ಹೊಸ ವರ್ಷಕ್ಕೆ ಜಿಲ್ಲೆಗೆ ಪಾಸ್ ಪೊರ್ಟ ಸೇವಾ ಕೇಂದ್ರ ಜಾರಿ : ಸಂಸದ ಕರಡಿ ಸಂಗಣ್ಣ

dav

ಅಂಚೆ ಸಹಾಯದಿಂದ ಹಳ್ಳಿಯಿಂದ ದಿಲ್ಲಿಯವರೆಗೆ ಸಂಪರ್ಕ|

ಕೊಪ್ಪಳ, ಡಿ.೨೪: ಅಂಚೆ ಇಲಾಖೆಯಿಂದ ಹಳ್ಳಿಯಿಂದ ದಿಲ್ಲಿಯವರೆಗೂ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರ ಇಲಾಖೆಗೆ ಆಧುನಿಕ ಸ್ಪರ್ಷ ನೀಡಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಅವರು ಕೊಪ್ಪಳ ಬಜಾರ ಉಪ ಅಂಚೆ ಕಛೇರಿಯ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದರು. ಇಂದು ತಂತ್ರಜ್ಞಾನ ಅಭಿವೃದ್ಧಿಯಿಂದ ಸಾರ್ವಜನಿಕರು ಅಂಚೆ ಇಲಾಖೆಯ ಸೇವೆ ಪಡೆಯಲು ವಿಫಲವಾಗಬಾರದು ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಲಾಖೆಗೆ ಆಧುನಿಕ ಸ್ಪರ್ಷ ನೀಡಿ ಕೇವಲ ಪತ್ರ ವ್ಯವಹಾರವಷ್ಟೆ ಅಲ್ಲದೇ ಬ್ಯಾಂಕಿಕ್ ವ್ಯವಸ್ಥೆ, ವಿಮಾ ಯೋಜನೆ, ವಿವಿಧ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಗೆ ಅನುವುಮಾಡಿ ನಾಗರಿಕರ ಸದ್ಬಳಕೆಗೆ ನೀಡಿದ್ದಾರೆ. ಅದೇ ರೀತಿ ಒಬ್ಬ ಹವಾಯಿ ಚಪ್ಪಲ ಧರಿಸುವ ಸಾಮನ್ಯ ವ್ಯಕ್ತಿಯು ಕೂಡಾ ವಿಮಾನಯಾನ ಮಾಡಬೇಕು ಎಂದು ಮಹತ್ತರ ಆಸೆ ಹೊಂದಿದ ಪ್ರಧಾನಿ ಮೋದಿಯವರು ಇದು ಉಡಾನ್ ಯೋಜನೆ ಜಾರಿ ಮಾಡಿದ್ದಾರೆ. ಯೋಜನೆಯಲ್ಲಿ ಶೇ.೮೫ ರಷ್ಟು ಕೇಂದ್ರದ ಪಾಲಿದ್ದು, ಉಳಿದ ಶೇ.೧೫ ರಷ್ಟು ರಾಜ್ಯ ಸರ್ಕಾರದ ಪಾಲಾಗಿದೆ. ರಾಜ್ಯ ಸರ್ಕಾರ ಆಸಕ್ತಿವಹಿಸದ ಕಾರಣ ಜಿಲ್ಲೆಯ ನಮ್ಮ ಶಾಸಕರ ನೇತೃತ್ವದಲ್ಲಿ ಈಗಾಗಲೇ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ರಾಜ್ಯ ಸರ್ಕಾರದಿಂದ ಎಮ್.ಓ.ಯು ಮಾಡಿಕೊಂಡು ಸ್ಥಳೀಯ ಬಲ್ಡೊಟಾ ಕಂಪನಿಯ ನೇರವಿನಿಂದ ಈ ಯೋಜನೆ ಅನುಷ್ಠಾನಕ್ಕಾಗಿ ಮನವಿ ಮಾಡಲಾಗಿದೆ. ಹಾಗೂ ಬಹುದಿನಗಳ ಬೇಡಿಕೆಯಾದ ಪಾಸ್ ಪೋರ್ಟ ಸೇವಾ ಕೇಂದ್ರವು ಜಾರಿಯಾಗಿದ್ದು, ಹೊಸ ವರ್ಷದ ಪ್ರಾರಂಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಜಾರಿ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಅಂಚೆ ಇಲಾಖೆಯ ಉಪ ಅಂಚೆ ಕಛೇರಿಗಳನ್ನು ಉನ್ನತಿಕರೀಸಲು, ಡಿವಿಜನ್ ಕಛೇರಿ, ಸಾರ್ಟಿಂಗ್ ಕಛೇರಿ ಪ್ರಾರಂಭಿಸಲು ಶ್ರಮಿಸಲಾಗುವುದು ಎಂದರು. ಚಳಗೇರಿ, ಸಿದ್ದಾಪುರದಲ್ಲಿ ಶಿಘ್ರದಲ್ಲಿ ಕಛೇರಿ ಪ್ರಾರಂಭಿಸಲಾಗುವುದು. ಹಾಗೂ ಗ್ರಾಮೀಣ ಭಾಗದಲ್ಲಿ ಅಂಚೆ ಕಛೇರಿಗಳ ಸ್ಥಿತಿ ಚಿಂತಾಜನಿಕವಾಗಿದ್ದು, ಸೂಕ್ತ ಕಟ್ಟಡ, ಸೌಕರ್ಯಗಳಿಲ್ಲದೇ ನಿರ್ವಹಣೆಗೆ ತೊಂದರೆಯಾಗುತ್ತಿದ್ದು, ಕೇಂದ್ರ ಸರ್ಕಾರ ಕಾಳಜಿವಹಿಸಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲು ಮುಂದೆ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಸಿ.ಡಿ ಗೀತಾ, ಮುಖಂಡರಾದ ರಾಘವೇಂದ್ರ ಪಾನಗಂಟಿ, ನಿವೃತ್ತ ಪ್ರಾಚಾರ್ಯರಾದ ಡಾ|| ಅಲ್ಲಮಪ್ರಭು ಬೆಟದೂರ ಮಾತನಾಡಿದರು.
ಉಪ ಅಂಚೆ ಕಛೇರಿ ಕಾರ್ಯಪಾಲಕರಾದ ಜಿ.ಎನ್ ಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂಚೆ ನಿರೀಕ್ಷಕರಾದ ಷಣ್ಮುಕಪ್ಪ ಶಿರಟ್ಟಿ, ಅಂಚೆ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ನಗರಸಭೆ ಸದಸ್ಯೆ ವಿದ್ಯಾ ಸುನೀಲ್ ಹೆಸರೂರ, ನಿವೃತ್ತ ಪ್ರಾಚಾರ್ಯ ಡಾ|| ಮಹಾಂತೇಶ ಮಲ್ಲನಗೌಡರ, ಮುಖಂಡರಾದ ಹಾಲೇಶ ಕಂದಾರಿ, ವಿರುಪಾಕ್ಷಯ್ಯ ಗದುಗಿನಮಠ, ಶಿವಕುಮಾರ ಕುಕನೂರ, ಇಲಾಖೆಯ ಸಿಬ್ಬಂದಿಗಳಾದ ಹನುಮಂತರಾವ್ ಕುಲಕರ್ಣಿ, ಶಾಂತಕ್ಕ ಹಿರೇಮಠ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಶಿಧರ ಪಾಟೀಲ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಉಪಸ್ಥಿತರಿದ್ದರು.

Please follow and like us:
error