ಸಮಾಜವನ್ನು ವ್ಯಸನ ಮುಕ್ತವಾಗಿ ಮಾಡೋಣ-ಶ್ರೀನಿವಾಸ ಗುಪ್ತಾ

ಪದ್ಮವಿಭೂಷಣ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕೊಪ್ಪಳ ಜಿಲ್ಲಾ ಘಟಕದ ಸಭೆಯು ದಿ ೨೪  ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಜನಜಾಗೃತಿ ವೇದಿಕೆ ಕೊಪ್ಪಳ ಜಿಲ್ಲೆಯ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾರವರು, ನಿಕಟ ಪೂರ್ವ ಅಧ್ಯಕ್ಷರಾದ ದೇವೇಂದ್ರಪ್ಪ ಬಳೂಟಗಿ, ಗೌರವ ಸಲಹೆಗಾರರು ಮತ್ತು ಪ್ರಾದೇಶಿಕ ನಿರ್ದೇಶಕರಾದ ಪುರುಷೋತ್ತಮ.ಪಿ.ಕೆ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಸಭೆಯನ್ನು ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೇವೇಂದ್ರಪ್ಪ ಬಳೂಟಗಿರವರು ಮದ್ಯವ್ಯಸನಿಗಳಿಗೆ ಚಿಕಿತ್ಸೆ ನೀಡಿ ಅವರ ಪರಿವರ್ತನೆಗೆ ದಾರಿ ತೋರಿಸುತ್ತಿರುವ ಈ ಒಳ್ಳೆಯ ಯೋಜನೆ ನಮಗೆ ತೃಪ್ತಿಕೊಟ್ಟಿz. ಸಮಾಜವನ್ನು ವ್ಯಸನ ಮುಕ್ತವಾಗಿ ಮಾಡೋಣ ಪರಿಸರವನ್ನು ಸುಚಿತ್ವವಾಗಿ ಇಡುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಶುಭ ಹಾರೈಸಿದರು.
ಈ ಸಭೆಯಲ್ಲಿ ಹೈ.ಕ.ಪ್ರಾ ನಿರ್ದೇಶಕರಾದ ಪುರುಷೋತ್ತಮ.ಪಿ.ಕೆ ರವರು ಮಾತನಾಡಿ ಜನ ಜಾಗೃತಿ ವೇದಿಕೆಯ ೨೦೧೯-೨೦ ರ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಜೂನ್ ೨೬ ರ ಮಾದಕ ವಸ್ತು ವಿರೋದಿ ದಿನಾಚರಣೆ ದಿನ ಜಿಲ್ಲೆಯ ಎಸ್ಪಿ & ಡಿಎಸ್‌ಪಿಯವರಿಗೆ ಆಡಿiಟಿಞ & ಆಡಿive ವಿರೋಧಿಸುವ ಕುರಿತು ಜಿಲ್ಲಾ ವೇದಿಕೆಯಿಂದ ಹಕ್ಕೊತ್ತಾಯದ ಮನವಿ ಅಧಿಕಾರಿಗಳಿಗೆ ನೀಡುವ ಬಗ್ಗೆ ತಿಳಿಸಿದರು. ಜನ ಜಾಗೃತಿ ವೇದಿಕೆಯ ಪಧಾದಿಕಾರಿಗಳ ನಿಸ್ವಾರ್ಥ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾರವರು ಜಿಲ್ಲೆಯಲ್ಲಿ ೪ ಶಿಬಿರವನ್ನು ಉತ್ತಮವಾಗಿ ಸಂಘಟಿಸಿ ನಡೆಸೋಣ ಮತ್ತು ಜಿಲ್ಲೆಯಲ್ಲಿ ಪರಿಸರದ ಬಗ್ಗೆ ಅರಿವು ಮತ್ತು ಪ್ಲಾಸ್ಟಿಕ್ ಬಳಕೆಯ ಅಪಾಯದ ಕುರಿತು ಜನ ಜಾಗೃತಿ ಮೂಡಿಸುವ ಕೆಲಸ ವೇದಿಕೆಯಿಂದ ಮಾಡಿ, ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ಜನೋಪಯೋಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ/ನಿರ್ದೇಶಕರಾದ ಮುರಳೀಧರ್.ಹೆಚ್.ಎಲ್ ರವರು ೨೦೧೮-೧೯ ರ ವೇದಿಕೆಯ ಪ್ರಗತಿ ವರದಿ, ಖರ್ಚು ವೆಚ್ಚಗಳ ವರದಿ, ೨೦೧೯-೨೦ ರ ಕಾರ್ಯಕ್ರಮ ನಡೆಸಲು ಜಿಲ್ಲಾ ವೇದಿಕೆಯ ಸಹಕಾರದ ಬಗ್ಗೆ ತಿಳಿಸಿದರು.

೨೦೧೯-೨೦ ನೇ ಸಾಲಿನಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯಿಂದ ನಡೆಸಲಾಗುವ ಕಾರ್ಯಕ್ರಮಗಳು

೧. ಜಿಲ್ಲಾ ಜನಜಾಗೃತಿ ವೇದಿಕೆ ಮೂಲಕ ೦೪ ಮದ್ಯವರ್ಜನ ಶಿಬಿರ ನಡೆಸಿ ೨೪೦ ಜನ ಮದ್ಯವ್ಯಸನಿಗಳಿಗೆ ಚಿಕಿತ್ಸೆ ನೀಡುವುದು.
೨. ಮದ್ಯವರ್ಜನ ಶಿಬಿರ ನಡೆಸಲು ಪೂರಕವಾಗಿ ಸ್ಥಳೀಯ ಗಣ್ಯರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ೦೪ ವ್ಯವಸ್ಥಾಪನಾ ಸಮಿತಿ ರಚಿಸಿ ಸಮುದಾಯದ ಸಹಭಾಗಿತ್ವದಲ್ಲಿ ಶಿಬಿರ ನಡೆಸುವುದು.
೩. ಮದ್ಯವರ್ಜನ ಶಿಬಿರಗಳಲ್ಲಿ ಪಾನಮುಕ್ತರಾದ ಸದಸ್ಯರಿಗೆ ೩೫ ನವಜೀವನ ಸಮಿತಿ ರಚಿಸಿ ವೈಯಕ್ತಿಕ ಅಭಿವೃದ್ಧಿಗೆ ಪ್ರೇರಣೆ ನೀಡುವುದು.
೪. ನವ ಜೀವನ ಸಮಿತಿಯ ಮಾಸಿಕ ಸಭೆ/ವಾರ್ಷಿಕೋತ್ಸವ/ಕ್ಷೇತ್ರ ಭೇಟಿಯ ೮ ಕಾರ್ಯಕ್ರಮ ನಡೆಸುವುದು.

೫. ಜಿಲ್ಲೆಯ ೩೫ ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ದುಶ್ಚಟ ದುರಭ್ಯಾಸದ ಕುರಿತು ಅರಿವು ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಮತ್ತು ಸಾಕ್ಷ್ಯ ಚಿತ್ರಗಳ ಪ್ರದರ್ಶನ ನಡೆಸುವುದು
೬. ದುಶ್ಚಟ ಮುಕ್ತ ಸಮಾಜದ ಬಗ್ಗೆ ಅರಿವು ಮೂಡಿಸಲು ೧ ಮಹಿಳಾ ಸಮಾವೇ, ೨೦ ಜಾಗೃತಿ ಕಾರ್ಯಕ್ರಮ, ೪ ನವ ಜೀವನ ಸದಸ್ಯರ ಪ್ರೇರಣ ಶಿಬಿರ ನಡೆಸುವುದು.
೭. ಸಮುದಾಯದಲ್ಲಿ ಜಾಗೃತಿ ಮೂಡಿಸಲು ನಶೆಯೆಂಬ ನರಕ, ಮದ್ಯ ರಾಕ್ಷಸ, ನಡಿಗೆ ನವಜೀವನದೆಡೆಗೆ, ಪ್ರಗತಿಗಾಗಿ ಜನಜಾಗೃತಿ ಎಂಬ ೩೫ ಸಾಕ್ಷ್ಯ ಚಿತ್ರಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು
೮. ಆಕ್ಟೋಬರ್ ೨ ರ ಗಾಂಧಿ ಜಯಂತಿಯಂದು ಜಿಲ್ಲಾ ಮಟ್ಟದಲ್ಲಿ ೧ ಪಾನ ಮುಕ್ತರ ಸಮಾವೇಶ/ ಮದ್ಯ ಮುಕ್ತರ ಅಭಿನಂದನೆ ಕಾರ್ಯಕ್ರಮ ನಡೆಸುವುದು.

ಜಿಲ್ಲೆಯಲ್ಲಿ ಶ್ರೀ,ಕ್ಷೇ,ಧ,ಗ್ರಾ,ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಭಾಗಿತ್ವದಲ್ಲಿ ಈ ಮೇಲಿನ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಮಾಡುವುದಾಗಿ ವೇದಿಕೆಯ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ವೀರೇಶ ಬಂಗಾರ ಶೆಟ್ರು, ಜೊತೆ ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ ಸದಸ್ಯರಾದ ಸಿದ್ದಣ್ಣ ಜಕ್ಕಲಿ, ಮುದೇಗೌಡ, ರುದ್ರಪ್ಪ ಅಕ್ಕಿ, ವಿ.ವಿ.ಹಿರೇಮಠ, ಶರಣಪ್ಪ ದಾನಕೈ, ವೀರಪ್ಪ ನಿಂಗೋಜಿ, ಶ್ರೀಕಾಂತ ಸಜ್ಜನ್, ಬಾಳಪ್ಪ ಬಾರಕೇರ, ಜನಜಾಗೃತಿ ಯೋಜನಾಧಿಕಾರಿ ನಾಗೇಶ ವೈ, ಕೊಪ್ಪಳ ಜಿಲ್ಲೆಯ ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ, ರಾಜೇಶ, ವಿನಾಯಕ ನಾಯ್ಕ, ಶೇಖರಗೌಡರವರು ಉಪಸ್ಥಿತರಿದ್ದರು.

Please follow and like us:
error