ಸರ್ಕಾರದ ಅನುದಾನದ ಸದ್ಬಳಕೆಯಾಗಲಿ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೨೦ ಹಿರೇಸಿಂದೋಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳಾದ ಬೇಳೂರು, ಡಂಬ್ರಳ್ಳಿ, ಬೂದಿಹಾಳ, ಬಿಸರಳ್ಳಿ, ಬಿಕನಳ್ಳಿ, ಮೈನಹಳ್ಳಿ ಹಾಗೂ ಹಂದ್ರಾಳ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.೧ ಕೋಟಿ ೭೦ ಲಕ್ಷದ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣ, ಅಂಬೇಡ್ಕರ ಭವನ, ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಹಾಗೂ ಜನಸ್ಪಂಧನಾ ಕಾರ್ಯಕ್ರಮವನ್ನು ಉದ್ದೇಶಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಗ್ರಾಮ ವಿಕಾಸನ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಕ್ಕೂ ಅವಶ್ಯಕವಿರುವ ಮೂಲಭೂತ ಸೌಕರ್ಯಗಳು ಹಂತ ಹಂತವಾಗಿ ಕಲ್ಪಿಸಲಾಗುತ್ತಿದ್ದು ವಿಶೇಷವಾಗಿ ನೀರಾವರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಮಾಡಲಾಗಿದ್ದು, ಸುಮಾರು ೧೯ ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ರೂ.೪೦೦ ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೂ ಹೆಚ್ಚಿನ ಸೌಲಭ್ಯ ಕಲ್ಪಿಸಿದ್ದು ಈ ೭ ವರ್ಷದ ಅವಧಿಯಲ್ಲಿ ಸುಮಾರು ಅಂದಾಜು ಮೊತ್ತ ರೂ.೩ ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದ್ದು ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಧ್ಯವಾಗಿದೆ. ಜನರು ಗುಣಮಟ್ಟದ ಕಾಮಗಾರಿಗೆ ಕೈ ಜೋಡಿಸಿ ಸರ್ಕಾರದ ಅನುದಾನವನ್ನು ಸದ್ಬಳಗೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ್ದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ಬಿ.ನಾಗರಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಎ.ಪಿ.ಎಂ.ಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಕೆ.ಎಂ.ಎಫ್. ಮಾಜಿ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಮುಖಂಡರುಗಳಾದ, ಕೃಷ್ಣಾರಡ್ಡಿ ಗಲಬಿ, ಪ್ರಸನ್ನ ಗಡಾದ, ಕೇಶವರಡ್ಡಿ, ನಾಗರಾಜ ಚಳ್ಳುಳ್ಳಿ, ನಗರಸಭಾ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಯಲ್ಲನಗೌಡ್ರ, ಮುದೇಗೌಡ್ರ, ಗವಿಸಿದ್ದಪ್ಪ ಬೇಳೂರು, ತಾಲೂಕ ದಂಡಾಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕ, ತಾಲೂಕ ಅಧಿಕಾರಿಗಳು ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:
error