ಸತತ ಪರಿಶ್ರಮ ಪ್ರಯತ್ನದಿಂದ ಯಶಸ್ಸು ಖಂಡಿತವಾಗಿಯು ಪಡೆಯಲು ಸಾಧ್ಯ

.ಕೊಪ್ಪಳ ೫ ಜ: ಪ್ರಯತ್ನದಿಂದ ಎಂತಹ ಸಾಧನೆಯಾದರೂ ಮಾಡಲು ಸಾಧ್ಯವಾಗುವುದು. ಒಳ್ಳೆಯ ಹುದ್ದೆಯನ್ನು ಪಡೆಯಬೇಕಾದರೆ ಉತ್ತಮ ಜ್ಞಾನ ಹಾಗೂ ಪರೀಕ್ಷೆ ಎದುರಿಸಲು ಉತ್ತಮ ಮಾರ್ಗದರ್ಶನ ಅಗತ್ಯವಿದೆ. ಇಂತಹ ಜ್ಞಾನ ಮಾರ್ಗದರ್ಶನ ನೀಡುವ ಕೇಂದ್ರಗಳು ಎಂದರೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಾಗಿವೆ ಎಂದು ಪ್ರೊ. ಶರಣಬಸಪ್ಪ ಬಿಳಿಎಲಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೋಶದಿಂದ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ಅವಕಾಶಗಳಿಗೇನೂ ಕೊರತೆಯಿಲ್ಲ. ಸರಿಯಾದ ತರಬೇತಿ ಮೂಲಕ ಪಡೆದು ಸಿಕ್ಕಿರುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಬೇಕು. ಸತತ ಪರಿಶ್ರಮ ಪ್ರಯತ್ನದಿಂದ ಉತ್ತಮ ಜ್ಞಾನ ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದಾಗ ಯಶಸ್ಸು ಖಂಡಿತವಾಗಿಯು ಪಡೆಯಲು ಸಾಧ್ಯವಾಗುವುದು. ಆದ್ದರಿಂದ ತಾವೆಲ್ಲರೂ ಮಹಾವಿದ್ಯಾಲಯದ ತರಬೇತಿ ಕೇಂದ್ರದಲ್ಲಿ ಉತ್ತಮ ತರಬೇತಿ ಪಡೆದು ತಾವೆಲ್ಲರೂ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ಸು ಕಂಡಾಗ ತರಬೇತಿ ಕೇಂದ್ರದ ಸೇವೆ ಸಾರ್ಥಕವಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೆ.ಎಸ್.ಪಾಟೀಲ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಪಡೆದರೆ ಸಾಲದು ಒಳ್ಳೆಯ ಉದ್ಯೋಗ ಸಹ ಪಡೆದರೆ ಬದುಕು ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ಈ ತರಬೇತಿ ಕೇಂದ್ರದ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ಆಯೋಜಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೋಶದ ಸಂಯೋಜಕರಾದ ವೆಂಕಟೇಶ ನಾಯ್ಕ ಅವರು ಪ್ರಾಸ್ತಾವಿಕ ಮಾತನಾಡಿದರು. ಡಾ. ನಾಗರಾಜ ದಂಡೋತಿ, ವಿನೋದ ಮುದಿಬಸನಗೌಡರ, ಪ್ರವೀಣ ಹಾದಿಮನಿ, ಮಂಜುನಾಥ ಗಾಳಿ, ಆದಿತ್ಯ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Please follow and like us:
error