ಸ್ಪರ್ಧಾಜಗತ್ತಿನಲ್ಲಿ ಒಂಟಿಯಾಗಿರಬಾರದು-   ನಾರಾಯಣರೆಡ್ಡಿ ಕನಕರೆಡ್ಡಿ

ಕೊಪ್ಪಳ : ಸ್ಪರ್ಧಾಜಗತ್ತಿನಲ್ಲಿ ಒಂಟಿಯಾಗಿರದೇ ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಪರಸ್ಪರರಲ್ಲಿ ಕೊಡುಕೊಳ್ಳುವಿಕೆಯ ಮೂಲಕ ಅಧ್ಯಯನ ಮಾಡಿ ಯಶಸ್ಸನ್ನು ಸಂಪಾದಿಸಬಹುದೆಂದು ತಿಳಿಸಿದರು ಮುಂದುವರೆದು ಪ್ರಾಚೀನ ಗುರುಕುಲ ಮಾದರಿಯ ಮೌಲ್ಯಾಧರಿತ ಶಿಕ್ಷಣದ ಅವಶಕತೆಯನ್ನು ಹಾಗೂ ಇವತ್ತಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಕಾಶಗಳು ಬಹಳಷ್ಟು ಇರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳಿಗೆ ಹೋಗದೆಯೂ ಮ್ಯಾಗಝಿನ್, ಯೂಟೂಬ್ ವಿಡಿಯೊಗಳ ಮೂಲಕ ಅಧ್ಯಯನ ನಡೆಸಬಹುದೆಂದು  ಕೊಪ್ಪಳ ವಿಭಾಗ ಅಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿಹೇಳಿದರು.

ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದಲ್ಲಿ ಆಯೋಜಿಸಿದ ೨೦೨೦-೨೧ನೆಯ ಸಾಲಿನ ವಿದ್ಯಾರ್ಥಿ ಮಂಡಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳ ವಿಭಾಗ ಅಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಅತಿಥಿ ಸ್ಥಾನವಹಿಸಿ ಮಾತನಾಡುತ್ತಾ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಜೆ. ಎಸ್. ಪಾಟೀಲ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಸಾಧಕರ ಅಧ್ಯಯನ ವಿಧಾನ ಸೇರಿದಂತೆ ಸ್ಪರ್ಧಾತ್ಮಕ ಪ್ರಪಂಚದಲ್ಲಿರುವ ಅವಕಾಶಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವ ಅಂಶಗಳನ್ನು ಅರಿತುಕೊಂಡು ಸಾಧನೆಯನ್ನು ಮಾಡಬಹುದೆಂದು ತಿಳಿಹೇಳಿದರು.

ವಿದ್ಯಾರ್ಥಿ ಮಂಡಳಿಗೆ ಆಯ್ಕೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ   ನಾರಾಯಣರೆಡ್ಡಿ ಕನಕರೆಡ್ಡಿ ಹಾಗೂ ಪ್ರಾಚಾರ್ಯರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮಂಡಳಿಯ ಪದಾಧಿಕಾರಿಗಳಾದ  . ಶರಣಬಸಪ್ಪ ಬಿಳಿಎಲಿ, ಡಾ. ರಾಜು ಹೊಸಮನಿ, ಐಕ್ಯುಎಸಿ ಸಂಯೋಜಕರಾದ ಡಾ. ಚನ್ನಬಸುವ ಸಾಹುಕಾರ, ಡಾ. ಬಸವರಾಜ ಪೂಜಾರ್,   ವೆಂಕಟೇಶ ನಾಯ್ಕ,   ಅರುಣಕುಮರ ಎ.ಜಿ, ವಿದ್ಯಾರ್ಥಿ ಮಂಡಳಿಯ ಕಾರ್ಯದರ್ಶಿಯಾದ ಕು. ವರ್ಷಿನಿ ಸಂಕ್ಲಾಪುರ, ಉಪಕಾರ್ಯದರ್ಶಿಗಳಾದ ರಷ್ಮೀ ಮತ್ತು ರೇಷ್ಮಾ ಹಾಗೂ ವರ್ಗಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಡಾ. ನಾಗರಾಜ ದಂಡೊತಿ ನಿರೂಪಿಸಿದರು ಕು. ವರ್ಷಿನಿ ಸಂಕ್ಲಾಪುರ ವಂದಿಸಿದರು.

 

Please follow and like us:
error