ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ-ರಾಜಣ್ಣ ನಾಯಕ

ಕ್ರಿಕೆಟ್ ಟೂರ್ನಾಮೆಂಟ್ ಸಮಾರೂಪ ಸಮಾರಂಭ
– ಆರ್ಮಿ ಲವರ್‍ಸ್ ತಂಡಕ್ಕೆ ಒಲಿದ ಜಯ
ಕೊಪ್ಪಳ:
ಇಂದಿನ ಯುವಕರು ಕ್ರೀಡಾ ಸ್ಪೂರ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಉದ್ಯಮಿ ರಾಜಣ್ಣ ನಾಯಕ ಕುಕನೂರು ಹೇಳಿದರು.
ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ತಳಕಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್ ಸಮಾರೊಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ರೀಡೆ ಕೇವಲ ಒಂದು ಸಮುದಾಯಕ್ಕೆ ಸಿಮೀತವಲ್ಲ. ಅದು ಧರ್ಮ, ಜಾತಿಯತೆ ಮೀರಿದ ಸ್ನೇಹ ಸಂಬಂಧವಾಗಿದೆ. ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜತೆಗೆ ಸಾಧನೆಯ ಮಾರ್ಗವನ್ನು ಕ್ರಮಿಸಲು ಅವಕಾಶ ಮಾಡಿಕೊಡುವ ಕ್ರೀಡಾ ಸ್ಪರ್ಧೆಗಳು ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತಿವೆ. ಇತ್ತೀಚೆಗೆ ಜಿಲ್ಲೆ ಸೇರಿದಂತೆ ತಾಲೂಕಿನ ನಾನಾ ಭಾಗಗಳಲ್ಲಿ ಕ್ರಿಕೆಟ್ ಟೂರ್ನಾಮೆಂಟ್, ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವಂತ ಕಾರ್ಯ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇದೇ ಮೊದಲ ಬಾರಿಗೆ ತಳಕಲ್ ಗ್ರಾಮದಲ್ಲಿ ನಡೆದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್ ಕಳೆದ ಇಪ್ಪತ್ತು ದಿನಗಳಿಂದ ವ್ಯವಸ್ಥಿತವಾಗಿ ನಡೆಯುವುದರ ಜತೆಗೆ ಅನೇಕ ಪ್ರತಿಭಾವಂತ ಯುವ ಆಟಗಾರರು ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಗ್ರಾಮೀಣ ಮಟ್ಟದ ಯುವಕರಲ್ಲಿಯೂ ಕೂಡ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವ ಉತ್ಸಾಹ ಅವರಲ್ಲಿದೆ. ಅವರಿಗೆ ಸೂಕ್ತ ಮಾರ್ಗದರ್ಶನದ ಜತೆಗೆ ಸಹಕಾರ ನೀಡುವ ಮನೋಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸಾಧ್ಯ ಎಂದರು.
ಭೀಮರೆಡ್ಡಿ ರಾಮಣ್ಣ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲೂ ಕೂಡ ಐಪಿಎಲ್ ರೀತಿಯಲ್ಲಿ ಕ್ರೀಡೆ ನಡೆಯುತ್ತಿರುವುದು ಸಂತಸದ ಸಂಗತಿ. ಅನೇಕ ಪ್ರತಿಭಾವಂತ ಯುವಕರು ತಮ್ಮಲ್ಲಿನ ಕ್ರೀಡೆಯನ್ನು ಸಾಬೀತುಪಡಿಸುವ ಮೂಲಕ ಇತರೆ ಯುವಕರಿಗೂ ಮಾದರಿಯಾಗಿದ್ದಾರೆ ಎಂದರು.
ಈ ವೇಳೆ ಉಡಾನ್ ಡೆವಲಪರ್‍ಸ್ ಎಂಡಿ ಮೈನುವುದ್ದೀನ್ ವರದಿ, ಗ್ರಾಪಂ ಉಪಾಧ್ಯಕ್ಷ ಬಾಲರೆಡ್ಡಿ ಸೋಮರೆಡ್ಡಿ, ಗ್ರಾಪಂ ಸದಸ್ಯರಾದ ಗಂಗಾಧರ್ ಸೋಮರೆಡ್ಡಿ, ಶಿಕ್ಷಕ ರಾಜಣ್ಣ, ಜಗದೀಶ ಕರ್ಕಿಹಳ್ಳಿ, ಬಾಬಣ್ಣ ಭೀಮರೆಡ್ಡಿ, ತಿಮ್ಮಣ್ಣ ಕೆಂಚರೆಡ್ಡಿ ಸೇರಿದಂತೆ ಇತರರಿದ್ದರು.

Please follow and like us:
error