ಹಜರತ ಟಿಪ್ಪು ಸುಲ್ತಾನ ಒಬ್ಬ ದೇಶಪ್ರೇಮಿ : ಸೈಯದ್ ಖಾಲಿದ್ ಕೊಪ್ಪಳ

ಗದಗ ; ದೇಶ ಪ್ರೇಮಕ್ಕೆ ಮತ್ತು ಯುಧ್ದಕ್ಕೆ ಯಾವುದೆ ಜಾತಿ ಇಲ್ಲ , ದೇಶ ಪ್ರೇಮಿ ಟಿಪ್ಪುಸುಲ್ತಾನ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಕಿತ್ತೂರ ಚೆನ್ನಮ್ಮ ಮೌಲ್ಯಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಸಂಸ್ಥಾಪಕ ಸಯ್ಯದ ಖಾಲೀದ ಕೊಪ್ಪಳ ಹೇಳಿದರು. ಶುಕ್ರವಾರ ನಗರದಲ್ಲಿರುವ ಟಿಪ್ಪುಸುಲ್ತಾನ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ನಾಡಿಗೆ ಟಿಪ್ಪುಸುಲ್ಥಾನ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಕನ್ನಡ ಹಾಗೂ ದೇಶ ಪ್ರೇಮ ಮೆರೆದ ಅವರ ತತ್ವಾದರ್ಶಗಳನ್ನು ಪರಿಪಾಲಿಸಬೇಕಾಗಿದೆ. ಯುವ ಪಿಳಿಗೆಯಲ್ಲಿ ಆ ಮಹಾನವೀರರ ಜೀವನ ಚರಿತ್ರೆ ಬಿತ್ತರಿಸಬೇಕಾಗಿದೆ. ಅಲ್ಲದೇ ಟಿಪ್ಪುಸುಲ್ಥಾನ ಮಹಾದ್ವಾರ ನಿರ್ಮಿಸಿ ನಗರವನ್ನು ಸುಂದರ ಕಾಣುವಂತೆ ಮಾಡಬೇಕಾಗಿದೆ. ರಾಜ್ಯದ ರೈತರು ಸಾಲದಿಂದ ಕಂಗಾಲಾಗಿದ್ದಾರೆ. ಬಿಜೆಪಿ ಪಕ್ಷದವರು ರೈತರ ಸಾಲ ಮನ್ನಾ ಕುರಿತು ಪ್ರದಾನ ಮಂತ್ರಿಗಳ ಬಳಿ ಮನವಿ ಮಾಡಲಿ. ವಿನಾಕಾರಣ ಟಿಪ್ಪು ಬಗ್ಗೆ ಹೋರಾಟ ಮಾಡುವ ಬದಲು ರೈತರ ಸಲುವಾಗಿ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ, ಎನ್.ಕೆ.ಕೊರ್ಲಹಳ್ಳಿ, ಅಕ್ಭರ ಅಲಿ ಬೇಗ , ಬಸೀರ ಮುಳುಗುಂದ, ಡಿ.ಸಿ ಮುಲ್ಲಾ, ಸುರೇಶ ಹಳ್ಳಿಕೇರಿ, ಮಹಿಳಾ ಮುಖಂಡರಾದ ಶಕುಂತಲಾ ಗಂಗಾವತಿ, ಅಲ್ಲಾಭಕ್ಷ ಗದ್ವಾಲ, ಕೃಷ್ಣ ನಾಗನಗೌಡ್ರ, ಮಹಮ್ಮದ, ಅಲ್ತಫ, ಸಲೀಮ ಡಾಲಾಯತ, ರಫೀಕ ಗಾಡಗೋಳಿ, ಇಸ್ಮಾಯಿಲ ಸವಣೂರ, ಕಾಸಿಂ ಮುಲ್ಲಾ, ಅಸ್ಲಾಂ, ಲೀಲಾ ಹಡಪದ, ರವಿ ವಗ್ಗನವರ, ದಾದು ಮುಂಡರಗಿ, ಇರ್ಫಾನ ಕರಮುಡಿ, ಹಲವರು ಯುವಕರು ಹಾಜರಿದ್ದರು

Please follow and like us:
error