ಸತತ ಪ್ರಯತ್ನವೇ ಸಾಧನೆಗೆ ಕಾರಣ – ಬಸವರಾಜಯ್ಯ ಹಿರೇಮಠ


ಭಾಗ್ಯನಗರ ಜನೇವರಿ ೦೪ : ಮಕ್ಕಳು ಸೋಲಿನಿಂದ ಕಂಗೆಡದೆ ದೃಢಸಂಕಲ್ಪದಿಂದ ಸತತ ಪ್ರಯತ್ನವನ್ನು ಮಾಡಿದರೆ ಸಾಧನೆ ಸಾಧ್ಯವಾಗುತ್ತದೆ ಎಂದು ಸಾ.ಶಿ.ಇ. ಕೊಪ್ಪಳದ ಪ್ರಭಾರಿ ಉಪನಿರ್ದೇಶಕರಾದ ಬಸವರಾಜಯ್ಯ ಹಿರೇಮಠ ಹೇಳಿದರು.
ಅವರು ಪಟ್ಟಣದ ಜ್ಞಾನ ಬಂಧು ಪ್ರಾಥಮಿಕ & ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಬಹುಮಾನ ವಿತರಣಾ ಸಮಾರಂಭ’ ವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಹಿನ್ನಡೆಯಿಂದ ಧೃತಿಗೆಡದೆ ಸತತ ಪ್ರಯತ್ನ ಪರಿಶ್ರಮದಿಂದ ಏನಾದರೂ ಸಾಧಿಸಬಹುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ್ದ ಮಂಜುನಾಥ ಗುಂಡೂರು ತಮ್ಮದೆ ಜೀವನದ ಉದಾಹರಣೆಯಿಂದ ಮಕ್ಕಳಿಗೆ ಸ್ಪೂರ್ತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ಅವರು ಮಾತನಾಡಿ ಜ್ಞಾನಬಂಧು ಶಾಲೆಯು ಮಕ್ಕಳಿಗೆ ಸಕಲ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿ ಅವರ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿದೆ ಎಂದು ಶಾಲೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಮಾರಂಭಕ್ಕೆ ಆಗಮಿಸಿದ್ದ ಅಹ್ವಾನಿತ ಅತಿಥಿಗಳಿಗೆ ಶಾಲಾ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷರಾದ ದಾನಪ್ಪ ಕವಲೂರು, ಪ್ರಾಂಶುಪಾಲರಾದ ಕೆ.ರೋಸ್ ಮೇರಿ ಮೂಖ್ಯೋಪಾಧ್ಯಾಯರಾದ ಶ್ರೀಮತಿ. ಜ್ಯೋತಿ ಎಸ್.ಎಸ್. ಶಿಕ್ಷಕ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಮಲ್ಲಿಕಾರ್ಜುನ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶಿಕ್ಷಕಿ ಶ್ರೀಮತಿ ನಿಂಗಮ್ಮ ಸ್ವಾಗತಿಸಿ, ವಂದಿಸಿದರು.

Please follow and like us:
error