ಸಾಗರೋಪಾದಿಯಲ್ಲಿ ಹಿರೇಹಳ್ಳ ಪುನಶ್ಚೇತನ ಕಾಮಗಾರಿ


ಕೊಪ್ಪಳ: ಹಿರೇಹಳ್ಳ ಪುನಶ್ಚೇತನ ಕಾರ್ಯವು ಇಂದು ಹತ್ತೋಂಬತ್ತನೆ ದಿನಕ್ಕೆ ಕಾಲಿಟ್ಟಿದೆ. ಹಿರೇ ಸಿಂಧೋಗಿ, ಕಾಟ್ರಳ್ಳಿ, ಯತ್ನಟ್ಟಿ, ಮಾದಿನೂರ, ದದೇಗಲ್ ಬ್ರಿಡ್ಜ ಮತ್ತು ಓಜನಳ್ಳಿ ಬಳಿ ಸಾಗರೋಪಾದಿಯಲ್ಲಿ ಪುನಶ್ಚೇತನ ಕಾರ್ಯಸಾಗುತ್ತಿದೆ. ೩೫ ಇಟ್ಯಾಚಿ, ೧೯ ಡೋಜರ್, ಒಟ್ಟು ೫೪ ಯಂತ್ರಗಳನ್ನು ಬಳಸಿಕೊಂಡು ಕಾಮಗಾರಿ ಜರುಗಿತು. ಕಾಮಗಾರಿ ನೆಡೆಯುವ ಕೆಲಸಗಳಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.