೩೦ ನೇ ದಿನಕ್ಕೆ ಪಾದರ್ಪಣೆ ಮಾಡಿದ ಹಿರೇಹಳ್ಳ ಪುನಶ್ಚೇತನ ಕಾರ್ಯ


ಕೊಪ್ಪಳ- ಹಿರೇಹಳ್ಳ ಪುನಶ್ಚೇತನ ಕಾರ್ಯವು ಇಂದಿಗೆ ಮೂವತ್ತನೇ ದಿನಕ್ಕೆ ಪಾದರ್ಪಣೆ ಮಾಡಿದ್ದು ಇಂದು ಡೊಂಬರಹಳ್ಳಿ. ಹಿರೇಸಿಂದೋಗಿ. ದದೇಗಲ್ ಬ್ರಿಡ್ಜ. ಭಾಗ್ಯನಗರ ಮಾದಿನೂರ. ಓಜಿನಹಳ್ಳಿ. ಬೂದಿಹಾಳ ಹಿರೇಹಳ್ಳ ಪ್ರದೇಶಗಳಲ್ಲಿ ಪುನಶ್ಚೇತನ ಕಾರ್ಯಗಳು ಭರದಿಂದ ಸಾಗಿವೆ. ಇಂದು ಪುನಶ್ಚೇತನ ಕಾರ್ಯದಲ್ಲಿ ೩೨ ಹಿಟ್ಯಾಚಿ. ೨೦ ಡೋಜರ್. ಒಟ್ಟು ೫೨ ಯಂತ್ರಗಳನ್ನು ಪುನಶ್ಚೇತನ ಕಾರ್ಯದಲ್ಲಿ ಬಳಸಿಕೊಳ್ಳಲಾಯಿತು.

ಹಿರೇಹಳ್ಳಕ್ಕೆ ಬೆಂಗಳೂರಿನ ನದಿಗಳ ಪುನರುತ್ಥಾನ ಯೋಜನೆಗಳ ರಾಷ್ಟ್ರೀಯ ನಿರ್ದೇಶಕರಾದ ಆರ್ಟ ಆಪ್ ಲಿವಿಂಗ್ ನ ಲಿಂಗರಾಜು ಯಾಳೆ ಬೇಟಿ.
ಕೊಪ್ಪಳ- ನಗರದ ಶ್ರೀ ಗವಿಮಠದ ಪೂಜ್ಯರಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನ ನಡೆಯುವ ಸ್ಥಳಕ್ಕೆ ಪರಿಸರ ತಜ್ಞರು.ನೀರಾವರಿ ತಜ್ಞರು ಬೇಟಿ ನೀಡುತಿದ್ದು ಇಂದು ಬೆಂಗಳೂರಿನ ನದಿಗಳ ಪುನರುತ್ಥಾನ ಯೋಜನೆಗಳ ರಾಷ್ಟ್ರೀಯ ನಿರ್ದೇಶಕರಾದ ಆರ್ಟ ಆಪ್ ಲಿವಿಂಗ್ ನ ಲಿಂಗರಾಜು ಯಾಳೆ. ರವೀಂದ್ರ ದೇಸಾಯಿ. ಉದಯಕುಮಾರ ಕೊಳ್ಳಿಮಠ. ಸಿರಸಿಯ ಪರಿಸರ ತಜ್ಞರಾದ ಶಿವಾನಂದ ಕಳವೆ. ಕೃಷಿ ವಿಸ್ತರಣಾ ಮುಂದಾಳು ಎಂ.ಬಿ.ಪಾಟೀಲ್ ಅವರು ಸಿಂದೋಗಿ ಭಾಗ್ಯನಗರ .ಓಜಿನಹಳ್ಳಿ. ಡೊಂಬರಹಳ್ಳಿ. ಬೂದಿಹಾಳ ಹಿರೇಹಳ್ಳ ಪುನಶ್ಚೇತನ ನಡೆಯುವ ಪ್ರದೇಶಗಳಿಗೆ ಬೇಟಿ ನೀಡಿ ಪೂಜ್ಯರು ಕೈಗೊಂಡಿರುವ ಬಹುಪಯೋಗಿ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ರಮದ ಕುರಿತು ಮಾಹಿತಿ ಪಡೆದರು. ಇಷ್ಟು ಕಡಿಮೆ ಅವಧಿಯಲ್ಲಿ ಪುನಶ್ಚೇತನ ಕಾರ್ಯವು ಪ್ರಗತಿ ಸಾಗಿರುವದನ್ನು ಮನಗಂಡು ಪೂಜ್ಯರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಕಾರ್ಯಯೋಜನೆಗಳ ಕುರಿತು ಪೂಜ್ಯರೊಂದಿಗೆ ಚರ್ಚಿಸಿದರು.

Please follow and like us:
error