ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೆ ಬ್ರಿಟಿಷರ ವಿರುದ್ಧ ಕಹಳೆ ಮೊಳಗಿಸಿ ರಾಣಿ ಚನ್ನಮ್ಮ 

ಕೊಪ್ಪಳ :ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಬ್ರಿಟಿಷರ ವಿರುದ್ಧ ಕಹಳೆ ಮೊಳಗಿಸಿದ ಕೀರ್ತಿ ವೀರರಾಣಿ ಕಿತ್ತೂರು ಚನ್ನಮ್ಮಗೆ ಸಲ್ಲುತ್ತದೆ ಎಂದು ಶಾರದ ಇಂಟರ್ ನ್ಯಾಷನಲ್ ಸ್ಕೂಲ್ ನಿರ್ದೇಶಕ ಶಿವಪ್ರಕಾಶ ಅವರು ಹೇಳಿದ್ದಾರೆ.

ಕೊಪ್ಪಳ  ಸಮೀಪದ ಶ್ರೀ ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಪಿ.ಯು ಕಾಲೇಜಿನಲ್ಲಿ   ಕಿತ್ತೂರ ವಿಜಯೋತ್ಸವ ಕಾರ್ಯಮದಲದಲ್ಲಿ  ವೀರ ರಾಣಿ ಚೆನ್ನಮ್ಮ  ಭಾವಚಿತ್ರಕ್ಕೆ ಪುಷ್ಪಾರ್ಪಣೆ  ಸಮರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಸ್ವಾತಂತ್ರ್ಯ ಚಳುವಳಿ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಇತಿಹಾಸದ ದಾಖಲೆಗಳಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಿಪಾಯಿ ದಂಗೆ ಎಂದು ಹೇಳುತ್ತಾರೆ. ಆದರೆ ಅದಕ್ಕಿಂತಲೂ 33 ವರ್ಷ ಮೊದಲೇ ಅಂದರೆ 1824 ರಲ್ಲಿ ಕನ್ನಡ ನಾಡಿನ ಕಿತ್ತೂರ ಸಂಸ್ಥಾನದ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಕಹಳೆ ಊದಿ, ದಂಡೆತ್ತಿ ಬಂದ ಧಾರವಾಡ ಕಲೆಕ್ಟರ್ ಥ್ಯಾಕರೆಯನ್ನು ಯುದ್ಧದಲ್ಲಿ ಸೋಲಿಸಿ ಕೊಂದುಹಾಕಿದ್ದು ಭಾರತೀಯ‌ ಇತಿಹಾಸದ ಚರಿತ್ರೆಯಲ್ಲಿ ಇದು ಸುವರ್ಣಾಕ್ಷರಗಳಿಂದ ಬರೆದಿಡುವಂಥದ್ದು ಎಂದರು.  ನಿರ್ದೇಶಕರಾದ ಡಾ. ರಮಾ ರಾಯಾ ಅವರು ಮಾತನಾಡಿ, ಅವರು ಶಾಲೆಯಲ್ಲಿ ನಡೆದ ಕಿತ್ತೂರು ವಿಜಯೋತ್ಸವ ದಿನಾಚರಣೆಯ ಮಹತ್ವ ವಿವರಿಸಿದರು.

ಪ್ರಾಂಶುಪಾಲರಾದ  ಚಕ್ರವರ್ತಿ   ಮಾತನಾಡಿ ಇತಿಹಾಸ ಸತ್ಯಶೋಧನೆ ಮಾಡಿ ಪೂರ್ವಕಲ್ಪಿತ ಅಭಿಪ್ರಾಯವನ್ನು ನಾಶಪಡಿಸುತ್ತದೆ, ಹಾಗೆ ನಾವೆಲ್ಲ1857ರ ಸಿಪಾಯಿ ದಂಗೆ  ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎನಿಸಿಕೊಂಡವರು ಕಿತ್ತೂರು ರಾಣಿ ಚೆನ್ನಮ್ಮ ಎಂದು ತಿಳಿಸಿದರು. ಕನ್ನಡ ಶಿಕ್ಷಕ ಕೋಟ್ರೇಶ ಮಾತನಾಡಿ ಚೆನ್ನಮ್ಮನವರ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಶಾಲಾಯ ಮಕ್ಕಳು ಹಾಗೂ ಸಿಬ್ಬಂದಿ ಚೆನ್ನಮ್ಮನವರಂತೆ ವೇಷ ತೊಟ್ಟು ಕುದುರೆಯ ಮೇಲೆ ಕುಳಿತು ಸಂಭ್ರಮಿಸಿದರು. ವೇದಿಕೆಯ ಮೇಲೆ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಶಿವಪ್ರಕಾಶ. ಪಿ.ಯು ಕಾಲೇಜ ಪ್ರಾಂಶುಪಾಲರಾದ ಶ್ರೀ ಕಿರಣಕುಮಾರ ಮತ್ತು ಆಡಳಿತಾಧಿಕಾರಿಯಾದ ಶ್ರೀಮತಿ ರೇಚಲ್ ರವರು ಆಸಿನರಾಗಿದ್ದರು. ಶಾಲೆಯ ಸರ್ವಸಿಬ್ಬಂದಿ ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
error