ಹ ಕೇಂದ್ರ ಕಾರ್ಮಿಕ ಸಂಘಟನೆ  AIUTUC ಜಿಲ್ಲಾ ಮಟ್ಟದ ಕಾರ್ಮಿಕರ  ಅಧ್ಯಯನ  ಶಿಬಿರ

ಕೊಪ್ಪಳದ ಹುಲಿಗಿ  ಗ್ರಾಮದಲ್ಲಿ  ಕೇಂದ್ರ ಕಾರ್ಮಿಕ ಸಂಘಟನೆ  AIUTUC  ನೇತೃತ್ವದಲ್ಲಿ   19, 20  ರಂದು  ಎರಡು  ದಿನಗಳ  ಕೊಪ್ಪಳ ಜಿಲ್ಲಾ ಮಟ್ಟದ ಕಾರ್ಮಿಕರ  ಅಧ್ಯಯನ  ಶಿಬಿರವನ್ನು  ಹಮ್ಮಿಕೊಳ್ಳಲಾಯಿತು…
ಈ ಶಿಬಿರದಲ್ಲಿ  ಪ್ರಸ್ತುತ  ಸಾಮಾಜಿಕ ರಾಜಕೀಯ ,  ಸಾಂಸ್ಕೃತಿಕ   ಪರಿಸ್ಥಿಯ ಹಿಂಜರಿತ, ನಿರುದ್ಯೋಗ, ಸ್ಕೀಮ್ ನೌಕರರ, ಸಮಸ್ಯೆಗಳು ಹಾಗೂ ಒಂದು ಸೈಧಾಂತಿಕ ವಿಚಾರಗಳ  ಬಗ್ಗೆ  ಚರ್ಚಿಸಲಾಯಿತು. ನಾಲ್ಕು  ವಿವಿಧ  ವಿಷಯಗಳ  ಬಗ್ಗೆ ವಿಸ್ತೃತತವಾದ ಚರ್ಚೆಗಳು  ನಡೆದವು. ಮೊದಲನೆಯ  ದಿನ ನಡೆದ  ಚರ್ಚೆಗಳು 1. ಮಾನವ  ಸಮಾಜ  ಬೆಳೆದು  ಬಂದ  ಬಗೆ  ಈ  ಗೋಷ್ಠಿಯನ್ನು SUCI(ಕಮ್ಯುನಿಸ್ಟ್ ) ಪಕ್ಷದ  ಬಳ್ಳಾರಿ  ಜಿಲ್ಲೆಯ  ಕಾರ್ಯದರ್ಶಿಗಳಾದ  ಕಾ. ರಾಧಾಕೃಷ್ಣ  ಉಪಾಧ್ಯಾಯ ನಡೆಸಿಕೊಟ್ಟರು..  ಮನುಷ್ಯ ಜೀವಿ ಬೆಳೆದು ಬಂದ ಹಾದಿ  ಮುಂದುವರೆದು, ಗುಲಾಮಗಿರಿ,ಉಳಿಗ ಮಾನ್ಯ, ಜಮೀನ್ದಾರ್ಪದ್ಧತಿ, ಇಂದು ಬಂಡವಾಳ ಶಾಹಿ ಶೋಷಣೆ ಸಮಾಜ ಇದ್ದೇವೆ ಶೋಷಣೆರಹಿತ ಸಮಾಜ ನಮ್ಮ ಗುರಿ ಎಂದು ಕರೆ ನೀಡಿದರು.ವಿವಿಧ ಗೋಷ್ಠಿಗಳಾದ .2) .ಪ್ರಸಕ್ತ ರಾಜಕೀಯ  ಪರಿಸ್ಥಿತಿ  ಮತ್ತು  AIUTUC ಒಂದೇ  ನೈಜ ಕಾರ್ಮಿಕ  ಸಂಘಟನೆ  ಏಕೆ.?  AIUTUC ಸಂಘಟನೆಯ  ರಾಜ್ಯ  ಕಾರ್ಯದರ್ಶಿಗಳಾದ  ಕಾ. ಸೋಮಶೇಖರ್  ನಡೆಸಿಕೊಟ್ಟರು…
ಎರಡನೇ  ದಿನದ  ಮೊದಲ  ಗೋಷ್ಠಿ  ಮಹಿಳೆಯರ  ಸಮೆಸ್ಯೆಗಳು  ಮತ್ತು  ಸಮಾಜವಾದದಲ್ಲಿ  ಮಹಿಳೆ  ಈ  ವಿಷಯದ  ಕುರಿತು  AIMSS  ಸಂಘಟನೆಯ  ರಾಜ್ಯ  ಕಾರ್ಯದರ್ಶಿಗಳಾದ  ಕಾ. ಶೋಭಾ  ಮಾತನಾಡಿದರು…   ಕೊನೆಯ ಗೋಷ್ಠಿ  ಸ್ಕೀಮ್ ವರ್ಕರ್ಸ್ ಹಾಗು ಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು   ಕುರಿತು   ಕಾ.ನಾಗಲಕ್ಷ್ಮಿ.ಡಿ ಮಾತನಾಡಿದರು   ( ರಾಜ್ಯ  ಕಾರ್ಯದರ್ಶಿಗಳು,  ಕರ್ನಾಟಕ  ರಾಜ್ಯ  ಸಂಯುಕ್ತ   ಆಶಾ  ಕಾರ್ಯಕರ್ತೆಯರ  ಸಂಘ ).ಜಿಲ್ಲಾ ಅಧ್ಯಕ್ಷರಾದ ಶರಣು ಗಡ್ಡಿ  ಜಿಲ್ಲಾ ಕಾರ್ಯದರ್ಶಿಗಳಾದ ಕೌಶಲ್ಯ ಶಿಬಿರವನ್ನು ಆಯೋಜಿಸಿದ್ದರು.  ಈ  ಶಿಬಿರದಲ್ಲಿ  ಜಿಲ್ಲೆಯ  150 ಕ್ಕೂ  ಹೆಚ್ಚು  ಜನ ಸಂಘಟನೆಯ  ಕಾರ್ಯಕರ್ತರು   ಭಾಗವಸಿದ್ದರು. ಶಿಬಿರದಲ್ಲಿ  ಮಾರ್ಚ್  22 ಕನ್ನಡ  ಸಿನೆಮಾ  ಪ್ರದರ್ಶನ,   ಆಟ  ಹಾಗೂ  ಮನರಂಜನೆಯ   ಕಾರ್ಯಕ್ರಮಗಳು ಇದ್ದವು…
.
Please follow and like us:
error