ಸರ್ಕಾರದ ಸವಲತ್ತುಗಳ ಸದ್ಬಳಕೆಯಾಗಲಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ:


ಕೊಪ್ಪಳ:೦೬,ನಗರದ ಶಾಸಕರ ಮಾದರಿಯ ಶಾಲೆಯ ೮ನೇ ತರಗತಿಯ ವಿಧ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸರ್ಕಾರವೂ ಎಲ್ಲಾ ವರ್ಗದ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಅನೇಕ ಶೈಕ್ಷಣಿಕ ಸವಲತ್ತುಗಳನ್ನು ನೀಡುತ್ತಿದ್ದು, ಅದರಲ್ಲಿ ಮುಖ್ಯವಾಗಿ ಬಿಸಿ ಊಟ, ಸಮವಷ್ತ್ರ, ಕ್ಷೀರಭಾಗ್ಯ, ಲ್ಯಾಪಟಾಪ್, ಕೊಡುಗೆ ಶೈಕ್ಷಣಿಕ ಸಾಲ ಸೌಲಭ್ಯ, ವಿಧ್ಯಾಶ್ರಿ, ಶೈಕ್ಷಣಿಕ ಮಾಸಾಶನ (ಸ್ಕಾಲರ್ ಶೀಪ್) ಶೂ ಭಾಗ್ಯ, ಇನ್ನೂ ಅನೇಕ ಸವಲತ್ತುಗಳು ಸರ್ಕಾರವು ಕೊಡು ಮಾಡುತ್ತಿದ್ದು, ಪ್ರತಿಯೊಬ್ಬ ವಿಧ್ಯಾರ್ಥಿಗಳು ಸರ್ಕಾರ ಕೊಡುಮಾಡುವ ಸವಲತ್ತುಗಳನ್ನು ಸದ್ಬಳಕೆಮಾಡಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಮಡು ಪಾಲಕರಿಗೂ ಹಾಗೂ ನಾಡಿಗೆ ಕೀರ್ತಿ ತರಬೇಕೆಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯ ಅರುಣ ಅಪ್ಪುಶೆಟ್ಟಿ, ಅಕ್ಬರಪಾಷಾ ಪಲ್ಟನ, ಕುರಗೋಡರವಿ ಯಾದವ್, ಅರಿಹಂತ ಮೇಹೆತಾ, ವಾಹೀದ್ ಸೂಂಪುರ, ಮಾನ್ವಿಪಾಷಾ, ಶಾಲೆಯ ಮೂಖ್ಯೋಪಾಧ್ಯಯರು, ಶಿಕ್ಷಕರು ಉಪಸ್ಥಿತರಿದ್ದರು.

Please follow and like us:
error

Related posts