fbpx

ಸಾಮಾಜಿಕ ಸಾಮರಸ್ಯ ಮತ್ತು ಕನ್ನಡದ ಕೀರ್ತಿ ಬೆಳಸಿ- ಅಮರೇಶ ಕರಡಿ

 ವಿದ್ಯಾರ್ಥಿ ವಿನೋದ- ತರಲೆ ತುಂಟಾಟ ಕಾರ್ಯಕ್ರಮ
ಕೊಪ್ಪಳ: ಕನ್ನಡ ನಾಡು ನುಡಿ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿಯುವ ಮೂಲಕ ಕಲ್ಯಾಣ ಕರ್ನಾಟಕವನ್ನು ನಿರ್ಮಾಣ ಮಾಡೋಣ ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿತ್ತು, ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿದ್ಯಾರ್ಥಿ ವಿನೋದ ತರಲೆ ತುಂಟಾಟ ಮತ್ತು ಅಧ್ಯಕ್ಷ ಇನ್ ಅಮೇರಿಕಾ ಚಲನಚಿತ್ರದ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ರಂಗಭೂಮಿಯು ಅತ್ಯಂತ ಶ್ರೀಮಂತವಾಗಿದ್ದು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದು ಕನ್ನಡವು ತನ್ನದೇ ಆದ ಹಿರಿಮೆಯನ್ನು ಪಡೆದು ಪ್ರತಿಯೊಬ್ಬ ಕನ್ನಡಿಗರಿಗೆ ಗೌರವವನ್ನು ಸಿಗುವಂತಾಗಿದೆ ಎಂದು ಅಭಿಪ್ರಾಯ ಪಟ್ಟರು. ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ಕನ್ನಡದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ತೆಲುವ ಕಾರ್ಯ ಮಾಡುತ್ತಿದೆ,ಈ ನಿಟ್ಟಿನಲ್ಲಿ ಕನ್ನಡಾಭಿಮಾನವನ್ನು ಹೊಂದಿರುವ ನಮ್ಮ ಎಲ್ಲಾ ಕನ್ನಡ ಮನಸ್ಸುಗಳು ಪ್ರತಿಯೊಂದು ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡಿ ಕನ್ನಡ ಚಿತ್ರೋದ್ಯಮದ ಹಾಗೂ ಕನ್ನಡ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ಹೇಳಿದರು.

ಕಾಮಿಡಿ ಕಿಲಾಡಿಯ ಪ್ರವೀಣ್ ಕುಮಾರ್ ಗಸ್ತಿ ಮಾತನಾಡಿ ಚಲನಚಿತ್ರದ ಅಡಿಪಾಯ ವಾಗಿರುವ ರಂಗಭೂಮಿ ಕಲಾವಿದರನ್ನು ಗುರುತಿಸಿ ಬೆಳೆಸುವ ಕಾರ್ಯ ರಂಗಭೂಮಿ ಮಾಡುತ್ತಿದೆ, ಇಂದಿನ ಯುವ ಸಮುದಾಯ ಅಲಂಕಾರಿಕ ಜೀವನ ಮತ್ತು ವ್ಯಾಮೋಹಿಕದ ಬಗ್ಗೆ ಹೆಚ್ಚು ಅವಲಂಭಿಸಿದೆ.ಕನ್ನಡ ಭಾಷೆ ನಮ್ಮನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇಂಗ್ಲಿಷ್ ಭಾಷೆ ನಮ್ಮನ್ನು ಹೆಸರಗತ್ತಿಯನ್ನಾಗಿ ಮಾಡುತ್ತದೆ. ಆದ್ದರಿಂದ ಕನ್ನಡವನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಪತ್ರಕರ್ತರಾದ ಬಸವರಾಜ ಬಿನ್ನಾಳ, ತಿಪ್ಪನಗೌಡ ಮಾಲಿಪಾಟೀಲ್, ಕಾಮಿಡಿ ಕಿಲಾಡಿಗಳಾದ ನಯನಾ ಶರತ್, ಅಶ್ವಿನಿ ಪ್ರವೀಣ, ಹಿತೇಶ, ಈಶಪ್ಪ ದಿನ್ನಿ, ಕಾಲೇಜು ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ, ಕಸಾಪ ಪದಾಧಿಕಾರಿಗಳಾದ ನಾಗರಾಜ ಡೊಳ್ಳಿನ್, ಚನ್ನಬಸಪ್ಪ ಕಡ್ಡಿಪುಡಿ, ಶಿವಕುಮಾರ ಕುಕನೂರ, ರಮೇಶ ತುಪ್ಪದ್, ಸೇರಿದಂತೆ ಇತರರು ಉಪಸ್ಥಿತರಿದ್ದರು.ಕಾಮಿಡಿ ಕಿಲಾಡಿಯ ಪ್ರವೀಣ್ ಕುಮಾರ್ ಗಸ್ತಿ, ನಯನಾ ಶರತ್, ಅಶ್ವಿನಿ ಪ್ರವೀಣ, ಹಿತೇಶ, ನೀಡಿದ ಹಾಸ್ಯ ಚಟಾಕಿಗಳು ಕಾಲೇಜು ವಿದ್ಯಾರ್ಥಿಗಳನ್ನು ಮನರಂಜಿಸಿತು.

Please follow and like us:
error
error: Content is protected !!