ಸ್ವಯಂಚಾಲಿತ ವಾಹನಗಳ ನೊಂದಣಿಗೆ ಬೀರಪ್ಪಅಂಡಗಿ ಚಿಲವಾಡಗಿ ಒತ್ತಾಯ


ಕೊಪ್ಪಳ:ವಿಕಲಚೇತನರುಖರೀದಿ ಮಾಡುವ ಸ್ವಯಂಚಾಲಿತ ವಾಹನಗಳನ್ನು ನೊಂದಣಿ ಮಾಡಿಕೊಡುವಂತೆ ಸಾರಿಗೆ ಸಚಿವರುರಾಜ್ಯದಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ವಾಹನ ನೊಂದಣಿಗೆಅವಕಾಶವನ್ನು ಮಾಡಿಕೊಡುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪಅಂಡಗಿ ಚಿಲವಾಡಗಿ ಒತ್ತಾಯಿಸಿದ್ದಾರೆ.
ಈ ವಿಷಯದ ಬಗ್ಗೆ ಸಾರಿಗೆ ಸಚಿವರಿಗೆ ಪತ್ರ ಬರೆದಿರುವಅವರು ಸಾಮಾನ್ಯರುಖರೀದಿ ಮಾಡುವ ವಾಹನಗಳನ್ನು ವಿಕಲಚೇತನರುಖರೀದಿ ಮಾಡಿದರೆಅಂತಹ ವಾಹನಗಳನ್ನು ಅಂಗವೈಕಲ್ಯತೆಗೆತಕ್ಕಂತೆಮಾರ್ಪಾಡು ಮಾಡಿಸಿಕೊಂಡಾಗ ಮಾತ್ರ ವಾಹನ ನೊಂದಣಿ ಮಾಡಿಕೊಳ್ಳುವ ಬಗ್ಗೆ ಆದೇಶವಿದೆ.ಆದರೆ ಪ್ರಸ್ತುತ ದಿನಮಾನಗಳಲ್ಲಿ ತಂತ್ರಜ್ಞಾನ ಬೆಳದಂತೆ ಅನೇಕ ವಾಹನ ತಯಾರಿಕೆಯ ಕಂಪನಿಗಳು ಕ್ಲಚ್ ಗಳು ಇಲ್ಲದ ಹಾಗೇ ವಾಹವನ್ನುತಯಾರು ಮಾಡಿದ್ದಾರೆ.ಸದರಿ ವಾಹನವನ್ನುಚಲಾವಣೆಯನ್ನು ಮಾಡಲು ಸಾಮರ್ಥವಿರುವ ವಿಕಲಚೇತನರುಖರೀದಿ ಮಾಡಿದಾಗಅದನ್ನು ಮಾರ್ಪಾಡು ಮಾಡಿಸುವಅಗತ್ಯವಿರುವುದಿಲ್ಲ.ಕೇವಲ ಸಾಮಾನ್ಯರುಚಲಾವಣೆ ಮಾಡುವ ವಾಹನಗಳನ್ನು ಮಾತ್ರ ಮಾರ್ಪಾಡು ಮಾಡಬಹುದು.ಆದರೆರಾಜ್ಯದ ಅನೇಕ ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಂತಹ ವಾಹನವನ್ನು ನೊಂದಣಿ ಮಾಡಿಕೊಡದೆಕಚೇರಿಗೆಅಲೆದಾಡಿಸುತ್ತಿದ್ದಾರೆ.ಇದರಿಂದ ವಿಕಲಚೇತನರಿಗೆತೊಂದರೆಯಾಗುತ್ತಿದ್ದು,ಸಂಬಂಧಪಟ್ಟ ಸಾರಿಗೆ ಸಚಿವರಾದ ಲಕ್ಷ್ಮಣ್ಣ ಸವದಿ ಅವರುಕೂಡಲೆ ಸದರಿ ವಿಷಯದ ಬಗ್ಗೆ ಗಮನವನ್ನು ಹರಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದರ ಮೂಲಕ ವಿಕಲಚೇತನರಿಗೆ ನ್ಯಾಯ ಒದಗಿಸಿಕೊಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error