ಸಗಟು ವ್ಯಾಪಾರಕ್ಕೆ ವಿನಾಯಿತಿ: ಮಾರ್ಗಸೂಚಿ ಅನುರಿಸುವಂತೆ ಜಿಲ್ಲಾಧಿಕಾರಿಗಳ ಸೂಚನೆ

ಕೊಪ್ಪಳ ಏ.  : ಕೋವಿಡ್-19 ಸೋಂಕಿನ ನಿಯಂತ್ರಣಕ್ಕಾಗಿ ದೇಶವು ಲಾಕ್‌ಡೌನ್ ಆದ ಸ್ಥಿತಿಯಲ್ಲಿ ಅವಶ್ಯಕ ಪದಾರ್ಥಗಳ ವ್ಯಾಪಾರ ವಹಿವಾಟು ಪ್ರಾರಂಭಿಸುವ ಕುರಿತು, ಹಣ್ಣು, ತರಕಾರಿ ಸೇರಿದಂತೆ ಆಹಾರ ಸಗಟು ವ್ಯಾಪಾರಕ್ಕೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದ ಪ್ರಯುಕ್ತ ವ್ಯಾಪಾರಕ್ಕೆ ಜನ ಸೇರುವ ಬಗ್ಗೆ ಮತ್ತು ಮಾರ್ಗಸೂಚಿ ಅನುಸರಿಸುವ ಕುರಿತಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅನುಸರಣಾ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ.
ಕಳೆದ ವರ್ಷ 2019ರ ಮಾರ್ಚ್ 23 ರಿಂದ ಏಪ್ರಿಲ್ 2 ರವರೆಗೆ ಗಂಗಾವತಿಯಲ್ಲಿ ಭತ್ತ 70,000 ಕ್ವಿಂ., ಅಕ್ಕಿ-67,233 ಕ್ವಿಂ. ಮತ್ತು ಕಾರಟಗಿಯಲ್ಲಿ ಭತ್ತ-67,622 ಕ್ವಿಂ., ಅಕ್ಕಿ-19,250 ಕ್ವಿಂಟಾಲ್ ಆವಕವಿತ್ತು.  ಈ ವರ್ಷದಲ್ಲಿ ಲಾಕ್‌ಡೌನ್ ಇದ್ದ ಕಾರಣ ಮಾರ್ಚ್ 23 ರಿಂದ ಏಪ್ರಿಲ್ 2 ರವರೆಗೆ ಗಂಗಾವತಿಯಲ್ಲಿ ಭತ್ತ-2,659 ಕ್ವಿಂ., ಅಕ್ಕಿ-19,250 ಕ್ವಿಂ. ಹಾಗೂ ಕಾರಟಗಿಯಲ್ಲಿ ಭತ್ತ-13,670 ಕ್ವಿಂ., ಅಕ್ಕಿ-8,808 ಕ್ವಿಂ. ಆವಕವಿರುತ್ತದೆ. ಈ ಮಧ್ಯೆ ಕಳೆದ 1 ವಾರದ ಸಮಯದಲ್ಲಿ ಗಂಗಾವತಿ ಮತ್ತು ಕಾರಟಗಿಯಲ್ಲಿ ಒಟ್ಟು 86 ರೈಸ್‌ಮಿಲ್‌ಗಳ ಪೈಕಿ 30 ರೈಸ್‌ಮಿಲ್‌ಗಳು ಕ್ರಿಯಾಶೀಲವಾಗಿದ್ದು, ದಿನಂಪ್ರತಿ 100-150 ಕ್ವಿಂಟಾಲ್ ಭತ್ತವನ್ನು ರೈತರು ಮಿಲ್‌ಗಳಿಗೆ ನೀಡುತ್ತಿದ್ದು, ಮಿಲ್‌ಗಳಿಂದ 2,500 ಕ್ವಿಂಟಲ್ ರಫ್ತಾಗುತ್ತಿರುವುದರಿಂದ ಯಾವುದೇ ಆಹಾರ ಉತ್ಪನ್ನ, ಮಾರಾಟ, ಮಾರುಕಟ್ಟೆ ಸಾಗಾಣಿಕೆಗೆ ವ್ಯತ್ಯಯವಾಗುವುದಿಲ್ಲ. ಈ ಸಂದರ್ಭದಲ್ಲಿ ಮಾರುಕಟ್ಟೆ ಪ್ರಾರಂಭಿಸಿದಲ್ಲಿ ಸಾವಿರಾರು ಜನ ಸೇರುವುದರಿಂದ ಆತಂಕಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಪೇಟೆ ಕಾರ್ಯಕರ್ತರು ಮಾರುಕಟ್ಟೆ, ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿ, ಮಳಿಗೆ, ಗೋದಾಮುಗಳನ್ನು ತೆರೆಯಬಾರದು. ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಇತರೆ ವ್ಯವಹಾರ ಚಟುವಟಿಕೆಗಳನ್ನು ನಡೆಸಬಾರದು.
ಸಮಿತಿಯಿಂದ ಲೈಸೆನ್ಸ್ ಪಡೆದ ವರ್ತಕರು ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿಯನ್ನು ತೆರೆಯದೇ, ವರ್ತಕರು ರೈತರೊಂದಿಗೆ ಸಂಕರ್ಪ ಸಾಧಿಸಿ ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅನುಮತಿ ನೀಡಲು ತೀರ್ಮಾನಿಸಲಾಗಿದೆ.  ಲೈಸೆನ್ಸ್ ಪಡೆದ ವರ್ತಕರು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸುವ ಸಂಬAಧ ಲೈಸೆನ್ಸ್ದಾರರನ್ನು ಗುರುತಿಸಲು ಅವಶ್ಯಕವಿರುವ ದಾಖಲೆಗಳನ್ನು ಆಯಾ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ವಿವರವನ್ನು ಪಡೆದು ಒಬ್ಬ ಲೈಸೆನ್ಸ್ದಾರರಿಗೆ ಗರಿಷ್ಟ 5 ಸಂಖ್ಯೆಯ ಪಾಸ್‌ಗಳ ಅಂಕಿ ಅಂಶವಾರು ವಿವರಗಳನ್ನು ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೊಪ್ಪಳ ಇವರಿಂದ ಪಡೆದುಕೊಂಡು, ಪೇಟೆಕಾರ್ಯಕರ್ತರು ಸಮಿತಿಯಿಂದ ಲೈಸೆನ್ಸ್ ಪಡೆದ ಕನಿಷ್ಟ 5 ಜನ ಹಮಾಲರೊಂದಿಗೆ ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಬಳಸಿಕೊಳ್ಳತಕ್ಕದ್ದು. ಈ ವ್ಯವಹಾರದ ಬಗ್ಗೆ ಅದೇ ದಿನ ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರಿಗೆ ಮತ್ತು ಸಮಿತಿಗೆ ಮಾಹಿತಿ ನೀಡಬೇಕು. ಈ ವ್ಯವಸ್ಥೆಯು ಏಪ್ರಿಲ್ 3 ರಿಂದ ಜಾರಿಗೆ ಬರುತ್ತದೆ. ಆದ್ದರಿಂದ ಸಾರ್ವಜನಿಕರು ಹಾಗೂ ವರ್ತಕರು, ರೈತರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error