ಹೊಸ ಮಾರ್ಗಸೂಚಿ,ಆದೇಶದಂತೆ ಅಂಗಡಿಗಳನ್ನು ಬಂದ್ ಮಾಡಿಸಿದ ನಗರಸಭೆ ಅಧಿಕಾರಿಗಳು

ಕೊಪ್ಪಳ : ಕರೋನಾ ಸೋಂಕು ಹೆಚ್ಚಳ ಹಿನ್ನೆಲೆ ಇಂದು ನಗರದಲ್ಲಿ ನಗರಸಭಾ ಅಧಿಕಾರಿಗಳು ಅಂಗಡಿಗಳನ್ನು ಬಂದ್ ಮಾಡಿಸಿದರು. ರಾಜ್ಯ ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ, ಆದೇಶದಂತೆ ಜವಾಹರ ರಸ್ತೆ ಸೇರಿದಂತೆ ಮಾರುಕಟ್ಟೆಯಲ್ಲಿ ತೆರೆಯಲಾಗಿದ್ದ ಜೀವನಾವಶ್ಯಕ ಅಗತ್ಯ ವಸ್ತುಗಳ ಅಂಗಡಿಗಳನ್ನು  ಹೊರತು ಪಡಿಸಿ ಇತರೆ ಅಂಗಡಿಗಳನ್ನು ಪೋಲಿಸರ ಸಮ್ಮುಖದಲ್ಲಿ ಬಂದ್ ಮಾಡಿಸಲಾಯಿತು.

ನಿನ್ನೆ ಮಧ್ಯಾಹ್ನವೂ ಸಹ ಕೊಪ್ಪಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.  ಆದರೆ ಬೆಳಗಿನಿಂದಲೇ ಮತ್ತೆ ಮಾರುಕಟ್ಟೆ ಪ್ರದೇಶದಲ್ಲಿ ಬಟ್ಟೆ ಅಂಗಡಿ, ಚಿನ್ನದ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿಗಳು ಓಪನ್ ಆಗಿದ್ದವು. ಇದನ್ನು ಗಮನಿಸಿದ ಅಧಿಕಾರಿಗಳು ಇಂದು ಅಂಗಡಿಗಳನ್ನು ಬಂದ್ ಮಾಡಿಸಿದರು. ನಿನ್ನೆ ತಡರಾತ್ರಿಯವರೆಗೂ ತೆರೆದಿದ್ದ ಬಟ್ಟೆ ಅಂಗಡಿಗೆ 5 ಸಾವಿರ ದಂಡ ಹಾಕಲಾಗಿದೆ.  ನಗರಸಭೆ ಅಧಿಕಾರಿಗಳು,ತಹಶೀಲ್ದಾರ ನೇತೃತ್ವದಲ್ಲಿ  ಅಂಗಡಿಯವರಿಗೆ ದಂಡ ಹಾಕಲಾಗಿದೆ

ರಾತ್ರಿ ಬಂದ್ ಆಗಬೇಕಿದ್ದ ಅಂಗಡಿ ಮುಂಗಟ್ಟುಗಳು ಮಧ್ಯಹ್ನಕ್ಕೆ ಬಂದ್,ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಅಂಗಡಿಮುಂಗಟ್ಟುಗಳು ಬಂದ್ ಪುರಸಭೆ ಅಧಿಕಾರಿಗಳಿಂದ ಅಂಗಡಿಗಳು ಮುಚ್ಚುವಂತೆ ಪ್ರಚಾರ  ಮಾಡಲಾಗಿದೆ

 

 

Please follow and like us:
error