ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ

ಮಾರ್ಚ್ನಿಂದ ಜುಲೈ ತಿಂಗಳವರೆಗೆ ಆಯೋಜನೆ, ವಧು-ವರರಿಗೆ ಪ್ರೋತ್ಸಾಹ ಧನ
ಕೊಪ್ಪಳ,  :  ಕರ್ನಾಟಕ ಸರ್ಕಾರ, ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆ, ತಾಲ್ಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಮಾರ್ಚ್-2021 ರಿಂದ ಜುಲೈ-2021ರ ವರೆಗೆ ಆಯೋಜಿಸಲಾಗಿದೆ.
ಸಪ್ತಪದಿ ಸರಳ ವಿವಾಹ ಕಾರ್ಯಕ್ರಮವನ್ನು ಹಿಂದೂ ಸಂಪ್ರದಾಯ ವಿಧಿ ವಿಧಾನದಂತೆ ನೆರವೇರಿಸಲಾಗುತ್ತದೆ. ಸರ್ಕಾರದ ಈ ಉಚಿತ ಸರಳ ವಿವಾಹ ಕಾರ್ಯಕ್ರಮದಲ್ಲಿ ಪ್ರತಿ ನವಜೋಡಿಗೆ ಅಗತ್ಯತೆಗನುಗುಣವಾಗಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ ರೂ. 5000 ಹಾಗೂ ವಧುವಿಗೆ ಹೂವಿನ ಹಾರ, ಧಾರೆಸೀರೆ, ರವಿಕೆ ಕಣಕ್ಕಾಗಿ ರೂ. 10,000  ಮತ್ತು ಎರಡು ಚಿನ್ನದ ತಾಳಿ, ಒಂದು ಗುಂಡು ರೂ. 40,000 ಸೇರಿ ಒಟ್ಟು 55,000 ರೂ. ಗಳನ್ನು ಉಚಿತವಾಗಿ ಪ್ರೋತ್ಸಾಹ ಧನವನ್ನು ನೀಡಲಾಗುವುದು.
ಸರಳ ವಿವಾಹದಲ್ಲಿ ಭಾಗವಹಿಸಲು ಇಚ್ಛಿಸುವ ವಧು-ವರರು ದೇವಸ್ಥಾನದ ಕಚೇರಿಯಿಂದ ಒಂದು ತಿಂಗಳು ಮುಂಚಿತವಾಗಿ ಅರ್ಜಿಯನ್ನು ಪಡೆದುಕೊಂಡು ಅಗತ್ಯ ದಾಖಲೆಗಳು ಮತ್ತು ಮಾಹಿತಿಯೊಂದಿಗೆ ಸಲ್ಲಿಸಬೇಕು. ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರೆ ಅವಶ್ಯಕ ವ್ಯವಸ್ಥೆಗಳನ್ನು ಮಾಡಲು ತಗಲುವ ವೆಚ್ಚಗಳನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುವುದು. ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಹುಲಿಗಿ ಕಾರ್ಯನಿರ್ವಾಹಣಾಧಿಕಾರಿಗಳು ಕೋರಿದ್ದಾರೆ.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ನಡೆಯುವ ದಿನಾಂಕಗಳ ವಿವರ;
ಮಾರ್ಚ್ ತಿಂಗಳಲ್ಲಿ 05 ನೇ ತಾರೀಖು ಶುಕ್ರವಾರದಂದು ಮೀನ ಅಭಿಜಿನ್ ಲಗ್ನದಲ್ಲಿ ಬೆಳಿಗ್ಗೆ 7-50 ರಿಂದ 8-40 ರವರೆಗೆ ಮಧ್ಯಾಹ್ನ 12 ರಿಂದ 12-45 ರವರೆಗೆ, 08 ನೇ ತಾರೀಖು ಸೋಮವಾರದಂದು ಮೀನ ವೃಷಭ ಲಗ್ನದಲ್ಲಿ ಬೆಳಿಗ್ಗೆ 7-50 ರಿಂದ 8-40 ರವರೆಗೆ ಮತ್ತು ಬೆಳಿಗ್ಗೆ 10-30 ರಿಂದ 11-30 ರವರೆಗೆ, ನಂತರ 15 ನೇ ತಾರೀಖು ಸೋಮವಾರದಂದು ವೃಷಭ ಅಭಿಜಿನ್ ಲಗ್ನದಲ್ಲಿ 11 ಗಂಟೆಯಿAದ 12 ಗಂಟೆಯವರೆಗೆ, 26 ರ ಶುಕ್ರವಾರದಂದು 12 ಗಂಟೆಯಿAದ 12-45 ರವರೆಗೆ ಹಾಗೂ 31 ನೇ ತಾರೀಖು ಬುಧವಾರ 11 ಗಂಟೆಯಿAದ 12 ಗಂಟೆಗೆ ಇರುವ ಅಭಿಜಿನ್ ಲಗ್ನದಲ್ಲಿ ವಿವಾಹಗಳು ನಡೆಯಲಿವೆ.
ಏಪ್ರಿಲ್ ತಿಂಗಳಲ್ಲಿ 02 ನೇ ತಾರೀಖು ಶುಕ್ರವಾರದಂದು ಅಭಿಜಿನ್ ಲಗ್ನದಲ್ಲಿ ಬೆಳಿಗ್ಗೆ 12 ರಿಂದ 12-45 ರವರೆಗೆ, 04 ನೇ ತಾರೀಖು ರವಿವಾರದಂದು ಅಭಿಜಿನ್ ಲಗ್ನದಲ್ಲಿ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ನಂತರ 19ನೇ ತಾರೀಖು ಸೋಮವಾರದಂದು ಅಭಿಜಿನ್ ಲಗ್ನದಲ್ಲಿ 11 ಗಂಟೆಯಿAದ 12 ಗಂಟೆಯವರೆಗೆ, 22 ರ ಗುರುವಾರದಂದು 11-45 ರಿಂದ 12-45 ರವರೆಗೆ, 25 ನೇ ತಾರೀಖು, ರವಿವಾರದಂದು 11 ಗಂಟೆಯಿAದ 12 ಗಂಟೆಯವರೆಗೆ  ಹಾಗೂ 29 ನೇ ತಾರೀಖು ಗುರುವಾರ 11-30 ರಿಂದ 12-30 ರವರೆಗೆ ಇರುವ ಅಭಿಜಿನ್ ಲಗ್ನದಲ್ಲಿ ಉಚಿತ ಸರಳ ವಿವಾಹಗಳು ನಡೆಯಲಿವೆ.
ಮೇ ತಿಂಗಳಲ್ಲಿನ ವಿವಾಹಗಳು 3 ನೇ ತಾರೀಖು ಸೋಮವಾರದಂದು ಅಭಿಜಿನ್ ಲಗ್ನದಲ್ಲಿ 11 ಗಂಟೆಯಿAದ 12 ಗಂಟೆಯವರೆಗೆ, 6 ನೇ ತಾರೀಖು ಗುರುವಾರ 11-30 ರಿಂದ 12-45 ರವರೆಗೆ, 9ನೇ ತಾರೀಖು ರವಿವಾರ 11 ಗಂಟೆಯಿAದ 12 ಗಂಟೆಗೆ, 13ನೇ ತಾರೀಖು ಗುರುವಾರದಂದು 11 ಗಂಟೆಯಿAದ 12-30 ರವರೆಗೆ ಹಾಗೂ 21ನೇ ತಾರೀಖು ಶುಕ್ರವಾರದಂದು 12 ರಿಂದ 12-45ರ ಸಮಯದಲ್ಲಿ ಜರುಗುತ್ತವೆ.
ಜುಲೈ ತಿಂಗಳಲ್ಲಿ 01 ನೇ ತಾರೀಖು, ಗುರುವಾರ ಅಭಿಜಿನ್ ಲಗ್ನದಲ್ಲಿ ಸಮಯ 11-15 ರಿಂದ 12-45 ರವರೆಗೆ, 4ನೇ ತಾರೀಖು ರವಿವಾರದಂದು 11 ಗಂಟೆಯಿAದ 12 ಗಂಟೆಯವರೆಗೆ ಹಾಗೂ 7ನೇ ತಾರೀಖಿನಂದು ಸಹ ಅಭಿಜಿನ್ ಲಗ್ನದಲ್ಲಿ 11 ಗಂಟೆಯಿAದ 12 ಗಂಟೆಯವರೆಗೆ ಉಚಿತ ಸರಳ ವಿವಾಹಗಳು ಜರಗಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9482771699 ಗೆ ಸಂಪರ್ಕಿಸಬೇಕು ಎಂದು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಜ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ   ತಿಳಿಸಿದ್ದಾರೆ

Please follow and like us:
error