ಸಮರ್ಪಕ ವಿದ್ಯುತ್ ಪೂರೈಕೆಗೆ ಸಿ.ವಿ ಚಂದ್ರಶೇಖರ ಆಗ್ರಹ 

ಕೊಪ್ಪಳ, ಜು.25: ಸರಕಾರ ರೈತರ ಪಂಪಸೆಟ್ ಗಳಿಗೆ ಈಗಿರುವ ಅವೈಜ್ಞಾನಿಕ ವ್ಯವಸ್ಥೆಯನ್ನು ಬದಲಾಯಿಸಿ ಏಕಕಾಲಕ್ಕೆ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ತ್ ಸದಸ್ಯ ಸಿ.ವಿ ಚಂದ್ರಶೇಖರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ರೈತರ ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪುರೈಕೆ ಮಾಡುವಲ್ಲಿ ಜೆಸ್ಕಾಂ ಸಂಪೂರ್ಣ ನಿರ್ಲಕ್ಷ್ಯೆ ಹೊಂದಿದೆ ಸದ್ಯ ಪೂರೈಸುತ್ತಿರುವ 7 ಘಂಟೆ 3 ಫೆಸ್ ನ್ನು ಏಕಕಾಲಕ್ಕೆ ನಿಡದೆ ಬೆಳಗಿನಜಾವ 3 ತಾಸು ಮಧ್ಯರಾತ್ರಿ 4 ತಾಸು ನಿಡುವುದರಿಂದ ರೈತರಿಗೆ ಅತೀವ ತೊಂದರೆಯಾಗಿದೆ. ಗ್ರಾಮಗಳಿಂದ ಒಂದು ಕಿ.ಮೀ. ಯಿಂದ 5 ಕಿ.ಮೀ ಯವರೆಗೆ ಇರುವ ಹೊಲಗದ್ದೆಗಳಿಗೆ, ಎದ್ದು ಬಿದ್ದು ಮಧ್ಯರಾತ್ರಿಯೇ ಹೊಗಿ ಮೂರು ನಾಲ್ಕು ತಾಸು ನೀರು ಹಾಯಿಸುವ ಪರಿಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ. ಈಗ ಪೂರೈಸುತ್ತಿರುವ 7 ತಾಸು ವಿದ್ಯುತ್ ರೈತರಿಗೆ ಸಾಲುತ್ತಿಲ್ಲ ಆದ್ದರಿಂದ ಸರಕಾರ ಕೂಡಲೆ ಏಕಕಾಲಕ್ಕೆ 10 ತಾಸು 3 ಫೆಸ್ ರೈತರಿಗೆ ವಿದ್ಯುತ್ ನಿಡಲು ಕ್ರಮಕೈಗೊಳ್ಳಬೇಕು ಇಂದು ರಾಜ್ಯದಲ್ಲಿ ಒಂದೆಡೆ ಕೊಪ್ಪಳ ಜಿಲ್ಲೆ ಸೇರಿದಂತೆ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವ ಪ್ರದೇಶದಲ್ಲಿ ಬರಗಾಲದ ಛಾಯೆ ಆವರಿಸಿದ್ದು ಮತ್ತೊಂದೆಡೆ ಮಲೆನಾಡು ಹಾಗು ಜಲಾಶಯಗಳ ಪ್ರದೇಶಗಳಲ್ಲಿ ಅಪಾರ ಮಳೆಯಾಗುತ್ತಿದೆ. ರಾಜ್ಯದ ಎಲ್ಲ ಜಲಾಶಯಗಳು ತುಂಬಿ ಹರಿಯುತ್ತಿದ್ದು ವಿದ್ಯುತ್ ಉತ್ಪಾದನೆಗೆ ಯಾವುದೇ ರೀತಿಯ ತೊಂದರೆ ಇಲ್ಲ. ಅದರ ಜೊತೆಗೆ ಪವನ ಶಕ್ತಿ, ಸೋಲಾರ್, ಹೀಗೆ ಎಲ್ಲ ರೀತಿಯ ವಿದ್ಯುತ್ ಉತ್ಪಾದನೆ ಇದ್ದರೂ ಸಿಹಿತ ರೈತರ ಜಮೀನುಗಳಿಗೆ ವಿದ್ಯುತ್ ಪೂರೈಕೆಯ ವಿಷಯಗಳಲ್ಲಿ ಸರಕಾರ ಅನುಸರಿಸುತ್ತಿರುವ ಧೋರಣೆ ಖಂಡನಿಯ. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ರೈತರ ವಿಷಯದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೆಕಾಗುತ್ತದೆ. ರೈತರ ವಿಶ್ವಾಸ ಕಳೆದುಕೊಂಡ ಸರಕಾರಗಳು ಬಹಳಷ್ಟು ದಿನ ಉಳಿಯುವದಿಲ್ಲ ಎಂದು  ತಿಳಿಸಿದ್ದಾರೆ.

Related posts