ಮಹಾನ್ ಕ್ರಾಂತಿ ಕಾರಿ ಚಂದ್ರಶೇಖರ್ ಆಜಾದ್ ಹುತಾತ್ಮ ದಿನಾಚರಣೆ

Koppal :  ಕೊಪ್ಪಳದಲ್ಲಿ ಇಂದು ಚಂದ್ರಶೇಖರ್ ಆಜಾದ್ ರವರ 89ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ಶನಿವಾರ AIDSO. AIDYO ಜಂಟಿಯಾಗಿ ವಿದ್ಯಾರ್ಥಿ ಯುವಜನರು ಮತ್ತು ಕಾರ್ಮಿಕರು ಇವರೆಲ್ಲ ನೇತೃತ್ವದಲ್ಲಿ ನಡೆಯಿತು.
 ನಗರದ ಲೇಬರ್ ಸರ್ಕಲ್ ನಲ್ಲಿ  ಚಂದ್ರಶೇಖರ ಅಜಾದ್ ಅವರ ಭಾವಚಿತ್ರವನ್ನು ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗುತ್ತಾ ನಡೆಸಲಾಯಿತು.
 ಈ ಸಂದರ್ಭದಲ್ಲಿ ಎಐಡಿಎಸ್ ಓ ಸಂಚಾಲಕರಾದ ರಮೇಶ ವಂಕಲಕುಂಟ ಮಾತನಾಡಿ, ” ಇಡೀ ದೇಶದಲ್ಲಿ ಮಿಂಚಿನಂತೆ ಸಂಚರಿಸುತ್ತಿದ್ದ ಅಜಾದ್ ವಿದ್ಯಾರ್ಥಿ ಆಂದೋಲನದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಕಾಶಿಯಲ್ಲಿ ಯುವಕನೊಬ್ಬ ಪೊಲೀಸರಿಗೆ ಕಲ್ಲೆಸೆದು ಸಿಕ್ಕಿಕೊಂಡ, ಪೊಲೀಸರು ನ್ಯಾಯಧೀಶನ ಮುಂದೆ ಕಟಕಟೆಯಲ್ಲಿ ಹುಡುಗ ನನ್ನು ನಿಲ್ಲಿಸಿದರು. ನ್ಯಾಯಾಧೀಶರು ಕೇಳುತ್ತಾರೆ ‘ನಿನ್ನ ಹೆಸರೇನು?’  – ‘ಆಜಾದ್’ (ಸ್ವಾತಂತ್ರ ) ಎಂದು ಹೇಳಿದನು ಆ ಹುಡುಗ.  ‘ನಿನ್ನ ತಂದೆಯ ಹೆಸರೇನೆಂದು?’ ಕೇಳಿದಾಗ -‘ಸ್ವಾದೀನತ್ತೆ ‘ ಎಂದು, ‘ನಿನ್ನ ಮನೆ ಎಲ್ಲಿ ?’ ಎಂದಾಗ – ‘ಸೆರೆಮನೆ’ ಎಂದು ದಿಟ್ಟವಾಗಿ ನೇರವಾಗಿ ಉತ್ತರಿಸಿ ದವನೆ ಚಂದ್ರಶೇಖರ್ ಆಜಾದ್.”  ಎಂದು ಆಜಾದರ ಕುರಿತ ಸ್ವತಂತ್ರ ಹೋರಾಟದ ಕೆಚ್ಚನ್ನು ಅವರು ವಿವರವಾಗಿ ಹೇಳಿದರು.
 ಎ ಐ ಡಿ ವೈ ಓ ಜಿಲ್ಲಾ ಕಾರ್ಯದರ್ಶಿಗಳಾದ ಶರಣು ಗಡ್ಡಿ ಅವರು ಮಾತನಾಡಿ. ” ಬ್ರಿಟಿಷರನ್ನು ಓಡಿಸುವುದು ಅಷ್ಟೇ ಸ್ವಾತಂತ್ರ್ಯ ಹೋರಾಟದ ಮುಖ್ಯ ಗುರಿ ಅಲ್ಲ, ಬದಲಿಗೆ ಅವರು ಹೋದ ನಂತರ ಬರುವ ವ್ಯವಸ್ಥೆ ಬಡವ-ಶ್ರೀಮಂತ, ಮೇಲು-ಕೀಳು  ಜಾತಿ-ಧರ್ಮ, ದಿಂದ ಮುಕ್ತವಾಗಿರಬೇಕು ಎಂದು ಅಗಾಧವಾದ ಕನಸಾಗಿತ್ತು.  ಇಂದು 72 ವರ್ಷಗಳ ನಂತರ ಕೂಡ ಮತ್ತೆ ಧರ್ಮ ಜಾತಿ ಆಧಾರಿತ ರಾಜಕೀಯ ವಿಜೃಂಭಿಸುತ್ತಿದೆ. ಇಡೀ ದೇಶದಲ್ಲಿ ಆವರಿಸಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬೆಲೆ ಏರಿಕೆ, ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಅಧಿಕಾರಕ್ಕೆ ಬಂದ ಯಾವ ಪಕ್ಷಗಳು ಪರಿಹರಿಸಿಲ್ಲ.  ಶೋಷಣೆ ಆಧಾರದಮೇಲೆ ವ್ಯವಸ್ಥೆ ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಕೆಲವೇ ಕೆಲವು ಬಂಡವಾಳಶಾಹಿಗಳು ಸಂಪತ್ತು ಲೂಟಿ ಮಾಡಿ ತಮಗೆ ಬೇಕಾಗಿರುವ ಪಕ್ಷಗಳನ್ನು ಅಧಿಕಾರದಲ್ಲಿ ಕೂಡಿಸಿ ತಾವು ಮಾಡುವ ಅನ್ಯಾಯಗಳು ಗೊತ್ತಾಗಬಾರದೆಂದು ಅನವಶ್ಯಕವಾಗಿ ಜಾತಿ-ಧರ್ಮಗಳ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.”
ಎಂದು ಆರೋಪಿಸಿದರು.
 ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಾದ, ರಾಯಣ್ಣ  ಗಡ್ಡಿ ಮಂಜುಳಾ ಗಬ್ಬೂರ್. ವಿದ್ಯಾರ್ಥಿಗಳಾದ ಮುತ್ತಣ್ಣ, ಅರವಿಂದ್ , ವಿನಾಯಕ, ಶ್ರೀನಿವಾಸ್. ಯಲ್ಲಪ್ಪ ಹಾಗೂ ರೈತ ಕಾರ್ಮಿಕರು ಭಾಗವಹಿಸಿದ್ದರು
Please follow and like us:
error