೇಕೆಂಬುದು ನಮ್ಮ ಪ್ರಾಥಮಿಕ ಬೇಡಿಕೆಯಾಗಿದೆ . ಆರ್‌ . ಟಿ . ಇ ಕಾಯ್ದೆಯನ್ನು ಹುಟ್ಟಿನಿಂದ 18 ವಯಸ್ಸಿನ ವರೆಗೆ ವಿಸ್ತರಿಸಬೇಕು . ಆ ಮೂಲಕ ಎಲ್ಲಾ ಮಕ್ಕಳಿಗೆ ಬಾಲ ಪೂರ್ವ ಶಿಕ್ಷಣ ಲಭಿಸುವುದನ್ನು ಖಾತ್ರಿಪಡಿಸಬೇಕು ಮತ್ತು ಪ್ರಜ್ಞೆ ಅರಿವು ಮತ್ತು ಸಂವೇದನೆಯನ್ನು ಮತ್ತು ಆರೋಗ್ಯ ಹಾಗೂ ಪೌಷ್ಟಿಕತೆಯನ್ನು ಆರಂಭಿಕ ವಯಸ್ಸಿನಲ್ಲೇ ಬೆಳೆಸಲು ಪ್ರೋತ್ಸಾಹಿಸಿದಂತಾಗುತ್ತದೆ . ಮಕ್ಕಳ ಪೂರ್ವಭಾವಿ ಅವಕಾಶಕ್ಕಾಗಿ ಮತ್ತು ಸಮರ್ಥ ಅಭಿವೃದ್ಧಿಗಾಗಿ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೆರೆಹೊರೆ ಶಾಲೆಯು ನೀಡಬೇಕು . ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಕ್ಕೊಂದು ಶಾಲೆ ಪರಿಕಲ್ಪನೆಯಡಿಯಲ್ಲಿ ಶಾಲೆಗಳನ್ನು ಸ್ಥಾಪಿಸಬೇಕು . ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕೆಂದು ಎಸ್ . ಐ . ಓ ಪ್ರಣಾಳಿಕೆಯಲ್ಲಿ ಚರ್ಚಿಸಿದ . ಪ್ರಸ್ತುತ ಉದ್ಯೋಗ ಯುವಜನರ ಪ್ರಮುಖ ಚರ್ಚಾ ವಿಚಾರವಾಗಿದು ಆ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಕೌಶಲ್ಯ ಭಾರತ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆಯುವವರಿಗೆ ಪ್ರಮಾಣ ಪತ್ರ , ಓಪಂಡ್ ಮತ್ತು 100 % ಉದ್ಯೋಗ ಖಾತ್ರಿಯನ್ನು ನೀಡಬೇಕು . ಎಲ್ಲಾ ಸರಕಾರಿ ಮತ್ತು ಸಾರ್ವಜನಿಕ ಹುದ್ದೆಗಳನ್ನು ಭರ್ತಿ ಮಾಡಬೇಕು . ಮುಂದಿನ ಆರು ತಿಂಗಳ ಒಳಗಾಗಿ ಸರಕಾರದ ಎಲ್ಲಾ ಖಾಲಿ ಹುದ್ದೆಗಳು ಭರ್ತಿಯಾಗುವುದನ್ನು ಖಾತ್ರಿ ಪಡಿಸಬೇಕೆಂದು ಈ ಪ್ರಣಾಳಿಕೆಯ ಮೂಲಕ ಎಲ್ಲಿ ರಾಜಕೀಯ ಪಕ್ಷಗಳ ಗಮನ ಯುವಜನರತ್ತ ಸೆಳೆಯಲು ಯತ್ನಿಸಲಾಗಿದೆ . ಜನರನ್ನು ವ್ಯವಸ್ಥಿತವಾಗಿ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಿಂದ ವಂಚಿಸುವ ಕೆಲಸ ನಡೆಯುತ್ತಿದೆ . ಮುಖ್ಯವಾಗಿ ಈ ಮರ್ದಿತ ವರ್ಗಗಳು ಮುಖ್ಯಸ್ಥರದಲ್ಲಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಣಾಳಿಕೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ . ಅವುಗಳಲ್ಲಿ ಮುಖ್ಯವಾಗಿ ಜಸಿಸ್ ರಂಗನಾಥ ಮಿಶ್ರಾ ಸಮಿತಿಯ ವರದಿಯಂತೆ ಧಾರ್ಮಿಕ ಅಲ್ಪಸಂಖ್ಯಾತ ವಿಭಾಗಕ್ಕೆ ಸಾರ್ವಜನಿಕ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶೇ . 10 % ಮೀಸಲಾತಿಯನ್ನು ನೀಡಬೇಕು . ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳು – ಉದಾಹರಣೆಗೆ ಬೀದರ್ ಮುಂತಾದ ಕಡೆಗೆ ವಿಶೇಷ ಗಮನವನ್ನು ನೀಡಬೇಕು . ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳಾದ ಅಲೀಘಡ್ ಮುಸ್ಲಿಮ್ ಯುನಿವರ್ಸಿಟಿ ಮುಂತಾದವುಗಳ ಆಫ್ ಕ್ಯಾಂಪಸ್‌ಗಳನ್ನು ಉನ್ನತ ಶಿಕ್ಷಣದ ಲಭಿಸುವಿಕೆಗಾಗಿ ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳಲ್ಲಿ ಸ್ಥಾಪಿಸಬೇಕು , ಸಾರ್ವಜನಿಕ ಸೇವೆ ಅಲಸಂ ಶಿಕ್ಷಕರಿಗೆ ಶೇ . 10 % ಈ ಎಲ್ಲ ಬೇಡಿಕೆಯೊಂದಿಗೆ ಪರಿಸರದ ರಕ್ಷಣೆ ಕೂಡ ನಮ್ಮ ಪ್ರಧಾನ ಆದ್ಯತೆಯಾಗಬೇಕಾದ ಅವಶ್ಯಕತೆಯಿದೆ . ಪ್ರಸ್ತುತ ಪರಿಸರದ ರಕ್ಷಣೆ ಮುಖ್ಯ ಭೂಮಿಕೆಯಲ್ಲಿ ಚರ್ಚಿಸಲ್ಪಡುತ್ತಿರುವ ವಿಚಾರವಾಗಿದೆ . ಅದನ್ನು ಕೂಡ ಈ ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ಕೊಟ್ಟು ಚರ್ಚಿಸಲಾಗಿದೆ . ಮುಖ್ಯವಾಗಿಬತ್ತಿರುವ ಕೆರೆಗಳಲ್ಲಿ ಮತ್ತೆ ನೀರು ತುಂಬಿಕೊಳ್ಳುವಂತೆ ರಾಜ್ಯವು ಶ್ರಮಿಸಬೇಕು . ಉಪ ಮೇಲ್ಮ ಅಣೆಕಟ್ಟು , ಕರಾವಳಿ ಜಲಾಶಯಗಳು ಹೀಗೆ ಜಲ ಸಂರಕ್ಷಣೆಗಾಗಿ ಅನೇಕ ಪರ್ಯಾಯ ಮಾರ್ಗಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು . ಪರಿಸರ ಸಮಗ್ರತೆಯನ್ನು ಕಾಪಾಡಲು , ಸಿಹಿ ನೀರನ್ನು ಉಳಿಸಿಕೊಳ್ಳಲು ಮತ್ತು ಯೋಗ್ಯ ಪರಿಸರ ಸ್ಥಿತಿಯಲ್ಲಿ ಅವುಗಳನ್ನು ನಿರ್ವಹಿಸಲು ನದಿಗಳ ಒಳ ಹರಿವಿನ ಮೌಲ್ಯಮಾಪನವನ್ನು ಜಾರಿಗೊಳಿಸಬೇಕು . ದೇಶದಲ್ಲಿ ಎಲ್ಲಾ ಇಂಧನ ಬೇಡಿಕೆಯನ್ನು ಪೂರೈಸಲು ಸ್ವಚ್ಚ ಮರುಬಳಕೆಗೆ ಯೋಗ್ಯವಾದ ಮತ್ತು ಶೂನ್ಯ ಹೊಗೆಯ ಮೂಲಗಳನ್ನು 2050ರಲ್ಲಿ ಸಾಧಿಸುವ ಗುರಿಯನ್ನು ರಾಜ್ಯವು ಹೊಂದಬೇಕು . ಆ ಮೂಲಕ ವ್ಯಾಪಕವಾದ ಪರಿಸರ ಮತ್ತು ಆರ್ಥಿಕ ಬದಲಾವಣೆಯನ್ನು ತರಬಹುದು . ಆರ್ಥಿಕ ಬೆಳವಣಿಗೆ ಮತ್ತು ಪರಿಸರವು ಒಟೈಟಾಗಿ . ಸಂಚರಿಸುತ್ತದೆ , ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಬೇಡಿಕೆಗಳು * ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸರ್ಕಾರಿ ಉರ್ದು ಪಿಯು ಮತ್ತು ಡಿಗ್ರಿ ಕಾಲೇಜು ಗಳನ್ನು ಸ್ಥಾಪಿಸುವುದು . # ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಾನೂನು ಕಾಲೇಜ್ ಅನ್ನು ಪ್ರಾರಂಭಿಸುವುದು .ಆರ್ಟಿಕಲ್ ೩೭೧ ಜೆ ನ ಸಮರ್ಪಕವಾಗಿ ಅನುಷ್ಠಾನಗೊಳಿಸುವುದು . * ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಹಾಗೂ ರೈಲ್ವೆ ಪಾಸ್ ಅನ್ನು ನೀಡವುದು * ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ಸಾರಿಗೆ ಸಂಪರ್ಕ ಆರ ಶಾಲೆಗಳಿಗೆ ಉಚಿತ ಸಾರಿಗೆ ಸಂಪರ್ಕ ಹಾಗೂ ಮೂಲಭೂತ ಸೌಕರ್ಯವನ್ನು ಕಲ್ಪಿಸಿವುದು , * ಜಿಲ್ಲೆಯಲ್ಲಿರುವ ಕಾರ್ಖಾನೆಗಳಲ್ಲಿ ಮತ್ತು ಇತರ ಉದ , ಮಗಳಲಿ ಸಳೀಯರಿಗೆ ಪ್ರಥಮ ಆದ್ಯತೆ ಹಾಗೂ ಉದ್ಯೋಗ ಮೀಸಲಾತಿ ನೀಡುವುದು , * ಶಾಲಾ ಪ್ರದೇಶಗಳಲ್ಲಿರುವ ರಸ್ತೆಗಳ ಮೇಲೆ ಕಡಾಯವಾಗಿದೆ ಜೀಬ್ರಾ ಕ್ರಾಸಿಂಗ್ ಮತ್ತು ರಸ್ತೆ ತಡೆಯನ್ನು ಹಾಕಬೇಕು ಎಂದು ಆಗ್ರಹಿಸಿದರು.