ಸ್ಪರ್ಧಾತ್ಮಕ ಪರಿಕ್ಷೇಎದುರಿಸಲು ಉತ್ತಮ ಮಾರ್ಗದರ್ಶನ ಹಾಗೂ ಉತ್ತಮ ಪುಸ್ತಕಗಳ ಅಗತ್ಯ-ಹಿಟ್ನಾಳ

ಕೊಪ್ಪಳ, ೦೪- ಸ್ಪರ್ಧಾತ್ಮಕ ಪರಿಕ್ಷೇಎದುರಿಸಲೂ ಉತ್ತಮ ಮಾರ್ಗದರ್ಶನ ಹಾಗೂ ಉತ್ತಮ ಪುಸ್ತಕಗಳ ಅಗತ್ಯವಿದ್ದು ಬಡವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡುವ ಕೆಲಸ ಅತ್ಯಂತ ಮಾದರಿಯಾಗಿದೆ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.
ಅವರು ಕೊಪ್ಪಳದ ಸರಕಾರಿ ನೌಕರರ ಭವನದಲ್ಲಿ ಬುಧವಾರ ವರ್ಲ್ಡ್ ಆಯುರ್ವೇದ ಪೌಂಡೇಶನ್, ಅಂತರಾಷ್ಟ್ರೀಯ ತ್ಯಾಜ್ಯಾ ನಿರ್ವಹಣಾ ಸಂಸ್ಥೆ, ರೆಮೋಸ್ ಪೌಂಡೇಶನ್ ಬೆಂಗಳೂರ, ವಿನೂತನ ಶಿಕ್ಷಣ ಸೇವಾ ಸಂಸ್ಥೆ, ರೋಟರಿ ಕ್ಲಬ್ ಕೊಪ್ಪಳ ಇವರ ಸಂಯೋಗದಲ್ಲಿ ಜರುಗಿದ ಉಚಿತ ಪುಸ್ತಕ ವಿತರಣ ಹಾಗೂ ವಿಧ್ಯಾರ್ಥಿಗಳಿಗೆ ಒಂದು ದಿನದ ಕಲಿಕಾತರಬೆತಿ ಕಾರ್ಯಗಾರ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರಿನ ರೆಮೋಸ್ ಪೌಂಡೆಶನ್ ಬೆಂಗಳೂರ ಕೊಪ್ಪಳದ ವಿರ್ಥಿಗಳಿಗೆ ಉಚಿತ ಪುಸ್ತಕ ನೀಡಿ ಸ್ಪರ್ಧಾತ್ಮಕ ಪರಿಕ್ಷೆಗೆ ಮಕ್ಕಳು ವಿದ್ಯಾಭ್ಯಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಅವರ ಕಾರ್ಯ ಶ್ಲಾಘನೀಯವೆಂದು ಬಣ್ಣಿಸಿದರು.
ಹೈದ್ರಾಬಾದ ಕರ್ನಾಟಕದಲ್ಲಿ ಶಿಕ್ಷಣದಲ್ಲಿ ಹಿಂದುಳಿದಿದ್ದು ಬಡತನ ಮನೆ ಮಾಡಿರುವ ನಮ್ಮ ಭಾಗದ ಮಕ್ಕಳಿಗೆ ಸೂಕ್ತ ಶಿಕ್ಷಣದ ಅವಶ್ಯಕತೆ ಇದ್ದು ಪ್ರತಿಯೊಬ್ಬ ವಿದ್ಯಾರ್ಥಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದುವರೆದ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗೆ ಸಿದ್ದರಾಗಿ ಎಂದು ಕರೆ ನೀಡಿದರು.
ಸ್ವಚ್ಛ ಭಾರತ ಗಾಂಧಿಯವರ ಕನಸಾಗಿದ್ದು ಅವರ ಕನಸಿನಂತೆ ಕೊಪ್ಪಳ ಜಿಲ್ಲಾ ಪಂಚಾಯತ ನಿಂದ ೨೦೦ ತಾಸಿನಲ್ಲಿ ೨೧ ಸಾವಿರ ಶೌಚಾಲಯ ನಿರ್ಮಿಸಿ ಜಿಲ್ಲೆ ದಾಕಲೆ ನಿರ್ಮಿಸಿದ್ದು. ಜಿಲ್ಲೆಯ ನಾಗರಿಕರ ಸಹಕಾರದಿಂದ ಇದು ಸಾಧ್ಯವಾಗಿದ್ದು ಪ್ರತಿಯೊಬ್ಬರು ಮೊದಲ ಆದ್ಯತೆ ಸ್ವಚ್ಛತೆಯಡೆಗೆ ಆಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂತೋಷ ದೆಶಪಾಂಡೆ ಮಾತನಾಡಿ ಸರಕಾರಿ ಬಾಲಕರ ಮತ್ತು ಬಾಲಕೀಯರ ಕಾಲೇಜಿನಲ್ಲಿ ಉಪನ್ಯಾಸಕರ ಹಾಗೂ ಕೊಠಡಿಗಳ ಕೊರತೆ ಇದ್ದು ಗಮನ ಹರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ೫೦೦ ಪುಸ್ತಕಗಳನ್ನು ಸರಕಾರಿ ಪ.ಪೂ ಬಾಲಕರ ಮತ್ತು ಬಾಲಕೀಯರ ಕಾಲೇಜಿನ ಗ್ರಂಥಾಲಯಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಶ್ರೀಮತಿ ವಿಜಯಾ ಹಿರೇಮಠ, ರೆಮೋಸ್ ಪೌಂಡೆಶನ್‌ನ ಮುಖ್ಯಸ್ಥ ವೇಣುಗೋಪಾಲ, ರೋಟರಿ ಕ್ಲಬ್ ಅಧ್ಯಕ್ಷ ಲಕ್ಷ್ಮೀಕಾಂತ ಗುಡಿ, ಐ೨ ಪೌಂಡೇಶನ ಅಧ್ಯಕ್ಷ ಆನಂದ, ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಸಿದ್ಧಲಿಂಗಯ್ಯ ಹಿರೇಮಠ, ಉಪನ್ಯಾಸಕರಾದ ಎಸ್,ವಿ,ಮ್ಯಾಳಿ ಇತರರು ಇದ್ದರು.

Please follow and like us:
error

Related posts