ಸೆ. ೧೮ ರಂದು ರಾಜ್ಯಮಟ್ಟದ ವಾಲ್ಮೀಕಿ ಜಯಂತ್ಯೋತ್ಸವ ಕುರಿತು ಸಭೆ

ಅಕ್ಟೋಬರ್ ೫ ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಶಾಸಕರ ಭವನದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭೆಯ ರಾಜ್ಯ ಕಾರ್ಯದರ್ಶಿ ಹರ್ತಿಕೋಟಿ ವೀರೇಂದ್ರಸಿಂಹ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಇಂದು ವಾಲ್ಮೀಕಿ ಸಮಾಜದ ಮುಖಂಡರ ಸಭೆ ನಡೆಸಿ, ಅಕ್ಟೋಬರ್ ೫ ರಂದು ನಡೆಯುವ ಕಾರ್ಯಕ್ರಮದ ಪ್ರಚಾರ ಸಾಮಾಗ್ರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬರುವ ಸೆಪ್ಟೆಂಬರ್ ೧೮ ರಂದು ಸಮಾಜದ ಪೂರ್ವಬಾವಿ ಸಭೆಯನ್ನು ನಗರದ ಶ್ರೀ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ, ಅದರಲ್ಲಿ ವಾಲ್ಮೀಕಿ ಗುರುಪೀಠದ ರ್ಶರೀ ಪ್ರಸನ್ನಾನಂದ ಮಹಾಸ್ವಾಮಿಗಳು, ಸಹಕಾಋ ಸಚಿವರಾದ ರಮೇಶ ಜಾರಕಿಹೊಳಿ, ಸಂಸದರಾದ ಭಗವಂತಪ್ಪ ನಾಯಕ ಮತ್ತು ಎಂ.ಎಲ್.ಸಿ ವಿ.ಎಸ್. ಉಗ್ರಪ್ಪ ಮುಂತಾದವರು ಭಾಗವಹಿಸುವರು. ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆಚಿಜನೇಯ ದಾವಣಗೆರೆ, ಜಿಲ್ಲಾಧ್ಯಕ್ಷ ಟಿ. ರತ್ನಾಕರ, ಕಿಯೋನಿಕ್ಸ್ ನಿರ್ದೇಶಕ ರಾಮಣ್ಣ ಕಲ್ಲನವರ, ಶರಣಪ್ಪ ನಾಯಕ, ಗವಿಸಿದ್ದಪ್ಪ ಶಹಪೂರ, ಇಂದಿರಾ ಭಾವಿಕಟ್ಟಿ, ಪಟ್ಟಣ ಪಂಚಾಯತ ಸದಸ್ಯ ರುಕ್ಮಣ್ಣ ಶಾವಿ, ಗ್ರಾ. ಪಂ. ಅಧ್ಯಕ್ಷ ಯಮನೂರಪ್ಪ ನಾಯಕ, ಹಂಚ್ಯಾಳಪ್ಪ ತಳವಾರ, ಶಿವಮೂರ್ತಿ ಗುತ್ತೂರ ಮುಂತಾದವರು ಇದ್ದರು ಎಂದು ಪಟ್ಟಣ ಪಂಚಾಯತ ಸದಸ್ಯ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

Please follow and like us:
error