ಸಂಗೀತ ಶಿಕ್ಷಕ ಅಂಬಣ್ಣ ಕೊಪ್ಪರದ ನಿಧನ  

Koppal  ಸಂಗೀತ ಶಿಕ್ಷಕ  ಅಂಬಣ್ಣ ಕೊಪ್ಪರದ ಅವರು ಇಂದು ಹೃದಯಘಾತವಾಗಿ ನಿಧನ ಹೊಂದಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತದೆ. ತಾವರಗೇರಿಯವರಾದ ಇವರು ಹುಟ್ಟುಗುರುಡರಾಗಿರಲು ತಂದೆ ತಾಯಿಯವರು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತಂದು ಬಿಟ್ಟರು, ಪಂಡೀತ ಪುಟ್ಟರಾಜ ಗವಾಯಿಗಳವರಿಂದ ಶಿಕ್ಷಣಪಡೆದು ಕನಿಷ್ಠ 15ವರ್ಷ ಗದುಗಿನಲ್ಲಿ ಆಶ್ರಮದಲ್ಲಿ ಸಂಗೀತ ಕಲಿತು ಗುರುಗಳ ಆಶೀರ್ವಾದದಿಂದ ಸರಕಾರಿ ಸಂಗೀತ ಶಿಕ್ಷಕರಾಗಿ ಪ್ರಥಮವಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಸೇವೆ ಸಲ್ಲಿಸಿ, ಕೊಪ್ಪಳ ಜಿಲ್ಲೆಯಲ್ಲಿ ವರ್ಗಾವಣೆಯಾದರು ಮತ್ತು ಕೊಪ್ಪಳದಲ್ಲಿಯೇ ನಿವೃತ್ತಿಹೊಂದಿದರು. ಕೊಪ್ಪಳದಲ್ಲಿ ಅನೇಕ ಸಂಗೀತ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಅಪಾರವಾದ ಸಂಗೀತ ಹೇಳಿಕೊಟ್ಟು ಅನೇಕ ಸಂಗೀತ ಶಿಷ್ಯ ಬಳಗವೇ ಮಾಡಿದ್ದಾರೆ, ಅವರಲ್ಲಿ ಒಬ್ಬರಾದ   ವೀರೇಶ ಹಿಟ್ನಾಳ ಅವರು ಖ್ಯಾತ ಗವಾಯಿಗಳಾಗಿದ್ದಾರೆ. ರಾಷ್ಟ್ರೀಯ ಗಾಯಕರಿಗೂ ಅವರು ಚಿರಪರಿಚಿತರಿದ್ದಾರೆ ಎಲ್ಲರಿಗೂ ಸಾಥ ಮಾಡುತ್ತಾರೆ.    ಅಂಬಣ್ಣಕೊಪ್ಪರದವರು ಕರ್ನಾಟಕಲ್ಲಿಯೇ  ಕೊಳಲು ವಾದನದಲ್ಲಿ ಪ್ರಥಮ ರ್ಯಾಂಕ್ ಪಡೆದವರಿದ್ದಾರೆ ಅನೇಕ ಪ್ರಶಸ್ತಿಗಳು ಪಡೆದಿದ್ದಾರೆ. ಅಂಥವರ ಬಳಿಯಲ್ಲಿ ನಾವು ಸಹಿತ ಸಂಗೀತ ಕಲಿತದ್ದು ನಮ್ಮ ಪುಣ್ಯವೆಂದು ಭಾವಿಸಿದ್ದೇನೆ. ಒಂದು ಹೆಣ್ಣು, ಒಂದು ಗಂಡು ಮಗ ಮೊಮ್ಮಕ್ಕಳನ್ನು ಅಗಲಿ ಅನೇಕ ಶಿಷ್ಯಬಳಗವನ್ನು ಅಗಲಿ ಶಿವಲೋಕಕ್ಕೆ ತೆರಳಿದ್ದಾರೆ.

 

ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಅವರ ಅಂತ್ಯಕ್ರಿಯೆ ಇಂದು 12 ಗಂಟೆಯೊಳಗೆ ಕೊಪ್ಪಳ ಭಾಗ್ಯನಗರದಲ್ಲಿ   ನಡೆಯುತ್ತದೆಂದು ತಿಳಿದು ಬಂದಿದೆ.

ಕಲಾವಿದರ ಬಳಗವಾದ ಖ್ಯಾತ ಕೊಳಲು ವಾದಕರಾದ ನಾಗರಾಜ ಶ್ಯಾವಿ ಗೋವಿಂದರಾಜ ಬೊಮ್ಮಲಾಪುರ, ಸದಾಶಿವ ಪಾಟೀಲ, ರಾಮಚಂದ್ರಪ್ಪ ಉಪ್ಪಾರ, ಮಾರುತಿ ದೊಡ್ದಮನಿ, ರಾಘವೇಂದ್ರ ಗಂಗಾವತಿ, ಕೃಷ್ಣ ಸೊರಟೂರು ಇನ್ನೂ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ.

Please follow and like us:
error