ಸಿಡಿಲು ಬಡಿದು ರೈತ ಸಾವು

ಕೊಪ್ಪಳ‌: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ರೈತ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ರೈತ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮೃತ ರೈತನನ್ನು
ಮುದಿಯಪ್ಪ ಮಲಿಯಪ್ಪ ಟಕ್ಕಳಕಿ ವಯಸ್ಸು (32) ಎಂದು ಗುರುತಿಸಲಾಗಿದೆ. ಮಳೆ ಬಂದ ತಕ್ಷಣ ಹೊಲದಲ್ಲಿ ಇದ್ದ ಬೇವಿನ ಮರದ ಕೆಳಗೆ ಕುಳಿತಾಗ ದಿಡೀರನೇ ಸಿಡಿಲು ಬಡಿದು ಮುದಿಯಪ್ಪ ಸಾವನ್ನಪ್ಪಿದ್ದಾನೆ.‌ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.
ತೊಪಲಕಟ್ಟಿ ಗ್ರಾಮದ ಮಲ್ಲಪ್ಪ ಬೀಮಪ್ಪ ಟಕ್ಕಳಕಿ (34) ಎಂಬ ರೈತ ಸಿಡಿಲಿನ‌ ಹೊಡೆತಕ್ಕೆ ಗಂಭೀರವಾಗಿ ಗಾಯಗೊಂಡಿದ್ದು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ‌ ಪಡೆಯುತ್ತಿದ್ದಾನೆ. ಈ ಕುರಿತು ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error