ಸರ್ವತೋಮುಖ ವಿಕಾಸಕ್ಕೆ ಮೂಲ ಅಡಿಪಾಯ ದೊಡ್ಡದು : ಗವಿಸಿದ್ದೇಶ್ವರ ಸ್ವಾಮೀಜಿ


ಕೊಪ್ಪಳ ನ.  : ಕನ್ನಡ ನಾಡಿಗೆ ಅವಶ್ಯವಾಗಿ ಕನ್ನಡಿಗರು ಅರಿತು ನಡೆದುಕೊಳ್ಳುವುದು ತಾಯಿ, ತಾಯಿನಾಡು ಮತ್ತು ತಾಯಿಭಾಷೆ ಈ ಮೂರು ಅಂಶಗಳು ಮಾನವನ ಬದುಕು ಮತ್ತು ಅವನ ಸರ್ವತೋಮುಖ ವಿಕಾಸಕ್ಕೆ ಮೂಲ ಅಡಿಪಾಯದ ಮಹತ್ವವನ್ನು ತಿಳಿಯಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
64ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಶುಕ್ರವಾರದಂದು (ನ.01) ನಡೆದ “ಕನ್ನಡ ವೈಭವ’’ ಉದ್ಘಾಟಿಸಿ ಅವರು ಮಾತನಾಡಿದರು.
ನಾಡು, ನುಡಿಗಾಗಿ ನಮ್ಮ ಪೂರ್ವಿಕರು ಶ್ರಮಿಸುತ್ತಾ ಬಂದಿದ್ದಾರೆ. ಅದರಂತೆ ಅವರು ಹಾಕಿಕೊಟ್ಟ.  ಮಾರ್ಗದಲ್ಲಿ ಇಂದಿನ ಪೀಳಿಗೆಯು ದಿಟ್ಟ ಹೆಜ್ಜೆಗಳನ್ನು ಇಡುತ್ತಾ ನಮ್ಮ ನಾಡು, ಭಾಷೆ, ತಾಯಿನುಡಿಯನ್ನು ಸದಾ ಜಾಗೃತರಾಗಿ ನಿತ್ಯದ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸುತ್ತಾ, ಬೆಳೆಸುತ್ತಾ ಹೋಗಬೇಕು. ಕೇವಲ ನವೆಂಬರ 01 ರಂದು ಅಷ್ಟೆ ಕನ್ನಡವನ್ನು ಸಿಮೀತ ಮಾಡಿಕೊಳ್ಳದೇ ಪ್ರತಿಕ್ಷಣವು “ಕನ್ನಡದ ಮಕ್ಕಳೆಲ್ಲರು ಕನ್ನಡಮ್ಮನ್ನ ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ” ಎನ್ನುವ ಕವಿವಾಣಿಯನ್ನು ಸದಾ ಎತ್ತಿ ಹಿಡಿಯಬೇಕು ಎಂದರು.
ಕನ್ನಡ ಭಾಷೆಯ ಇತಿಹಾಸವು ಪುರಾತನವಾಗಿದ್ದು, ಕ್ರಿಸ್ತಶಕ, ಪೂರ್ವದ ಕಾಲದಲ್ಲಿಯೂ ಪ್ರಾಚೀನ ಕಾಲದಲ್ಲಿಯೂ ಇದ್ದ ಬಗ್ಗೆ ಉಲ್ಲೇಖಿಸುತ್ತಾ ಕನ್ನಡ ಭಾಷೆಯ ಸೊಗಡು ತಾಯಿಪ್ರೇಮ ಮತ್ತು ಭಾಷೆಯ ಗಟ್ಟಿತನದ ಬಗ್ಗೆ ಹಾಗೂ ಹಿರಿಮೆ ಇತ್ಯಾದಿಗಳ ಬಗ್ಗೆ ಕನ್ನಡದ ವಿಶಾಲತೆಯ ಬಗ್ಗೆ ಮತ್ತು ಇತರ ಭಾಷೆಯ ಬಗ್ಗೆ ಹೊಂದಿರುವ ಗೌರವಭಾವನೆ ಹೊಂದಿರಬೇಕು. ಹಿಂದೊಮ್ಮೆ ಅಖಂಡ ಕನ್ನಡನಾಡು ಕಾವೇರಿಯಿಂದ ಗೋದಾವರಿವರೆಗೆ ಭೌಗೋಳಿಕವಾಗಿ ವನಸಿರಿ, ಜಲಸಿರಿ ಇತ್ಯಾದಿಗಳಿಂದ ಕೂಡಿ ವೈಭವಯುತವಾಗಿದ್ದ ಬಗ್ಗೆ ಹಂಪೆ-ವಿಜಯನಗರದ ಅರಸರ ಆಳ್ವಿಕೆ ನೆನೆಸುತ್ತಾ ಇತಿಹಾಸದಲ್ಲಿ ವಿಜಯನಗರದ ಸಿರಿತನದ ಬಗ್ಗೆ ‘’ಮುತ್ತು-ರತ್ನಗಳನ್ನು ಸೇರಿ ನಿಂದ ಅಳೆದು’’ ಮಾರುತ್ತಿದ್ದ ಬಗ್ಗೆ ತಿಳಿಸಿದರು. ನಂತರದಲ್ಲಿ ಪರಕೀಯ ಮತಾಂಧರ ದೌರ್ಜನ್ಯಕ್ಕೆ ಸಿಲುಕಿ ಹಾಳಾಗಿ ಕನ್ನಡ ನಾಡು ಛಿದ್ರಗೊಂಡು ನಂತರ ಮುಂಬೈಕರ್ನಾಟಕ, ಹೈದ್ರಾಬಾದ ಕರ್ನಾಟಕ, ಕರಾವಳಿ ಕರ್ನಾಟಕ ಆದಬಗ್ಗೆ ತಿಳಿಸಿ ಇಂತಹ ಪ್ರಕ್ಷÄಬ್ಧ ವಾತಾವರಣದಲ್ಲಿ ಕನ್ನಡ ನಾಡಿನ ಏಕೀಕರಣ ಮಾಡಿದವರು ಆಲೂರು ವೇಂಕಟರಾಯರು , ಸಿದ್ದಪ್ಪ ಕಂಬಳಿ ಇನ್ನೂ  ಮುಂತಾದವರು ಕನ್ನಡ ನಾಡಿನ ಏಕೀಕರಣಕ್ಕೆ ಶ್ರಮಿಸಿದ ಬಗ್ಗೆ ನೆನಪಿಸಿದರು.
“ಕಾಯಕಲ್ಪ’’ ಪ್ರಶಸ್ತಿಗೆ ಭಾಜನರಾದ ಡಾ.ಈಶ್ವರ ಸವಡಿಯವರು ಮಾತನಾಡಿ, ಒಂದು ಮಹತ್ವಪೂರ್ಣ ಸಾಧನೆ ಸಿದ್ಧಿಯಾಗಿ, ಸಮಾಜದ ಜನರಿಗೆ ಉಪಯೋಗ ಆಗಬೇಕಾದರೆ ಕೇವಲ ವ್ಯಕ್ತಿಯಿಂದ ಆಗದೆ ವ್ಯಕ್ತಿಗಳ ಸಮೂಹ ಶಕ್ತಿಯಿಂದ ಸಾಧ್ಯವಾಗುತ್ತದೆಯೆಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ನಾಡಗೀತೆಯನ್ನು ಪ್ರಸ್ತುತ ಪಡಿಸಲಾಯಿತು.  ಕಿಮ್ಸ್ ನಿರ್ದೇಶಕ ದತ್ತಾತ್ರೆಯ ಬಂಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಸಂಗೀತ ಲೋಕದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಹೆಸರುವಾಸಿಯಾಗಿರುವ ಪುಟಾಣಿ ಗಾಯಕ ಅರ್ಜುನ ಇಟಗಿ ಸೇರಿ ದಂತೆ ಹಲವು ಗಣ್ಯರು ಹಾಗೂ ಮತ್ತಿತರರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಹುಮಾನಗಳ ವಿತರಣೆ;
ರಾಜ್ಯೋತ್ಸವದ ಅಂಗವಾಗಿ ಕಿಮ್ಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.  ಕನ್ನಡ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅವರು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.

Please follow and like us:
error