ಸ್ವಾತಂತ್ರ್ಯ ಸಂಗ್ರಾಮದ ಸಮರಶೀಲ ನೇತಾರ ಸುಭಾಷ್ ಚಂದ್ರ ಬೋಸ್ ರ 125ನೇ ಜನ್ಮದಿನ

Koppal ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪಶ್ಚಿಮ ಬಂಗಾಳದ ಕಲ್ಕತ್ತದಲ್ಲಿ 1897 ಮಾರ್ಚ್23ರಂದು ಜನಿಸುತ್ತಾರೆ. ತಂದೆ ಜಾನಕೀನಾಥ ಬೋಸ್ ತಾಯಿ ಪ್ರಭಾವತಿ ದೇವಿ, ವಕೀಲರ ಕುಟುಂಬದಲ್ಲಿ ಹುಟ್ಟಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ವಾತಂತ್ರ್ಯ ಸಂಗ್ರಾಮದ ಧೀರ  ನೇತಾರರಾಗಿ ಇವತ್ತಿನ ವಿದ್ಯಾರ್ಥಿ ಯುವಜನರಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮ ಎರಡು ಕವಲು ದಾರಿಗಳನ್ನು ಹೊಂದಿದ್ದು ಒಂದು ರಾಜಿ ಪಂಥ ಮತ್ತೊಂದು  ರಾಜಿರಹಿತ ಪಂಥ.  ರಾಜಿ ರೈತ ಪಂಥದ ಅಗ್ರಮಾನ್ಯ ನಾಯಕ ಸುಭಾಷ್ಚಂದ್ರಬೋಸ್ರ ಆಗಿದ್ದರು ಬ್ರಿಟಿಷರೊಂದಿಗೆ ಯಾವುದೇ ರಾಜಿಗೆ ಮುಲಾಜಿಗೆ ಒಳಗಾಗದೆ ಕೇವಲ ಬ್ರಿಟಿಷರನ್ನು ಭಾರತದಿಂದ ತೊಲಗಿಸುವುದು ಅಷ್ಟೇ ಅಲ್ಲ ಅನ್ಯಾಯದ ಮೇಲೆ ನಿಂತಿರುವ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೀವನದುದ್ದಕ್ಕೂ ಹೋರಾಟ ನಡೆಸಿ  ಮಹಾನ್ ನಾಯಕರಾಗಿದ್ದರು . ಸಂಪೂರ್ಣ ಸ್ವಾತಂತ್ರ್ಯವೇ ನಮ್ಮ ಗುರಿ, ಅನ್ಯಾಯ ಮತ್ತು ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವುದಕ್ಕಿಂತ ಅಪರಾಧ ಇನ್ನೊಂದಿಲ್ಲ ಎಂದು ನಂಬಿದ್ದರು ಅದರಂತೆ ಬದುಕಿ ತೋರಿಸಿಕೊಟ್ಟರು. ನೇತಾಜಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಕೇವಲ ಪುಸ್ತಕಗಳನ್ನು ಓದುವುದು, ಚಿನ್ನದ ಪದಕಗಳನ್ನು ಪಡೆಯುವುದು,  ದೊಡ್ಡ ದೊಡ್ಡ ಹುದ್ದೆಗಳಿಗೆ ಏರುವುದು, ಜೀವನದ  ಮುಖ್ಯ ದ್ಯೇಯವಲ್ಲ, ದೇಶದ ಮರ್ದಿತ ಜನ,  ಶೋಷಣೆಗೊಳಗಾದ ಜನ, ತುಳಿತಕ್ಕೊಳಗಾದ ಜನರ ಪರವಾಗಿ ಧ್ವನಿಯೆತ್ತುವುದು ಬ್ರಿಟಿಷರನ್ನು ಭಾರತದಿಂದ ತೊಲಗಿಸಿ  ಭಾರತವನ್ನು ಸಮಾಜವಾದಿ ರಾಷ್ಟ್ರವಾಗಿ ನಿರ್ಮಾಣ ಮಾಡಿ  ಶೋಷಣ ಮುಕ್ತ ಸಮಾಜಕ್ಕಾಗಿ ಜೀವವನ್ನೇ ಕೊಡುವಂತ ಧೀಮಂತ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಜಿರಹಿತ  ಪಂಥದ  ಕ್ರಾಂತಿಕಾರಿ ಗುಂಪಿನ ನಾಯಕರಾಗಿದ್ದ ಸುಭಾಷ್ ಚಂದ್ರ ಬೋಸ್,  ಭಗತ್ ಸಿಂಗ್, ಚಂದ್ರಶೇಖರ್ ಆಜಾದ್,  ಅಶ್ಫಾಕುಲ್ಲಾ ಖಾನ್, ಮದನ್ ಲಾಲ್  ಡಿಂಗರ, ಖುದಿರಾಮ್ ಬೋಸ್, ಪ್ರೀತಿಲತಾ, ಮಾಸ್ಟರ್ ಸೂರ್ಯಸೇನ್, ಮುಂತಾದ ಕ್ರಾಂತಿಕಾರಿಗಳು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಳ್ಳದ ಧೀರೋದಾತ್ತ ಹೋರಾಟವನ್ನು ಕಟ್ಟಿದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು ಅಂತ ಹೋರಾಟದ ಪರಂಪರೆ ನಮ್ಮ ದೇಶದಲ್ಲಿ ನಡೆದಿದೆ ಆದರೆ ಇವತ್ತಿನ ವಿದ್ಯಾರ್ಥಿಯ ಜನರು ಇಂಥ ಆದರ್ಶ ಚೇತನಗಳನ್ನು ಕಳೆದುಕೊಂಡು ಬೇರ್ ಇಲ್ಲದಂತಾಗಿದೆ, ಮತ್ತೆ ಆ ಪರಂಪರೆಯನ್ನು ಕಟ್ಟುವ ಹಾಗೂ ರಾಜಿ ರೈತ ಹೋರಾಟವನ್ನು ಮುನ್ನಡೆಸುವ ಜವಾಬ್ದಾರಿ ಇವತ್ತಿನ ವಿದ್ಯಾರ್ಥಿ ಯುವ ಜನರ ಮೇಲಿದೆ. ನೇತಾಜಿ ಅಂದಿನ ಕಾಂಗ್ರೆಸ್  ಸಮಿತಿಯ ಅಧ್ಯಕ್ಷರಾಗಲು ನಿಂತಾಗ ಗಾಂಧೀಜಿಯವರಿಗೆ ಸಹಿಸಿಕೊಳ್ಳದೆ ಪಟ್ಟಾಭಿ ಸೀತಾರಾಮಯ್ಯ ನವರನ್ನು ನೇತಾಜಿ ವಿರುದ್ಧ ನಿಲ್ಲಿಸುತ್ತಾರೆ ಎರಡುನೂರು ಮತಗಳ ಅಂತರದಿಂದ ಸುಭಾಷ್ ಚಂದ್ರ ಬೋಸ್ ಅವರು ಗೆಲುವು ಸಾಧಿಸುತ್ತಾರೆ. ಗಾಂಧೀಜಿಯವರ ರಾಜಕೀಯ ನಿಲುವು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರುವುದು ಕೇವಲ ಸತ್ಯಾಗ್ರಹಗಳಿಂದ ಬ್ರಿಟಿಷರು ಬಿಟ್ಟು ಹೋಗುವುದಿಲ್ಲ ಅದಕ್ಕಾಗಿ ಅವರು ಕ್ರಾಂತಿಕಾರಿ ಹೋರಾಟ ರೂಪಿಸಲು ಮುಂದಾಗುತ್ತಾರೆ. ಮುಸ್ಲಿಂ ಲೀಗ್ ನ ಮೊಮ್ಮದ್ ಅಲಿ ಜಿನ್ನಾ ಅವರನ್ನು ಭೇಟಿಯಾಗಿ ಸಾಯ ಕೇಳುತ್ತಾರೆ ಮತ್ತು ಹಿಂದೂ ಮಹಾಸಭಾದ ಸಾವರ್ಕರ್ ಅವರನ್ನು ಸಹಾಯ ಕೇಳುತ್ತಾರೆ ಸಂಕುಚಿತ ಮನಸ್ಥಿತಿ ಕುಬ್ಜ ಮನಸ್ಸಿನಿಂದ ಇವರು ಕೂಡ ಸಹಾಯ ಮಾಡುವುದಿಲ್ಲ. ಅಂದಿನ ಎಡಪಂಥೀಯ ಪಕ್ಷಗಳು ನೇತಾಜಿಯವರನ್ನು ಬೆಂಬಲಿಸಲಿಲ್ಲ. ಕೊನೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಬಂಗಾಳದಿಂದ ನೂರಾರು ಕಿಲೋಮೀಟರುಗಟ್ಟಲೆ ಮೌಲ್ವಿ ವೇಷದಲ್ಲಿ ಜರ್ಮನಿ ದೇಶದ ಸಹಾಯ ಕೇಳುತ್ತಾರೆ. ಇಲ್ಲಿ ನೇತಾಜಿಯವ ಹೇಳಿದಂತೆ ಭಾರತದಲ್ಲಿರುವುದು ಬ್ರಿಟಿಷ್ ಕಂಪನಿ ನಮಗೆ ಶತ್ರು ಜರ್ಮನಿ ಅಲ್ಲ ಜರ್ಮನಿ ಇಂಗ್ಲೆಂಡಿಗೆ ಶತ್ರು ಶತ್ರುವಿನ ಶತ್ರು ನಮಗೆ ಮಿತ್ರ ಎಂದು ರಾಜಕೀಯ ಸ್ಪಷ್ಟತೆಯನ್ನು ತಿಳಿದ ನೇತಾಜಿಯವರನ್ನು ಇತಿಹಾಸಕಾರರು ಇತಿಹಾಸದಲ್ಲಿ ಸರಿಯಾಗಿ ವಿಶ್ಲೇಷಣೆ ಮಾಡಲಾಗಿಲ್ಲ. ನೇತಾಜಿಯವರು ತಮ್ಮದೇ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಕಟ್ಟಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜಪಾನ ದೇಶದಲ್ಲಿ ರಾಸ್ ಬಿಹಾರಿ ಬೋಸ್ ಆಗಲಿ ನಿರ್ಮಿಸಿದ್ದ ಐ.ಎನ್. ಎ.  ಇಂಡಿಯನ್ ನ್ಯಾಷನಲ್ ಆರ್ಮಿ ನೇತೃತ್ವ ವಹಿಸಿಕೊಂಡು ಭಾರತದಲ್ಲಿ ಚಲೋ ಮಾರ್ಚ್ ಮಾಡ್ತಾರೆ. ಭಾರತದ ಗಡಿಯಲ್ಲಿ ಬ್ರಿಟಿಷರಿಗೆ ಮತ್ತು ಐಎನ್ಎ ಸೈನ್ಯಕ್ಕೆ ಸಂಘರ್ಷ ನಡೆದು ಸಾಕಷ್ಟು ಸೈನಿಕರು ಜೀವ ಕಳೆದು ಕೊಳ್ಳುತ್ತಾರೆ.  ಮಳೆ ಬಿರುಗಾಳಿ ಪ್ರಕೃತಿ ವಿಕೋಪಕ್ಕೆ ಸೈನಿಕರು ಜೀವ ತ್ಯಾಗ ಮಾಡುತ್ತಾರೆ ಇಂಥ ಹೋರಾಟವನ್ನು ಮುನ್ನಡೆಸಿದ ಮಹಾನ್ ನೇತಾರ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳನ್ನು ಇವತ್ತಿನ  ಆಳುವ ಪಕ್ಷ  ಮೂಲೆಗುಂಪು ಮಾಡಿದ್ದಾರೆ. ಹಾಗಾಗಿ ಕೇವಲ ರಾಜಕೀಯ ಸ್ವಾತಂತ್ರ್ಯ ನಮಗೆ ಸಿಕ್ಕಿದ್ದು ಎಲ್ಲಾ ರೀತಿಯ ಶೋಷಣೆ ಮುಕ್ತ ಸ್ವಾತಂತ್ರ್ಯ ಕನಸು ಸುಭಾಷ್ ಚಂದ್ರ ಬೋಸರ ಕನಸಾಗಿತ್ತು. ಕಳೆದ 58 ದಿನಗಳಿಂದ ರೈತರು ದೆಹಲಿಯು ಸಿಂಘು  ಗಡಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಸಾಕಷ್ಟು ಜನ ಚಳಿಗೆ ಜೀವ ಕೊಟ್ಟಿದ್ದಾರೆ ಆದರೆ ಮಾನ್ಯ ಪ್ರಧಾನ ಮಂತ್ರಿಗಳು ಇಲ್ಲಿವರೆಗೂ ರೈತರ ಬಗ್ಗೆ ಮಾತನಾಡಿಲ್ಲ. ಹಾಗಾಗಿ ಇಂದು ಕೊಳೆತು ನಾರುತ್ತಿರುವ  ಈ ರಾಜಕೀಯದಿಂದ ಬದಲಾವಣೆ ಸಾಧ್ಯವಿಲ್ಲ. ಸ್ವಾರ್ಥ ನೀಚ ರಾಜಕೀಯ ದಿಂದ ಜನ ನೂರಾರು ಸಂಕಷ್ಟಗಳನ್ನು ಜನ ಎದುರಿಸುತ್ತಿದ್ದಾರೆ. ಬೆಲೆ ಏರಿಕೆ,  ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಹಸಿವು,  ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣ ವ್ಯಾಪಾರೀಕರಣ,  ಆರೋಗ್ಯ ವ್ಯಾಪಾರಿಕರಣ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಮುಂತಾದ ಸಮಸ್ಯೆಗಳು ಜನರನ್ನು ಸಂಕೋಲೆಗಳಿಂದ ಬಂದಿಸಿವೆ. ಯಾವ ಅನ್ಯಾಯ ಅಸಮಾನತೆಯ ವಿರುದ್ಧ ಧ್ವನಿಯೆತ್ತಿ ಹೋರಾಟ ಕರೆಯಬೇಕಾದ ಯುವಜನರು ನೈತಿಕ ಮೌಲ್ಯಗಳನ್ನು ಕಳೆದುಕೊಂಡು ವ್ಯವಸ್ಥೆಯ ಬಲಿಪಶುಗಳಾಗಿದ್ದಾರೆ. ಯುವಜನರನ್ನು ನೈತಿಕ ಮೌಲ್ಯಗಳನ್ನು ನಾಶ ಮಾಡಿ ಅವರನ್ನು ತಮ್ಮ ರಾಜಕೀಯ ಗುಲಾಮರನ್ನಾಗಿ  ಕೈಗೊಂಬೆ ಮಾಡಿಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಯ ವಿಚಾರಗಳ ಮಾನ ಆದರ್ಶ ವ್ಯಕ್ತಿಗಳು ಇಂದು ಪ್ರಸ್ತುತ. ಹಾಗಾಗಿ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಮುಂತಾದ ಮಹಾನ್ ಕ್ರಾಂತಿಕಾರಿಗಳು ಅವರ ಜೀವನ ಹೋರಾಟದ ವಿಚಾರಗಳು ಎಲ್ಲೆಲ್ಲೂ ಹರಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಸ್ತವಿಕ ಮಾತನಾಡಿದರು. ಕಾಲೇಜಿನ ಪ್ರಿನ್ಸಿಪಾಲರು ನಿಂಗಪ್ಪ ಸರ್, ಪ್ರಾಧ್ಯಾಪಕರಾದ ಯಮನೂರಪ್ಪ ಮುಜಾವರ್, ವಂದನಾರ್ಪಣೆ ಮಾಡಿದರು. ಜೇಸಿಓ ಗಳಾದ ಈರಪ್ಪ ಹುಣಶಾಳ, ಮೊಮ್ಮದ್ ಶಫಿ, ಅಶೋಕ್ ಪೂಜಾರಿ, ವಿದ್ಯಾರ್ಥಿಗಳಾದ ಮಂಜುನಾಥ್, ಮುತ್ತಣ್ಣ, ಮುಂತಾದ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Please follow and like us:
error