ಸರಕಾರಿ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Koppal: ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮ ದಿನವನ್ನು ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಧ್ಯಾನ್‌ಚಂದ್ ಅವರು ಕ್ರೀಡೆ ನನ್ನನ್ನು ಸಿಪಾಯಿಂದ ಸೇನೆಯ ಮೇಜರ್‌ನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ. ಕ್ರೀಡೆಯು ವ್ಯಕ್ತಿಗಳನ್ನು ಕ್ರೀಯಾಶೀಲರನ್ನಾಗಿ ಮಾಡುತ್ತದೆ. ಕ್ರೀಡೆಯು ಜೀವನದ ಸಂಗಾತಿ ಇದ್ದಂತೆ ಎಂದು ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಬೋಧಕರಾದ ಡಾ. ಪ್ರದೀಪ್‌ಕುಮಾರ್ ಇವರು ಹೇಳಿದರು. 
ಕೊಪ್ಪಳದ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರದಂದು ರಾಷ್ಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರಾಸ್ತಾವಿಕ ಮಾತುಗಳನ್ನು ನುಡಿದರು.
ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಗೆಲುವಲ್ಲ. ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸಮಯ ಪಾಲನೆ, ಹಾಗೂ ಶಿಸ್ತನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬಹುದು. ಕ್ರೀಡೆಯು ನಮ್ಮ ಜೀವನಕ್ಕೆ ತುಂಬಾ ಅವಶ್ಯಕವಾಗಿದೆ ಎಂದು ಹೆಳಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹುಲಿಗೆಮ್ಮ ಬಿ ಇವರು ಕ್ರೀಡೆ ಇಲ್ಲದ ಜೀವನ ಗೆದ್ದಲು ಇಡಿದ ಗಿಡದಂತೆ. ಕ್ರೀಡೆಯಿಂದ ದೇಹ ಉಲ್ಲಾಸಭರಿತವಾಗುತ್ತದೆ. ಕ್ರೀಡೆಯು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ. ಮತ್ತು ಆಟಗಳು ಮನ-ಮನಗಳನ್ನು ಬೆಸಿದು, ನಮ್ಮ ಏಕಾಗ್ರತೆಯನ್ನು ಅಧಿಕಗೊಳಿಸುತ್ತವೆ. ಜನಪದ ಆಟಗಳಾದ ಲಗೋರಿ, ಪಗಡೆಯಾಟ, ಜೋಕಾಲಿಯಂತಹ ಗ್ರಾಮೀಣ ಆಟಗಳನ್ನು ಉಳಿಸಿಕೊಂಡು ಹೋಗಲು ಸಲಹೆ ನೀಡಿದರು. ಜೀವನದಲ್ಲಿ ಅತಿ ಹೆಚ್ಚು ಉಲ್ಲಾಸ ದೊರೆಯುವುದು ಕ್ರೀಡೆಗಳಿಂದ. ಬೆವರನ್ನು ಇಳಿಸುವ ಸಾಧನವೆಂದರೆ ಕ್ರೀಡೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ  ಮಹಾಂತೇಶ ಮುಧೋಳ, ಡಾ.ನರಸಿಂಹ ಇವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಕು. ಪರವೀನ್ ಕೆ ಹಾಗೂ ಕು ಭಾಗ್ಯಶ್ರೀ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶೈಕ್ಷಣಿಕವಾಗಿಯೂ ಕೂಡ ಉನ್ನತ ಸಾಧನೆಯನ್ನು ಮಾಡಬಹುದು ಎಂದು ಹೇಳಿದರು. ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಕ್ರೀಡಾ ಸಾಧನೆಯ ಕುರಿತಾದ ವಿಡಿಯೋವನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ನಾಗರತ್ನ ಬಿ ತಮ್ಮಿನಾಳ, ಶ್ರೀಮತಿ ಸುಮಿತ್ರ ಎಸ್.ವಿ, ಕಾಲೇಜಿನ ವ್ಯವಸ್ಥಾಪಕರಾದ   ಬಸವರಾಜ ಎಮ್ ಆರೇರ್, ಕು. ರಿಯಾಜ್‌ಪರವೀನ್ ಹಾಗೂ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿಯಾದ ಯಮನಕ್ಕ ನಿರೂಪಿಸಿದರು, ಪ್ರಾರ್ಥನೆಯನ್ನು ಭಾರತಿ ಹಾಗೂ ವಂದನಾರ್ಪಣೆಯನ್ನು   ಮಹಾಂತೇಶ ಮುಧೋಳ ಇವರು ನಿರ್ವಹಿಸಿದರು.

Please follow and like us:
error