೩ ಕೃತಿಗಳು ಬಹುಮಾನ ಪ್ರಶಸ್ತಿಗೆ ಆಯ್ಕೆ

ಕೊಪ್ಪಳ: ವಿಶಾಲ ಪ್ರಕಾಶನ ಮಾದಿನೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನ ಕೃತಿಗಳನ್ನು ಅಹ್ವಾನಿಸಲಾಗಿತ್ತು ಒಟ್ಟು ೯೫ ಪುಸ್ತಕಗಳು ಆಯ್ಕೆಗಾಗಿ ಬಂದಿದ್ದವು. ೨೦೧೮, ೨೦೧೯ ಹಾಗೂ ೨೦೨೦ರ ಮೂರು ವರ್ಷ ಪುಸ್ತಕಗಳನ್ನು ಆಯ್ಕೆ ಸಮಿತಿಗೆ ಒಪ್ಪಿಸಲಾಗಿತ್ತು. ಆ ಸಮಿತಿಯ ನಿರ್ಣಯದಂತೆ ೩ ಕೃತಿಗಳು ಬಹುಮಾನ ಪ್ರಶಸ್ತಿಗಾಗಿ ಆಯ್ಕೆಯಾಗಿವೆ.
ಪ್ರಥಮ ಬಹುಮಾನಕ್ಕೆ ಮರಣ ಮೃದಂಗ ಸ್ವಾತಂತ್ರ್ಯ ಹೊರಾಟಗಾರರ ದುರಂತ ಕಥೆಗಳು ಎಂಬ ಲೇಖಕರಾದ ಶಶಿಧರ ಉಬ್ಬಳಗುಂಡಿಯವರ ಪುಸ್ತಕ ಆಯ್ಕೆಯಾಗಿದೆ.
ದ್ವೀತಿಯ ಬಹುಮಾನ ಪ್ರಶಸ್ತಿಗಾಗಿ ಭಾರತಲೋಕ (ನನ್ನ ಗ್ರಹಿಕೆಯಲ್ಲಿ ಭಾರತ) ಲೇಖಕಿಯರಾದ ಶ್ರೀಮತಿ ವಿನೂತಾ ಅಂಚಿನಮನಿಯವರ ಕೃತಿಯು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿದೆ.
ತೃತೀಯ ಬಹುಮಾನ ಪ್ರಶಸ್ತಿಗಾಗಿ ಮೂರನೆ ಮಹಾಯುದ್ಧ ಲೇಖಕರಾದ ವೀರಶೆಟ್ಟಿ ಎಂ.ಪಾಟೀಲ್ ಇವರ ಕವನ ಸಂಕಲನ ಆಯ್ಕೆಯಾಗಿದೆ.
ಈ ಮೇಲೆ ಆಯ್ಕೆಯಾದ ಮೂವರು ಲೇಖಕರನ್ನು ಇದೇ ದಿ:೨೭-೦೩-೨೦೨೧ ಕೊಪ್ಪಳದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ‘ಕರುನಾಡ ಚೇತನ ಪ್ರಶಸ್ತಿ’ ಮತ್ತು ಬಹುಮಾನ ನೀಡಿ ಸತ್ಕರಿಸಲಾಗುವುದು ಎಂದು ವಿಶಾಲ ಪ್ರಕಾಶನ ಮಾದಿನೂರು ಇದರ ಪ್ರಕಾಶಕ ಜಿ.ಎಸ್.ಗೋನಾಳ   ತಿಳಿಸಿದ್ದಾರೆ.

Please follow and like us:
error