ಹೊಸಪೇಟೆ ಹರಿಹರ ರೈಲಿಗೆ ಚಾಲನೆ

ಹೊಸಪೇಟೆ : ಬಹುದಿನಗಳ ಬೇಡಿಕೆಯಾದ  ಹರಿಹರ ನೂತನ ರೈಲ್ವೇಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು. ಈ ಭಾಗದ ಜನರ ಎರಡೂವರೆ ದಶಕದ‌ ಕನಸು ಮತ್ತು ಬೇಡಿಕೆ ಇಂದು ಈಡೇರಿತು.  ಚಾಲನೆ ನೀಡಿ ಮಾತನಾಡಿದ ಸಚಿವರು ಹೊಸಪೇಟೆ ಹರಿಹರ ನೂತನ ರೈಲ್ವೇ ಸಂಚಾರ ಪ್ರಾರಂಭದಿಂದ ರೈತರಿಗೆ ಕೈಗಾರಿಕೆಗಳಿಗೆ ಬಡ ಜನಗಳಿಗೆ ತುಂಬಾ ಅನುಕೂಲ ಆಗುತ್ತದೆ ಈ ಬಾಗದ ಜನಗಳಿಗೆ ಅಭಿನಂದನೆ ಸಲ್ಲಿಸಬೇಕು ಹೋರಾಟದ ಫಲವಗಿ ಹೊಸಪೇಟೆ ಹರಿಹರ ಸಂಚಾರ ಪ್ರಾರಂಭವಾಗಿದೆ, ಜಗತ್ತನ್ನ ಜೋಡಣೆಮಾಡಿದ ಮಹಾಪುರುಷರು ನರೇಂದ್ರ ಮೋದಿಯವರು, 13ಲಕ್ಷ ರೈಲ್ವೇ ಕಾರ್ಮಿಕರನ್ನ ಒಳಗೊಂಡ ಇಲಾಖೆ ರೈಲ್ವೇ ಇಲಾಖೆಗೆ 50 ಲಕ್ಷ ಕೋಟಿ ರೂ ವಿನಿಯೋಗ ಮಾಡುವ ಯೋಜನೆಯಲ್ಲಿದೆ, ರೈಲ್ವೇ ಇಟ್ಟುಕೊಂಡು ರಾಜಕಾರಣ ಮಾಡಲಾಗಿದೆ ಆದರೆ ಮೋದಿಯವರು ರೈಲವೇಯನ್ನ ಅಭಿವೃದ್ದಿಮಾಡಿದ್ದಾರೆ, ಪ್ರತಿಯೊಂದು ರೈಲ್ವೇ ಸರಿಯಾದ ಸಮಯಕ್ಕೆ ಸರಿಯಾಗಿ ಸಂಚರಿಸವಂತೆ ಮಾಡಲಾಗಿದೆ ಹಿಂದಿನ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ರಾಜ್ಯದಲ್ಲಿ ಬೇಡಿಕೆ ಇರುವ ಹೊಸಪೇಟೆ ರೈಲ್ವೇ ಸಂಚಾರ ಪ್ರಾರಂಭಕ್ಕೆ ಕ್ರಮ ತೆಗೆದುಕೊಳ್ಲುತ್ತೇವೆ, ಹೊಸಪೇಟೆ ಹರಿಹರ ರೈಲ್ವೇ ಸಂಚಾರವನ್ನ ಮುಂದೆ ಬಳ್ಳಾರಿ ವರೆಗೆ ವಿಸ್ತರಿಸುವು ಭರವಸೆ, ನಾನು ಸಚಿವ ಆದಮೇಲೆ ಮೊಟ್ಟಮೊದಲಿಗೆ ಬಡ ಜನಗಳು ಸಂಚರಿಸುವ ಜನರಲ್ ಬೋಗಿಯಲ್ಲಿ ಸಂಚರಿಸಿದ್ದೇನೆ  2020ಒಳಗೆ ಎಲ್ಲಾ ಪ್ರಾಜಕ್ಟ್ ಗಳನ್ನ ಮುಗಿಸುತ್ತೇವೆ ಎಂದು ರೈಲ್ವೇ ಸಚಿವ ಸುರೇಶ್ ಅಂಗಡಿ ಹೇಳಿದರು

ಸಂಸದರಾದ ದೇವೇಂದ್ರಪ್ಪ, ಜಿ.ಎಂ. ಸಿದ್ದೇಶ, ಕರಡಿ ಸಂಗಣ್ಣ,  ಶಾಸಕ ಸೋಮಶೇಖರ ರೆಡ್ಡಿ ಉಪಸ್ಥಿತರಿದ್ದರು

 

Please follow and like us:
error