ಹೆಸರಿಗಾಗಿ ಯಾವುದೇ ಆಂದೋಲನ ನಡೆಸಬೇಡಿ- ಶ್ರೀ ಗವಿಮಠದ ಪ್ರಕಟಣೆ

ಕೊಪ್ಪಳ : ದಿ ೧೬ ಮಂಗಳವಾರದಂದು ದಿನಪತ್ರಿಕೆಯೊಂದರಲ್ಲಿ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ      ಶ್ರೀ ಗವಿಸಿದ್ಧೇಶ್ವರ ನಾಮಕರಣ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಶ್ರೀ ಗವಿಮಠದ ಪರಮ ಪೂಜ್ಯರೆಲ್ಲರ ಬದುಕು, ಭಕ್ತರ ಏಳ್ಗೆ ಹಾಗೂ ಸಮಾಜ ಸೇವೆಗೆ ಮಾತ್ರ ಮೀಸಲಿಡಲಾಗಿದೆ ಭಕ್ತರು ಇದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಆಂದೋಲನಗಳನ್ನು ಪೂಜ್ಯರ ಅಪ್ಪಣೆ ಇಲ್ಲದೆ ಮಾಡಬಾರದು, ತಮ್ಮ ಅಭಿಮಾನಕ್ಕೆ ಧನ್ಯವಾದಗಳು. ಹೆಸರಿಗಾಗಿ ಯಾವುದೇ ಆಂದೋಲನ ನಡೆಸದೆ ಸಮಾಜದಲ್ಲಿ ನೂರಾರು ಕಾರ್ಯಗಳು ಮಾಡುವುದಿದೆ ಅಂತವುಗಳು ಆಂದೋಲನದ ಮುಖಾಂತರ ಸಮೃದ್ಧ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

Please follow and like us:
error