fbpx

ಸಾವಿರ ದಾಟಿದ ಕರೋನಾ ಸೋಂಕಿತರು : ಇಂದು 79 ಪಾಜಿಟಿವ್

ಕೊಪ್ಪಳ : ಎರಡು ತಿಂಗಳ ಹಿಂದೆ ಒಂದೇ ಒಂದೂ ಪಾಜಿಟಿವ್ ಕೇಸ್ ಇರದಿದ್ದ  ಕೊಪ್ಪಳ ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ  ಸಾವಿರ ದಾಟಿದೆ. ಇಂದು 79 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.  ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಸಂಖ್ಯೆ 1046 ಮುಟ್ಟಿದೆ.

ಕೊಪ್ಪಳ ತಾಲೂಕಿನಲ್ಲಿ 11, ಗಂಗಾವತಿ ತಾಲೂಕಿನಲ್ಲಿ 47, ಕುಷ್ಟಗಿ ತಾಲೂಕಿನಲ್ಲಿ 13 ಮತ್ತು ಯಲಬುರ್ಗಾ ತಾಲೂಕಿನಲ್ಲಿ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಇಂದು 50 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.  ಇದುವರೆಗೆ ಜಿಲ್ಲೆಯಲ್ಲಿ ಡಿಸ್ಟಾರ್ಜ ಆದವರ ಸಂಖ್ಯೆ 644 ತಲುಪಿದೆ.  ಒಟ್ಟು 23 ಜನ ಸಾವನ್ನಪಿದ್ದಾರೆ. 192 ಜನ ವಿವಿಧ ಕೋವಿಡ್ ಪೆಸಿಲಿಟ್ ಸೆಂಟರ್ ಗಳಲ್ಲಿದ್ದಾರೆ. 116 ಜನ ಹೋಂ ಐಸೋಲೇಷನಲ್ಲಿದ್ಧಾರೆ. 72 ಜನರನ್ನು ಆಸ್ಪತ್ರೆಗೆ ಶಿಪ್ಟ್ ಮಾಡಲಾಗುತ್ತಿದೆ  ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ಧಾರೆ.

Please follow and like us:
error
error: Content is protected !!