ಹಿಂಗಾರಿನಲ್ಲಿ ಬೆಳೆ ಬೆಳೆಯಲು ಕೃಷಿ ಹೊಂಡಗಳು ಸಹಕಾರವಾಗಲಿವೆ : ಕೃಷ್ಣ ಬೈರೇಗೌಡ

ಮುಂಗಾರಿನಲ್ಲಿ ಮಳೆ ತೊಂದರೆ ಆದರು ಸಹ ಹಿಂಗಾರಿನಲ್ಲಿ ನೂರಕ್ಕೆ ನೂರರಷ್ಟು ಖಚಿತ ಬೆಳೆ ಬೆಳೆಯಲು ಕೃಷಿ ಹೊಂಡಗಳು ಸಹಕಾರಿಯಾಗಲಿವೆ ಎಂದು ಕೃಷಿ ಮಂತ್ರಿಗಳಾದ ಕೃಷ್ಣ ಬೈರೇಗೌಡ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಮಂಗಳವಾರದಂದು ಕೃಷಿ ಹೊಂಡಗಳನ್ನು ವೀಕ್ಷಿಸಿ, ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಬನ್ನಿಕೊಪ್ಪ ಗ್ರಾಮವನ್ನು ಮಾದರಿ ಕೃಷಿಭಾಗ್ಯ ಗ್ರಾಮವಾಗಿ ಘೋಷಣೆ ಮಾಡಿ, ಸುಮಾರು ೩೫೦ ಕೃಷಿ ಹೊಂಡಗಳನ್ನು ಕೃಷಿಭಾಗ್ಯ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಇತ್ತೀಚೆಗೆ ಉತ್ತಮ ಮಳೆಯಾಗಿರುವುದರಿಂದ ಬಹುತೇಕ ಎಲ್ಲಾ ಕೃಷಿ ಹೊಂಡಗಳು ಭರ್ತಿಯಾಗಿವೆ. ಇದರಿಂದ ಬರುವ ಹಿಂಗಾರಿನ ಬೆಳೆ ರೈತರಿಗೆ ಉತ್ತಮವಾದ ಇಳುವರಿ ಹಾಗೂ ಯೋಗ್ಯ ಆದಾಯ ದೊರಕಲಿದೆ. ಕೃಷಿ ಹೊಂಡಗಳು ಮಳೆ ನೀರಿನಿಂದ ತುಂಬಿ ತುಳುಕುತ್ತಿರುವುದು, ನೀರನ್ನು ನೋಡಿ ರೈತರ ಮುಖದಲ್ಲಿನ ಸಂತೋಷ ಕಾಣುವದಕ್ಕು ಸರ್ಕಾರವು ಜಾರಿಗೆ ತಂದ ಕೃಷಿಭಾಗ್ಯ ಯೋಜನೆ ಸಾರ್ಥಕವಾಗಿದೆ.
ಬನ್ನಿಕೊಪ್ಪ ಗ್ರಾಮಕ್ಕೆ ಎಷ್ಟು ಕೃಷಿ ಹೊಂಡಗಳು ಸಾಧ್ಯ ಅಷ್ಟು ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದ್ದು, ೩೫೦ ಕೃಷಿ ಹೊಂಡಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಮಳೆ ನೀರಿನಿಂದ ತುಂಬಿದ ನಂತರ ಗ್ರಾಮಕ್ಕೆ ಭೇಟಿ ನೀಡಲಾಗುವುದು ಎಂದು ಹೇಳಲಾಗಿತ್ತು. ಇಂದು ವೀಕ್ಷಣೆಗೆ ಬಂದಿದ್ದು, ಮಳೆ ನೀರಿನಿಂದ ತುಂಬಿ ತುಳುಕುತ್ತಿರುವ ಕೃಷಿ ಹೊಂಡಗಳನ್ನು ನೋಡಿ ಸಂತೊಷ ತಂದಿದೆ. ರೈತರು ನಮ್ಮನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ರೈತರಿಗೆ ಕೃಷಿಭಾಗ್ಯ ಯೋಜನೆ ಸಂಪೂರ್ಣ ಸಹಕಾರಿಯಾಗಿ ಯಶಸ್ವಿಗೊಂಡಿದೆ ಎಂದು ಕೃಷಿ ಮಂತ್ರಿಗಳಾದ ಕೃಷ್ಣ ಬೈರೇಗೌಡ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಿ.ಇ.ಓ ವೆಂಕಟರಾಜಾ, ಕೃಷಿ ಮತ್ತು ಕೈಗಾರಿಕಾ ಸ್ಥಯಿ ಸಮಿತಿ ಅಧ್ಯಕ್ಷ ಭಿಮಣ್ಣ ಅಗಸಿಮುಂದಿನ, ಬಸವರಾಜ ಹಿಟ್ನಾಳ, ಯಂಕಣ್ಣ ಯರಾಶಿ, ಯಲಬುರ್ಗಾ ತಹಶಿಲ್ದಾರ ರಮೇಶ ಅಳವಂಡಿಕರ್, ಬನ್ನಿಕೊಪ್ಪ ಗ್ರಾಮದ ರೈತರು, ಗ್ರಾಮಸ್ಥರು ಸೇರಿದಂತೆ ಅನೇಕ ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error