ಸಮ್ಮೇಳನಾಧ್ಯಕ್ಷರಾಗಿ ಈಶ್ವರ ಹತ್ತಿ ಆಯ್ಕೆ

ಕೊಪ್ಪಳ: ಶಿವಪುರದಲ್ಲಿ ಜುಲೈ 31ರಂದು ಜರುಗಲಿರುವ ಕೊಪ್ಪಳ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ, ನಾಟಕಕಾರ ಈಶ್ವರ ಹತ್ತಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ‌ ಭಾನುವಾರ ಜರುಗಿದ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸದಸ್ಯರ ಸಭೆಯಲ್ಲಿ ತಾಲೂಕು ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ತೆರವಾದ ತಾಲೂಕಾಧ್ಯಕ್ಷ ಸ್ಥಾನಕ್ಕೆ ಸಕ್ರೀಯ ಸದಸ್ಯ ಚನ್ನಪ್ಪ ಕಡ್ಡಿಪುಡಿಯವರನ್ನು ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಯಿತು. ನಿಕಟಪೂರ್ವ ತಾಲೂಕಾಧ್ಯಕ್ಷ ಗಿರೀಶ್ ಪಾನಘಂಟಿಯವರು ಚನ್ನಪ್ಪ ಕಡ್ಡಿಪುಡಿಯವರಿಗೆ ಪರಿಷತ್ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ವಹಿಸಿದ್ದರು. ಈ ವೇಳೆ ಸದಸ್ಯರಾದ ಶರಣಪ್ಪ ಬಾಚಲಾಪುರ, ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ, ತಾಲೂಕು ಕೋಶಾಧ್ಯಕ್ಷ ಗವಿಸಿದ್ದೇಶ ಹುಡೇಜಾಲಿ, ಗೌರವ ಕಾರ್ಯದರ್ಶಿ ರಮೇಶ್ ತುಪ್ಪದ, ವೀರಭದ್ರಯ್ಯ ಭೂಸನೂರಮಠ, ರಾಮಚಂದ್ರ ಗೊಂಡಬಾಳ, ಯಮನೂರಪ್ಪ ಗಂಟಿ, ಬಸಪ್ಪ ದೇಸಾಯಿ, ಶಿವಕುಮಾರ ಕುಕನೂರ, ಈಶಪ್ಪ ದಿನ್ನಿ, ಜಗದೀಶ್ ಗುತ್ತಿ, ಮಂಜುನಾಥ ಅಂಗಡಿ, ಬಸವರಾಜ ಶಿರಗುಂಪಿಶೆಟ್ಟರ್ ಸೇರಿದಂತೆ ಇತರರು ಇದ್ದರು.
Please follow and like us:
error