24 ಗಂಟೆಗಳಲ್ಲಿ ಮೊಬೈಲ್ ಸುಲಿಗೆಕೋರರ ಬಂಧನ

ಕೊಪ್ಪಳ :  ರಸ್ತೆ ಮೇಲೆ ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದವರ ಮೊಬೈಲ್ ದೋಚಿ ಪರಾರಿಯಾಗಿದ್ದವರನ್ನು 24 ಗಂಟೆಯೊಳಗೆ ಬಂದಿಸುವಲ್ಲಿ ಕೊಪ್ಪಳ ಪೋಲಿಸರು ಯಶಸ್ವಿಯಾಗಿದ್ಧಾರೆ. ಆರೋಪಿತರು ಗಂಗಾವತಿಯ ಸದ್ದಾಂಹುಸೇನ, ಹಾಗೂ ಮಹ್ಮದ್ ಸಮೀ ನಿವಾಸಿಗಳು. ಭಾಗ್ಯನಗರ ರಸ್ತೆ ಸಾಯಿಬಾಬಾ ಗುಡಿ ಹತ್ತಿರ, ಬನ್ನಿ ಕಟ್ಟೆ ಏರಿಯಾ , ತಾಲೂಕಾ ಕ್ರಿಡಾಂಗಣದ ಬಳಿ ಜನರಿಂದ ಮೊಬೈಲ್ ಗಳನ್ನು ಕಿತ್ತುಕೊಂಡು ಹೋಗಿದ್ದರು ಎನ್ನಲಾಗಿದೆ ಇದಕ್ಕೆ ಸಂಬಂದಪಟ್ಟಂತೆ ದೂರು ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ನಗರ ಠಾಣೆಯ ಪಿಐ ಪ್ರಕಾಶ ಮಾಳಿ, ಹಾಗೂ ಚಂದ್ರಪ್ಪ ಪಿಎಸ್ಐ, ಶ್ರೀಮತಿ ಫಕೀರಮ್ಮ ನೇತೃತ್ವದ   ದೇವಂದ್ರಪ್ವ ಪಿಸಿ 12,ಖಾಜಾಸಾಬ ದಫೆದಾರ ಹೆಚಿ ಸಿ. 96  ಸುಭಾಸ ಹೆಚಸಿ-11, ರವಿಚಂದ್ರ ಹೆಚಿಸಿ-08,  ಕೊಟೇಶ ಹೆಚ ಸಿ. 5,  ಕಾಸಿಂಸಾಬ. ಹೆಚ್ಚಸಿ 172, ಯಲ್ಲಪ್ಪ ಹೆಚಸಿ-239, ಮಂಜುನಾಥ ಪಿಸಿ 22,  ಚನ್ನಪ್ಪ ಸಿಹೆಟಸಿ 100, ನಿರುಪಾದೆಪ್ಪ ಪಿಸಿ 28, ಅಮರೇಶ ಎಷಿಸಿ-186,  ಮರಿಯಪ್ಪ ಎ.ಸಿ, 16, ದುರುಗಪ್ಪ ತಂಡ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅವರಿದಂದ 6 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Please follow and like us:
error