ಸ್ಪರ್ಧೇಗಳಲ್ಲಿ ಸೋಲು ಗೆಲವು ಸಾಮಾನ್ಯ – ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೇ
ಕೊಪ್ಪಳ : ನ.೧೬, ಗವಿಶ್ರೀ ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ೧೪ ರಿಂದ ೧೭ ವರ್ಷದ ವಯೋಮಿತಿಯೊಳಗಿನ ಬಾಲಕ/ಬಾಲಕಿಯರ ಕರಾಟೆ ಸ್ಪರ್ದೇಯು ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ವಿಜಿಡಮ್ ಮಾಷಲ್ ಆರ್ಟ್ಸ ಕರಾಟೆ ಅಕಾಡೆಮಿಯ ಹಾಗೂ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಯನ್ನು ಆಯೋಜಿಸಲಾಗಿತ್ತು.
ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕರಾಟೆ ಕಲೆಯನ್ನು ಕಲಿಯಬೇಕು. ಸ್ಪರ್ಧೇಗಳಲ್ಲಿ ಸೋಲು ಗೆಲವು ಸಾಮಾನ್ಯ ಸೊತವರು ಗೆದ್ದವರ ಬೆನ್ನು ತಟ್ಟಿ ಮುಂದೆ ಕಳುಹಿಸಬೇಕು ಮತ್ತು ಮುಂಬರುವ ದಿನಗಳಲ್ಲಿ ನೀವು ಗೆಲ್ಲಬೇಕು ನಿಮ್ಮ ತಂದೆ ತಾಯಿಯರ ಮತ್ತು ಶಾಲೆಯ ಹೆಸರನ್ನು ತರಬೇಕೆಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ. ಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸ್ಪರ್ಧೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ನವ್ಹಂಬರ ೧೮ ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕರಾಟೆ ಸ್ಪರ್ಧೇಗೆ ಕಳುಹಿಸಲಾಗುತ್ತದೆ. ನಿಮ್ಮದೆ ಆದಂತಹ ಒಳ್ಳೆಯ ಆಟವನ್ನು ಆಡಿ ರಾಜ್ಯಮಟ್ಟದಲ್ಲಿಯೂ ಸಹ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೇಗೆ ಆಯ್ಕೆಯಾಗಿ ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿಯನ್ನು ತನ್ನಿ ಎಂದು ತಿಳಿಸಿದರು.
ನಂತರ ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮೌನೇಶ ಎಸ್ ವಡ್ಡಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ೩ನೇ ಬಾರಿ ಜಿಲ್ಲಾ ಮಟ್ಟದ ಸ್ಪರ್ಧೇಯನ್ನು ಏರ್ಪಡಿಸಿದ್ದು, ಈ ಕರಾಟೆ ಕ್ರೀಡೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಪ್ರತಿ ಶಾಲೆಗಳಲ್ಲಿಯೂ ಸಹ ಕರಾಟೆ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮತ್ತು ವಿದ್ಯಾರ್ಥಿಗಳು ಚನ್ನಾಗಿ ಕರಾಟೆ ಕಲೆಯ ಅಭ್ಯಾಸ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹಧನವಾಗಿ ನೀಡುತ್ತದೆ. ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದರೆ ಕೇಂದ್ರ ಸರ್ಕಾರವು ಐದು ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹಧನವನ್ನಾಗಿ ನೀಡುತ್ತದೆ. ಮತ್ತು ಮುಂದೆ ವಿದ್ಯಾಬ್ಯಾಸ ಮುಗಿದ ನಂತರ ಯಾವುದೇ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಕ್ರೀಡಾ ಕೊಟಾದಡಿಯಲ್ಲಿ ನಿಮಗೆ ನೌಕರಿ ದೊರೆಯಲಿದೆ. ಈಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕರಾಟೆ ಕಲೆಯನ್ನು ಕಲಿಯಿರಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಠ್ಠಲ್ ಬೈಲವಾಡ, ವಿಜಿಡಮ್ ಮಾರ್ಷಲ್ ಆರ್ಟ್ಸ ಕರಾಟೆ ಅಕಾಡೆಮಿಯ ಸೈಯದ್ ಪಾಷಾ ಹೂಗಾರ, ಮಹಾಂತೇಶ, ಅನ್ವರ್ ಪಾಷಾ, ವಿಜಯಕುಮಾರ ಹಂಚಿನಾಳ, ಈರಣ್ಣ, ಚಾಂದಪಾಷಾ, ರಾಜು ಬಾಕಳೆ, ಬಿಲಾಲ್, ವಿಠ್ಠಲ್ ಹೆಚ್, ದೇವಪ್ಪ ಕಲ್ಲಣ್ಣವರ, ಸೋಮಲಿಂಗ, ಅಶೋಕ ನರಗುಂದ, ಸಂತೋಷ, ಪ್ರಭು ಕಾಳಿ, ರಾಕೇಶ ಕುಂಬಾರ, ಚಿರಂಜೀವಿ, ಷಣ್ಮುಖ, ಬಾಬುಸಾಬ, ರುಕ್ಮೀನಿ, ಶ್ರೀಕಾಂತ ಕಲಾಲ, ಮಂಜುನಾಥ, ನಿರ್ಣಾಯಕರಾಗಿ ದಾವಣಗೇರಿಯ ಬಾಷಾ ಸಾಹೇಬ, ನಜೀರ, ಹಾವೇರಿಯ ಪ್ರಕಾಶ ಉಜ್ಜನಿಯಕೊಪ್ಪ, ಸಲೀಂ, ಸಿಂಧನೂರಿನ ಅಬ್ದುಲ ರಜಾಖ ಉಪಸ್ಥಿತರಿದ್ದರು, ಸೈಯದ್ ಪಾಷಾ ನಿರೂಪಿಸಿ ವಂದಿಸಿದರು.

Please follow and like us:
error