ಸ್ಪರ್ದಾತ್ಮಕ ಯುಗದಲ್ಲಿ ಪಠ್ಯೇತರ ಚಟುವಟಿಕೆ ಬಹುಮುಖ್ಯ : ರಾಜಶೇಖರ್ ಹಿಟ್ನಾಳ್

ಕೊಪ್ಪಳ,ಜ.೧೪: ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಮಕ್ಕಳನ್ನು ಎಲ್ಲಾ ರಂಗದಲ್ಲಿ ಬಲ್ಯಾಡ್ಯರನ್ನಾಗಿ ಬೆಳೆಸುವುದರಲ್ಲಿ ತಾಯಂದಿರ ಪಾತ್ರ ಬಹು ಮುಖ್ಯವಾಗಿದೆ ಇತ್ತಿಚಿನ ದಿನಗಳಲ್ಲಿ ಎಲ್ಲಾ ರಂಗದಲ್ಲಿ ಸ್ಪರ್ದೆ ಇದೆ ಇಂತಹ ಮನೋರಂಜನೆ ಕಾರ್ಯಕ್ರಮಗಳಿಗೆ ಮಕ್ಕಳನ್ನು ತರಬೆತಿಗೊಳಿಸಿ ಅವರಿಗೆ ಇಂತಹ ವೇದಿಕೆಗಳ ಮೇಲೆ ಸ್ಪರ್ದೇ ನಿಡುವಂತಹ ಮಟ್ಟಿಗೆ ತಯಾರುಮಾಡುವುದು ತಾಯಂದಿರಿಗೆ ಮಾತ್ರ ಸಾದ್ಯ ಎಂದು ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ರಿಧಮ್ ಡ್ಯಾನ್ಸ್&ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹೆಜ್ಜೆ ಗೆಜ್ಜೆ ಮತ್ತು ಆದರ್ಶದಂಪತಿಗಳ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿ ಮತನಾಡಿದ ಅವರು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೋಂಡರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡವಾಗಿರುತ್ತಾರೆ ತಾಯಂದಿರು ತಮ್ಮ ಮಕ್ಕಳನ್ನು ಶ್ರಮವಹಿಸಿ ದೇಶದ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸ ಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಗೀತಾ ಪಾಟೀಲ್ ಅದ್ಯಕ್ಷರು ಜೆಸಿ ಕ್ಲಬ್, ಲಕ್ಷ್ಮೀದೇವಿ ಚಂದ್ರಶೇಖರ ಕೊಪ್ಪಳ, ಸಂಧ್ಯಾ ಮಾದಿನೂರು ಹಿರಿಯ ನ್ಯಾಯವಾದಿ ಕೊಪ್ಪಳ, ರಮೇಶ ಸುರ್ವೆ ಚಲನಚಿತ್ರ ನಿರ್ದೇಶಕ, ಎಂ. ಸಾದಿಕ್ ಅಲಿ ಕಾರ್ಯ ನಿರತ ಪತ್ರಕರ್ತ ಸಂಘ ಕೊಪ್ಪಳ, ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಹೇಮಲತಾ ನಾಯ್ಕ ಭಾಗವಹಿಸಿದ್ದರು.

Please follow and like us:
error