ಸದೃಢ ಕುಟುಂಬ,ಸುಭದ್ರ ಸಮಾಜ- ಜಮಾತೆ ಏ ಇಸ್ಲಾಮಿ ಹಿಂದ್ ಅಭಿಯಾನ


ಕೊಪ್ಪಳ : ಸಮಾಜದ ಮುಖ್ಯ ಘಟಕವಾಗಿರುವ ಕುಟುಂಬವು ಸದೃಡವಾದರೆ ಸಮಾಜವೂ,ದೇಶವೂ ಸುಭದ್ರವಾಗಿರುತ್ತೆ. ಈ ನಿಟ್ಟಿನಲ್ಲಿ ಜಮಾತೆ ಏ ಇಸ್ಲಾಮಿ ಹಿಂದ್ ಸಂಘಟನೆಯು ಸದೃಡ ಕುಟುಂಬ ಸುಭದ್ರ ಸಮಾಜ ಎನ್ನುವ ಅಭಿಯಾನವನ್ನು ಆರಂಭಿಸಿದೆ ಎಂದು ಅಭಿಯಾನ ಸಂಚಾಲಕಿ ನಗರಸಭೆ ಸದಸ್ಯೆ ಶ್ರೀಮತಿ ಸಬೀಯಾ ಸುಲ್ತಾನಾ ಹೇಳಿದರು.

ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ಕುಟುಂಬದ ಸದಸ್ಯರೊಳಗಿನ ಸಂಬಂದಗಳು ಬಿರುಕುಬಿಡುತ್ತಿವೆ. ಪರಸ್ಪರ ಅಪನಂಬಿಕೆ , ಜಗಳಗಳು ಹೆಚ್ಚಾಗಿ ಅಶಾಂತಿ ಹೆಚ್ಚಾಗುತ್ತಿದೆ ಇದನ್ನು ತಡೆಯುವುದಕ್ಕಾಗಿ ರಾಷ್ಟ್ರೀಯ ಅಭಿಯಾನ ನಡೆಯುತ್ತಿದ್ದು ಕೊಪ್ಪಳ ಜಿಲ್ಲೆಯಾದ್ಯಂತ ವಿವಿದೆಡೆ 19ರಿಂದ 28 ಫೆಬ್ರುವರಿಯ ತನಕ ವಿವಿಧ ಕಾರ್ಯಕ್ರಮಗಳನ್ನು, ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ನಗರದಲ್ಲಿ 40 ಸ್ಥಳಗಳಲ್ಲಿ ಕಾರ್ನರ್ ಮೀಟಿಂಗ್, 28 ಸ್ಥಳಗಳಲ್ಲಿ ಟೀಪಾರ್ಟಿಗಳು, 30ಕ್ಕೂ ಹೆಚ್ಚು ಸೌಹಾರ್ಧಕೂಟಗಳನ್ನು ಏರ್ಪಡಿಸಲಾಗಿದೆ. ಮನೆಮನೆಗಳಿಗೆ, ಓಣಿಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಮನೆಯ ಸುಖ, ಶಾಂತಿಯ ತೊಟ್ಟಿಲು ಮತ್ತು ಸಮಾಜದಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದಡಿ 5 ನಿಮಿಷದ ವಿಡಿಯೋ ಕ್ಲಿಪ್ಪನ್ನು ವಾಟ್ಸಪ್ ನಂಬರಿಗೆ, ಕಳುಹಿಸಬೇಕು, ಗುಂಪು ಚರ್ಚೆಗಳು ಹಾಗೂ ಬೀದಿ ನಾಟಕಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಫೇರೋಜಾ ಬಾನು, ಜಿಲ್ಲಾ ಸಂಘಟಕಿ ಶ್ರೀಮತಿ ಹುಮೇರಾ ಜಮದಾರ, ಸಲಿಂ ಬೇಗಂ ನಗರ ಸಂಚಾಲಕಿ ರಿಜ್ವಾನಾ ಬೇಗಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error