ಹಾಸಗಲ್ ಗ್ರಾ.ಪಂ. ವತಿಯಿಂದ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ

ಕೊಪ್ಪಳ,  : ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾರ್ಚ್-15 ರಿಂದ ಜೂನ್ 15 ರವರೆಗೆ ಒಟ್ಟು 03 ತಿಂಗಳುಗಳ ಕಾಲ ಹಮ್ಮಿಕೊಂಡಿರುವ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮಕ್ಕೆ ಮಂಗಳವಾರದAದು ಹಾಸಗಲ್‌ನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಾವಿತ್ರಮ್ಮ ಮಂತ್ರಿ ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿ ಜ್ಯೋತಿ ನಾಯ್ಕ ಅವರು ಕೂಲಿಕಾರರಿಂದ ನಮೂನೆ-6ನ್ನು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.
ನಂತರ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ, ದುಡಿಯೋಣ ಬಾ ಅಭಿಯಾನದಡಿ ಬೇಸಿಗೆ ಸಂದರ್ಭದಲ್ಲಿ 60 ದಿನಗಳ ಅಕುಶಲ ಕೂಲಿ ಕಾರ್ಮಿಕರಿಗೆ ಕೂಲಿ ಒದಗಿಸುವ ಉದ್ದೇಶ ಹೊಂದಲಾಗಿದೆ. ಕೂಲಿಕಾರರು ಇದರ ಸದುಪಯೋಗಪಡಿದುಕೊಳ್ಳಬೇಕು. ಏಪ್ರಿಲ್ 01 ರಿಂದ ಕೂಲಿ ಮೊತ್ತ ಪ್ರತಿ ದಿನಕ್ಕೆ 275 ರೂ. ರಿಂದ 289 ರೂ. ಹೆಚ್ಚಳವಾಗಿರುತ್ತದೆ. ಎಲ್ಲ ಕೂಲಿಕಾರರು ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಿ 289 ರೂ. ಮತ್ತು ಗುದ್ದಲಿ ಸಲಿಕೆ ಹರಿತಗೊಳಿಸಲು 10 ರೂ. ಒಟ್ಟು 299 ರೂಪಾಯಿಗಳನ್ನು ಪಡೆಯಬಹುದು ಎಂದು ತಿಳಿಸಿದರು.
20 ರಿಂದ 25 ಕೂಲಿಕಾರರಿಗೆ ಒಬ್ಬ ಕಾಯಕ ಬಂಧುಗಳನ್ನು ನೇಮಿಸಿಕೊಂಡಿದ್ದು, ಅವರಿಗೆ ಇತ್ತೀಚೆಗೆ ಹೆಚ್ಚಿನ ಜವಾಬ್ದಾರಿಗಳನ್ನು ನಿಗದಿಪಡಿಸಿದ್ದು. ಅವರು ಸಹ ಎಲ್ಲ ಕೂಲಿಕಾರರಿಂದ ಸರಿಯಾದ ಅಳತೆಯ ಕೆಲಸವನ್ನು ಪಡೆದು ಕೂಲಿ ಮೊತ್ತವನ್ನು ಸಂಪೂರ್ಣವಾಗಿ ಪಡೆಯಲು ಕ್ರಮವಹಿಸಬೇಕು. ಕೂಲಿಕಾರರು ಯಾವುದೇ ರೀತಿಯ ಗುಳೆ ಹೋಗದೇ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ದೊರೆಯುವ 100 ದಿನಗಳ ನಿರಂತರ ಕೂಲಿ ಕೆಲಸ ಪಡೆದು, ಆರ್ಥಿಕವಾಗಿ ಸದೃಢರಾಗಬೇಕೆಂದು ಕರೆ ನೀಡಿದರು.
ಸಹಾಯಕ ನಿರ್ದೇಶಕರಾದ (ಗ್ರಾ.ಉ) ಸೌಮ್ಯ ಮಾತನಾಡಿ, ದುಡಿಯೋಣ ಬಾ ಅಭಿಯಾನ, ಹೊಸ ಜಾಬ್‌ಕಾರ್ಡ್ ವಿತರಣೆ ಮತ್ತು ನಮೂನೆ-6ರಲ್ಲಿ ಅರ್ಜಿ ಸಲ್ಲಿಸುವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಜ್ಯೋತಿ ನಾಯ್ಕ್ ಮಾತನಾಡಿ, ಏಪ್ರಿಲ್ 01 ರಿಂದ ಹಾಸಗಲ್ ಗ್ರಾಮ ಪಂಚಾಯತಿಯಿAದ ಎಲ್ಲಾ ಕೂಲಿಕಾರರಿಗೆ ಕೂಲಿ ಕೆಲಸ ನೀಡಲು ಕ್ರಮವಹಿಸಲಾಗುವುದು. ಜಮೀನು ಇರುವ ಕೂಲಿಕಾರರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ, ಕೃಷಿಹೊಂಡ ಮುಂತಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶ ಇರುವುದರಿಂದ ಮೊದಲ ಆದ್ಯತೆ ನೀಡಬೇಕು. ಈಗಾಗಲೇ ನಮ್ಮ ಗ್ರಾಮ ಪಂಚಾಯತಿಯಿAದ 2020-21ನೇ ಸಾಲಿನಲ್ಲಿ ಮಾನವ ದಿನಗಳ ಗುರಿ-30,031 ಇದ್ದು 19,623 ಸಾಧನೆ ಮಾಡಿ ಒಟ್ಟು 65.34% ಪ್ರಗತಿ ಸಾಧಿಸಲಾಗಿದೆ. 2021-22ನೇ ಸಾಲಿನ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸಲಾಗುವುದು ಎಂದು ತಿಳಿಸಿದರು.
ಒಟ್ಟು 527 ಕೂಲಿಕಾರರಿಂದ ನಮೂನೆ-6 ಅನ್ನು ಸ್ವೀಕರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಮಂಜುನಾಥ ನಾಯ್ಕ, ಗ್ರಾಮ ಪಂಚಾಯತ ಸದಸ್ಯರಾದ ಯಲ್ಲಪ್ಪ ಹಳ್ಳಿ, ಮರಿಬಸಪ್ಪ ಹಾಸಗಲ್, ಶರಣಪ್ಪ ತಳವಾರ, ಹನಮಂತಪ್ಪ ತಳವಾರ, ಕರಿಯಪ್ಪ ಗೊಸಲದೊಡ್ಡಿ, ತುಕರಾಮ ಬಡಿಗೇರ, ಯಂಕಪ್ಪ ದೇಸಾಯಿ, ತಾಲೂಕ ನರೇಗಾ ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಮ ಪಂಚಾಯತ ಸಿಬ್ಬಂದಿಗಳಾದ ಕರವಸೂಲಿಗಾರ ಶ್ರೀಕಾಂತ ಮಾಲಿಪಾಟೀಲ್, ಗಣಕಯಂತ್ರ ನಿರ್ವಾಹಕ ದ್ಯಾಮಣ್ಣ ಎನ್ ಚಿಲಕಮುಖಿ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.

Please follow and like us:
error