ಸಂಪೂರ್ಣ ಲಾಕ್ ಡೌನ್ ಮಾಡಿ, ಪ್ರತಿಕುಟುಂಬಕ್ಕೆ ತಿಂಗಳಿಗೆ 5 ಸಾವಿರ ರೂ ಹಣ ಘೋಷಣೆ ಮಾಡಿ:  ಬಯ್ಯಾಪುರ

ಕೊಪ್ಪಳ : ದೇಶದ್ಯಾಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಮಾಡಿ, ಪ್ರತಿಕುಟುಂಬಕ್ಕೆ ತಿಂಗಳಿಗೆ ಐದು ಸಾವಿರ ರೂ ಹಣ ಪರಿಹಾರದ ರೂಪದಲ್ಲಿ ಘೋಷಣೆ ಮಾಡಿ ಮಾಡಬೇಕೆಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು. ಅವರು ಜಿಲ್ಲೆಯ ಕುಷ್ಟಗಿ ಪಟ್ಟಣ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿ, ರಾಜ್ಯದಲ್ಲಿ ಆರೋಗ್ಯದ ವ್ಯವಸ್ಥೆ ಹದಗೆಟ್ಟಿದೆ, ಮೊದಲನೇ ಅಲೆಗಿಂತಲೂ ತೀವ್ರ ರೀತಿಯಲ್ಲಿ ಕೊರೊನಾ ಹಬ್ಬುತ್ತಿದೆ. ಇನ್ನೂ ವಯೋವೃದ್ದರು ಕೊರೊನಾಗೆ ಬಲಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಯಾವುದಾದರೂ ಬೇರೆ ರೋಗ ಇದ್ದರೆ ಕೊರೊನಾವೂ ಅಹ ಅವರನ್ನು ಬಲಿ ಪಡೆಯುತ್ತಿದೆ. ಈ ಕಾರಣಕ್ಕೆ ಜನರು ಜಾಗೃತರಾಗಬೇಕು ಎಂದು ಮನವಿ ಮಾಡಿದರು. ಅಲ್ಲದೆ ಜಿಲ್ಲೆಯ ಆಕ್ಸಿಜನ್, ವೆಂಟಿಲೇಟರ ಕೊರತೆ ಇಲ್ಲ. ಆದರೆ ವೆಂಟಿಲೇಟರ ಆಪರೇಟಿಂಗ್ ಮಾಡೋ ತಜ್ಞರ ಕೊರತೆ ಇದೆ.ಈ ಬಗ್ಗೆ ಸರ್ಕಾರ ಸ್ಪಂದಿಸಬೇಕು‌, ಮೊದಲು ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲೇಬೇಕು ಎಂದರು

Please follow and like us:
error