ಸಮಾಜ ಸೇವಕ ರಾಜು ನಾಯಕ್ ರಿಂದ ನೀರು, ಹಣ್ಣುಗಳ ವಿತರಣೆ

ಕನ್ನಡನೆಟ್ ಕೊಪ್ಪಳ : ಕಳೆದ  ವರ್ಷ ಲಾಕಡೌನ್ ಸಂದರ್ಭದಲ್ಲಿ ಪೋಲಿಸರಿಗೆ, ಪತ್ರಕರ್ತರಿಗೆ, ಕರೊನ ವಾರಿಯರ್ಸಗಳಿಗೆ,ಬಡವರಿಗೆ ಎಲ್ಲರಿಗೂ ನೆರವಾಗಿದ್ದರು ಸಮಾಜ ಸೇವಕ ರಾಜು ನಾಯಕ್. ಈಗ ಮತ್ತೆ ಕರೋನಾದ 2ನೇ ಅಲೆ ಆರಂಭವಾಗಿದೆ. ಸರಕಾರ ಜನತಾ ಕರ್ಪ್ಯೂ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ತಾವೇ ಖುದ್ದಾಗಿ  ಎಲ್ಲೆಡೆ ತೆರಳಿ ಪೋಲಿಸರಿಗೆ, ಬಡವರಿಗೆ, ಪತ್ರಕರ್ತರಿಗೆ ನೀರು , ಹಣ್ಣು ವಿತರಿಸುವ ಸೇವೆ ಮಾಡುತ್ತಿದ್ದಾರೆ. ಕಳೆದ ವರ್ಷದ ಲಾಕಡೌನ್ ಸಂದರ್ಭದಲ್ಲಿ ಉಪಹಾರ, ಊಟ ಸೇರಿದಂತೆ ಎಲ್ಲ ರೀತಿಯಲ್ಲಿ ನೆರವಾಗಿದ್ದ ರಾಜು ನಾಯಕ ಕೊಪ್ಪಳದಲ್ಲಿ ತಮ್ಮ ಸಮಾಜ ಸೇವೆಯಿಂದ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಮತ್ತೊಮ್ಮೆ ಈ ಜನತಾಕರ್ಪ್ಯೂ ಸಂದರ್ಭದಲ್ಲಿ ನೆರವಿಗೆ ಮುಂದಾಗಿದ್ದಾರೆ.

Please follow and like us:
error