14 ಕೋಟಿ ಪರಿಹಾರ ಹಣ ರಾಜಿ- 3316 ಪ್ರಕರಣಗಳ ಇತ್ಯರ್ಥ : ಮೇಗಾ ಲೋಕ್ ಅದಾಲತ್

ಜಾಹೀರಾತು- AM Traders Jindal CPVC PVC Pipes Fittings Koppal

ಕೊಪ್ಪಳ,  : ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ (ಮಾ. 27) ಆಯೋಜಿಸಲಾಗಿದ್ದ “ಮೇಗಾ ಲೋಕ್ ಅದಾಲತ್” ಕಾರ್ಯಕ್ರಮವು ಜಿಲ್ಲೆಯಾದ್ಯಂತ ಜರುಗಿದ್ದು, ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು ಸೇರಿದಂತೆ ಒಟ್ಟು 3316 ಪ್ರಕರಣಗಳು ಇತ್ಯರ್ಥಗೊಂಡಿವೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದ ಮೇರೆಗೆ ಶನಿವಾರದಂದು (ಮಾರ್ಚ್ 27ರಂದು) ಜಿಲ್ಲೆಯ ಗಂಗಾವತಿ, ಕುಷ್ಟಗಿ ಯಲಬುರ್ಗಾ ಮತ್ತು ಕೊಪ್ಪಳ ನ್ಯಾಯಾಲಯಗಳಲ್ಲಿ “ಮೇಗಾ ಲೋಕ್ ಆದಾಲತ್‌ನ್ನು“ ವಿದ್ಯುನ್ಮಾನದ ಮೂಲಕ ಏರ್ಪಡಿಸಲಾಗಿತ್ತು.  ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿರುವ ಚಾಲ್ತಿ ಪ್ರಕರಣಗಳು ಹಾಗೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಮೋಟಾರು ವಾಹನ ಅಪಘÁತ ಪರಿಹಾರ ಪ್ರಕರಣಗಳು-42, ಸಿವಿಲ್ ಪ್ರಕರಣಗಳು-419, ರಾಜೀ ಆಗಬಹÅದಾದ ಕ್ರಿಮಿನಲ್ ಪ್ರಕರಣಗಳು-104, ಚೆಕ್ ಬೌನ್ಸ್ ಪ್ರಕರಣಗಳು-108, ಇತರೆ ಕ್ರಿಮಿನಲ್ ಪ್ರಕರಣಗಳು-2018, ವ್ಯಾಜ್ಯ ಇತರಪೂರ್ವ ಪ್ರಕರಣಗಳು-355, ವಿದ್ಯುತ್/ ನೀರಿನ ಬಿಲ್ ಪ್ರಕರಣಗಳು-17 ಹಾಗೂ ಇತರೆ ಪ್ರಕರಣಗಳು-253, ಸೇರಿ ಒಟ್ಟು 3316 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿ ಒಟ್ಟು ರೂ. 14,06,86,899 ಮೊತ್ತದ ಪರಿಹಾರ ಹಣಕ್ಕೆ ರಾಜೀ ಮಾಡಲಾಯಿತು ಎಂದು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಲ್. ವಿಜಯಲಕ್ಷಿö್ಮÃದೇವಿ ಹಾಗೂ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಟಿ.ಶ್ರೀನಿವಾಸ ಅವರು ತಿಳಿಸಿದ್ದಾರೆ.
ಲೋಕ್ ಅದಾಲತ್‌ಗೆ ಸಹಕರಿಸಿದ ಜಿಲ್ಲೆಯ ಎಲ್ಲ ನ್ಯಾಯಾಧೀಶರುಗಳಿಗೆ, ಸಂಧಾನಕಾರರಿಗೆ, ವಕೀಲರ ಸಂಘಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳಿಗೆ, ಬ್ಯಾಂಕ್ ಹಾಗೂ ಇನ್ಸೂರೆನ್ಸ ಕಂಪನಿ ಮ್ಯಾನೇಜರ್‌ಗಳಿಗೆ, ಕಕ್ಷಿದಾರರಿಗೆ ಮತ್ತು ನ್ಯಾಯಾಲಯಗಳ ಸಿಬ್ಬಂದಿಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ

Please follow and like us:
error