ಸಮರಸದ ಸಹಬಾಳ್ವೆಗೆ ಕಲೆ ಸಹಕಾರಿ: ಕೆ.ಕೆ ಮಕಾಳೆ

ಕೊಪ್ಪಳ  ; ಜಗತ್ತಿನ ಮೇರು ಕಲಾವಿದರಾದ ಲಿಯೋನಾರ್ಡ ಡ ವಿಂಚಿ ಅರ್ಥ ಪೂರ್ಣ ಕಲಾಕೃತಿಗಳನ್ನು ಜಗತ್ತಿಗೆ ನೀಡಿದ ಮಹಾನ್ ಕಲಾವಿದ. ಇವರು ರಚಿಸಿದ ಹಲವಾರು ಕಲಾಕೃತಿಗಳಲ್ಲಿ ಮೋನಾಲಿಸಾ ಕಲಾಕೃತಿ ಜಗತ್ಪ್ರಸಿದ್ದ ಕಲಾಕೃತಿಯಾಗಿದೆ. ಇಟಲಿ ದೇಶದಲ್ಲಿ ಜನಿಸಿದ ಡ ವಿನ್ಚಿ ನೈಜ ಹಾಗೂ ನವ್ಯ ಕಲಾಕೃತಿಗಳಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಲಲಿತ ಕಲೆಗಳು ಮನಸ್ಸಿಗೆ ಆನಂದವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಲೋಕೋಪಯೋಗಿ ಕಲೆಗಳು ಮತ್ತು ಆತ್ಮಾನಂದ ಕಲಾಕೃತಿಗಳು ಸಮಾಜದ ಸೌಹಾರ್ದ ಹಾಗೂ ಸಮರಸದ ಸಹಬಾಳ್ವೆಗೆ ಸಹಕಾರಿಯಾಗುತ್ತದೆ. ಕಲಾವಿದರಿಗೆ ಹಿಂದಿನ ಕಾಲದಲ್ಲಿ ಅಪಾರ ರಾಜಾಶ್ರಯ ನೀಡಿತ್ತಿದ್ದರು ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಮೂಲ ಕಲೆಗಳು ನಶಿಸಿ ಹೊಗುತ್ತಿವೆ. ಆದ್ದರಿಂದ ಸರಕಾರ ಕಲೆಗೆ ಹಾಗೂ ಕಲಾವಿದರಿಗೆ ಮಾನ್ಯತೆ ನೀಡಬೇಕೆಂದರು ಕೊಪ್ಪಳ ವಾತಾವರಣದಲ್ಲಿ ಕಲಾ ಪರಿಸರ ನಿರ್ಮಾಣ ಮಾಡಲು ಸದಾ ನಾನು ಸಹಕಾರಿ ನೀಡುತ್ತೇನೆ ಎಂದು ಕಲಾ ಪ್ರಾತ್ಯಕ್ಷತೆ ನೀಡಿ ಮಾತನಾಡಿದರು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರ ವಿಶ್ವಕಲಾ ದಿನಾಚರಣೆಯ ನಿಮಿತ್ಯ ಕಲಾಧಾಮ ನಾಸವಾಲೆ ಕಾಂಪ್ಲೆಕ್ಸ್ ಕೊಪ್ಪಳದಲ್ಲಿ ಕೊಪ್ಪಳ ಜಿಲ್ಲಾ ಕಲಾವಿದರ ಕಲಾ ಪ್ರದರ್ಶನ ಹಾಗೂ ಕಲಾ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಲೆ ಎಂಬುದು ಒಂದು ತಪಸ್ಸು ಕಲಾಯೋಗಿಯಾದವನು ಮಾತ್ರ ಕಲಾ ನಿಪುಣನಾಗಿ ಬೆಳೆಯಲು ಸಾಧ್ಯ. ಸದಾ ಸಾದನಾಶೀಲರಾಗಿರಬೇಕು. ಅಧ್ಯಯನಶೀಲರಾದವರು ಮಾತ್ರ ಈಜಗತ್ತಿನಲ್ಲಿ ಉಳಿಯುತ್ತಾರೆ ಅದರಂತೆ ಡ. ವಿಂಚಿ ಇಳಿವಯಸ್ಸಿನಲ್ಲೂ ರೇಖೆ ವರ್ಣಗಳ ಸಮ್ಮಿಲನದಲ್ಲಿ ನಿರತರಾಗಿ ಜಗದ್ವಿಖ್ಯಾತಿಯಾದರು. ಯುವ ಕಲಾವಿದರು ಸೀಮಿತವಾಗದೆ ಅಪಾರ ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಮಾನವನ ಮನಸ್ಸಿಗೆ ಆನಂದವನ್ನು ನೀಡುವ ಕಲೆಯನ್ನು ಮೊದಲು ಕಲಾವಿದ ಆನಂದಿಸಿ ಅನುಭವಿಸಿದಾಗ ಮಾತ್ರ ಕಲಾವಿದ ಇನ್ನೊಬ್ಬರಿಗೆ ಆನಂದ ನೀಡಬಲ್ಲ. ಸತತ ಕ್ರೀಯಾಶೀಲತೆ ಹಾಗೂ ಕ್ರೀಯಾ ಶೀಲತೆಯಿಂದ ಇಂದಿನ ದಿನಮಾನದಲ್ಲಿ ಕಲೆಯಿಂದ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ನಗರ ಸಭೆ ಸದಸ್ಯರಾದ ಶ್ರೀಮತಿ ಲತಾಶ್ರೀ ಚಿನ್ನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಲೆ ಹಾಗೂ ಕಲಾವಿದರ ಬೆಳವಣಿಗೆಗಾಗಿ ಸದಾ ಸಹಕಾರ ನೀಡುತ್ತೇವೆ. ಇಂತಹ ಕಲೆಗಳಿಂದ ಮಾನವೀಯ ಮೌಲ್ಯ ಹೆಚ್ಚುತ್ತದೆ. ಕಲಾವಿದರು ಕಲಾ ಪೋಷಕರು ಕಲೆಯನ್ನು ಉಳಿಸಿ ಬೆಳೆಸೋಣ ಎಂದರುಹಿರಿಯ ಚಿತ್ರಕಲಾವಿದರಾದ ರಾಜು ತೇರದಾಳ ಅಧ್ಯಕ್ಷತೆ ವಹಿಸಿದ್ದರು. ಲಲಿತಕಲಾ ಅಕಾಡೆಮಿ ಸದಸ್ಯರಾದ ಅನೀಸ್ ಪಾತಿಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರುಕಲಾವಿದ ಪ್ರವೀಣ ಗಾಯಕರ್ ನಿರೂಪಿಸಿದರು. ಗಂಗಾಧರ ಬಂಡಾನವರ ವಂದಿಸಿದರು ನಂತರ ಕೆ.ಕೆ ಮಕಾಳೆ ಹಾಗೂ ದೇವೆಂದ್ರ ಹುಡಾ ಅವರಿಂದ ನಿಸರ್ಗ ಚಿತ್ರ ಕುರಿತು ಕಲಾ ಪ್ರಾತ್ಯಕ್ಷತೆ ನೀಡಲಾಯಿತು. ಕೊಪ್ಪಳ ಜಿಲ್ಲಾ ಕಲಾವಿದರ ಹಲವಾರು ಕಲಾಕೃತಿಗಳು ಜನ ಮನ ಸೆಳೆದವು. ವೀರಣ್ಣ ವಂಟಿಗೋಡಿಮಠ, ರಮೇಶ ಗಾರವಾಡ ಗ್ಯಾನಪ್ಪ ವಾಲಿಕಾರ , ಚಿದಾನಂದ ಕಡೆಮನಿ ಅಶೋಕ ವೆಂಕಟಾಪೂರ , ಮಹಾಂತೇಶ ಬೆಳ್ಳಿ, ಸುರೇಶ, ಸಂತೋಷ ಚಿತ್ರಗಾರ ಕಲಾವಿದರು ಭಾಗವಹಿಸಿದ್ದರು.

Please follow and like us:
error