ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ ಅವರು ಕಂಡ ಕನಸು ನನಸು ಮಾಡಲಿ :ಸಯ್ಯದ ಖಾಲೀದ ಕೊಪ್ಪಳ

ಗದಗ ;
ಡಾ.ಬಿ.ಆರ್.ಆಂಬೇಡ್ಕರ ಅವರ ೧೨೮ ನೇ ಜಯಂತಿ ಅಂಗವಾಗಿ ಬಾನುವಾರ ಗದಗ – ಬೆಟಗೆರಿ ನಗರಸಭೆ ಆವರಣದಲ್ಲಿರುವ ಡಾ.ಬಿ.ಆರ್.ಆಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದ ಸಯ್ಯದ ಖಾಲೀದ ಕೊಪ್ಪಳ ರವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ ಅವರು ಕಂಡ ಕನಸು ನನಸು ಮಾಡಲಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಅಸಂಖ್ಯಾತ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ಜೀವನ ಉಜ್ವಲಗೊಳಿಸಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ್ ತತ್ವಾದರ್ಶಗಳನ್ನು ಅನುಕರಿಸಿ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯುವುದರೊಂದಿಗೆ ದೇಶವನ್ನು ಕಟ್ಟುವ ಕೆಲಸ ಮಾಡಬೆಕಾಗಿದೆ. ಹಿಂದುಳಿದ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದವರನ್ನು ಪ್ರಗತಿ ಮಾಡುವ ಯೋಜನೆಗಳಿಗಾಗಿ ಸರಕಾರ ಶ್ರಮಿಸಬೇಕಾಗಿದೆ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಸಂಸ್ಥಾಪಕ ರಾಜ್ಯಾದ್ಯಕ್ಷ ಸಯ್ಯದ ಖಾಲೀದ ಕೊಪ್ಪಳ ಹೇಳಿದರು.

ಈ ಸಂದರ್ಭದಲ್ಲಿ ಅ ಕ ಜ ವೇ ಯ,ಅಕ್ಬರಲಿ ಬೇಗ, ಎಮ್ ಪಿ ಮುಳಗುಂದ, ಇಸ್ಮಾಲ್ ಕೊಪ್ಪಳ, ಪೂಜಾ ಬೇವೂರ, ಶಕುಂತಲಾ ಗಂಗಾವತಿ,ನಸೀಮ್ ಬೆಗ್, ಸುರೇಶ ಹಳ್ಳಿಕೇರಿ,ಮುಬಾರಕ್ ನರೇಗಲ್ ,ಕೀರಣ ಗಂಗಾಮತಿ,ಶಂಕರ್ ಗೋಪಾಲಿ ,ಆಶೀಪ್ ಕದಡಿ,ಅಲ್ತಾಪ್ ,ದಾವಲ್ ರೋಣದ,ನಾಗರಾಜ ಎರಗುಡಿ, ,ಸಮೀರ್ ಮುಳಗುಂದ,ಚಾನಂದ ಜಕನಿ,ದಾವಲ್ ಸಾಬ್ ಕಂಪ್ಲಿ,ವೀರುಪಾಕ್ಷ,ಜಿಶಾನ್ ಖಾಜಿ, ಸೇರಿದಂತೆ ಹಲವರು ಹಾಜರಿದ್ದರು.

Please follow and like us:
error