ಹಿಂದುಸ್ತಾನ ಕೊ ಕೊ ಕೋಲಾ ಗುತ್ತಿಗೆ ಕಾರ್ಮಿಕರ ಸಂಘ ಹೋರಾಟ

ಹಿಂದುಸ್ತಾನ ಕೊ ಕೊ ಕೋಲಾ ಗುತ್ತಿಗೆ ಕಾರ್ಮಿಕರ ಸಂಘ ಹಿರೇಬಗನಾಳ 

ಈ ಸಂಘದ ಅಡಿಯಲ್ಲಿ ದುಡಿಯುತ್ತಿರುವ ೧೫೦ ಜನ ಕಾರ್ಮಿಕರು ಕಳೆದ ೧೦ ವರ್ಷಗಳಿಂದ ಹಿಂದುಸ್ಥಾನ ಕೊ ಕೊ ಕೋಲಾ ಕಂಪನಿಯಲ್ಲಿ ತಾಂತ್ರಿಕ ಹಾಗೂ ಇತರ ವಿಭಾಗಗಳಲ್ಲಿ ದುಡಿಯಲಾಗುತ್ತಿದ್ದು, ೨೦೧೦ರ ಅವಧಿಯಲ್ಲಿ ಕಂಪನಿಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ೧೫೦ ಜನ ಕಾರ್ಮಿಕರಿಗೆ ಪ್ರತಿ ತಿಂಗಳಲ್ಲಿ ೨೬ ದಿನದ ಕೆಲಸ ನೀಡುತ್ತೇವೆ ಎಂದು ಹೇಳಿ ಇದರಲ್ಲಿ ೧೭ ಜನ ಕಾರ್ಮಿಕರನ್ನು ಕಂಪನಿಯ ಖಾಯಂ ಕಾರ್ಮಿಕರೆಂದು ಪರಿಗಣಿಸುತ್ತೇವೆ ಮತ್ತು ಇನ್ನುಳಿದ ೧೩೪ ಜನ ಕಾರ್ಮಿಕರನ್ನು ಮುಂದಿನ ದಿನಗಳಲ್ಲಿ ವರ್ಷಕ್ಕೆ ೧೦ ರಿಂದ ೧೫ ಜನ ಕಾರ್ಮಿಕರನ್ನು ಖಾಯಂ ಗೊಳಿಸುತ್ತೇವೆ ಎಂದು ಹೇಳಿ ದಿನಾಂಕ:೨೫-೦೯-೨೦೧೦ರ ಸಭೆಯಲ್ಲಿ ಯುನಿಯನ್ ಮತ್ತು ಕಂಪನಿಯ ಆಡಳಿತ ಮಂಡಳಿಯ ನಡುವಿನ ಮಾತುಕತೆಯಲ್ಲಿ ತೀರ್ಮಾನಿಸಿ ಒಪ್ಪಂದ ಮಾಡಲಾಗಿತ್ತು. ಆದರೆ ಕಂಪನಿಯು ನೆಪಕ್ಕೆ ಮಾತ್ರ ೧೭ ಜನ ಕಾರ್ಮಿಕರನ್ನು ಖಾಯಂಗೊಳಿಸಿಕೊಂಡು ಇನ್ನುಳಿದ ಕಾರ್ಮಿಕರಿಗೆ ಗುತ್ತಿಗೆ ಆಧಾರದ ಪದ್ದತಿಯಲ್ಲಿ ಮುಂದುವರೆಸುತ್ತ ಬಂದಿತು.

ನಮ್ಮ ಸಂಘವು ಈ ಹಿಂದೆ ನಡೆದ ಒಪ್ಪಂದದಂತೆ ನಮಗೆ ಖಾಯಂ ಕಾರ್ಮಿಕರೆಂದು ಪರಿಗಣಿಸಿ ಎಂದು ಹಲವು ಬಾರಿ ಕಂಪನಿಯ ಆಡಳಿತ ಮಂಡಳಿಯ ಜೊತೆ ಮೌಖಿಕವಾಗಿ ಚರ್ಚಿಸಿದರೂ ಇದಕ್ಕೆ ಕಂಪನಿಯವರಿಂದ ಯಾವುದೇ ಉತ್ತರ ಸಿಗದಿಲ್ಲದಕಾರಣಕ್ಕಾಗಿ ನಮ್ಮ ಸಂಘವು ದಿನಾಂಕ:೨೦-೦೧-೨೦೧೪ ರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಉಳಿದ ಕಾರ್ಮಿಕರಿಗೆ ನೀವು ನೀಡಿದ ಭರವಸೆಯಂತೆ ಉಳಿದ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಬೇಡಿಕೆ ಪತ್ರವನ್ನಿಟ್ಟು ಮೂರು ವರ್ಷ ಕೆಲಸ ನಿರ್ವಹಿಸುತ್ತ ನಿರಂತರ ಹೋರಾಟ ನಡೆಸಿದೆವು. ಆದರೆ ಕಂಪನಿಯು ಇದುವರೆಗೂ ಯಾವುದೇ ಪತ್ರಕ್ಕೆ ಸಮಂಜಸ ಉತ್ತರ ನೀಡಿರುವದಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗೆ ಕಂಪನಿಯಿಂದ ಸಕಾರಾತ್ಮಕ ಉತ್ತರ ದೊರೆಕಿರುವದಿಲ್ಲ. ಕಂಪನಿಯು ಲಾಭದಲ್ಲಿದ್ದರೂ ಕೂಡ ಉದ್ದೇಶಪೂರ್ವಕವಾಗಿ ಕಂಪನಿಯು ಈಗಾಗಲೆ ಸೆಪ್ಟೆಂಬರ್ ೦೧ ರಿಂದ ಕಂಪನಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಿದೆ. ಕಾರ್ಮಿಕರು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ನಮ್ಮ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ದಿನಾಂಕ:೦೧-೦೯-೨೦೧೭ ರಿಂದ ನಿರಂತರ ಧರಣಿ ಹೋರಾಟ ನಡೆಸುತ್ತಿದ್ದೇವೆ.

ಈ ನಡುವೆ ದಿನಾಂಕ:೧೨-೦೯-೨೦೧೭ ರಂದು ಬೆಂಗಳೂರಿನಲ್ಲಿ ನಮ್ಮನ್ನು ಸಭೆ ಕರೆದಿದ್ದ ಕಂಪನಿಯ ಆಡಳಿತ ಮಂಡಳಿಯು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಮಸ್ಯೆಯನ್ನು ಮುಂದೂಡಿತು.

ಈ ಕಾರಣದಿಂದ ಕಂಪನಿಯ ಉತ್ಪಾದನೆಯನ್ನು ಪುನಃ ಪ್ರಾರಂಭಿಸಿ ನಮ್ಮ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಬೇಕು.

ಸರಕಾರಿ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ನಿರ್ಲಕ್ಷ ಮಾಡಿದ್ದರಿಂದ ದಿನಾಂಕ:೨೨-೦೯-೨೦೧೭ ರಂದು ಕೊಪ್ಪಳಕ್ಕೆ ಬರುವ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸುತ್ತೇವೆ. ಜಿಲ್ಲಾಮಟ್ಟದ ಸಂಬಂಧಪಟ್ಟ ಅಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಅನುಕೂಲ ಕಲ್ಪಿಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ಅಧ್ಯಕ್ಷರು ಸಹ ಕಾರ್ಯದರ್ಶಿ ಕಾಯದರ್ಶಿ
ಚನ್ನವೀರಯ್ಯ ಹಿರೇಮಠ ಚನ್ನಪ್ಪ ಸಿದ್ದಾಪೂರ ಫಕೀರಪ್ಪ.ಹೆಚ್.ಎಮ್.

Please follow and like us:
error