ಸಂಕ್ರಾಂತಿ ಹಬ್ಬ ಬಂದರೆ ಈ ಊರಿನ ಶ್ವಾನಗಳಿಗೆ ಸಂಭ್ರಮ !

Sankranti Special

ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಸಡಗರದಿಂದ ಆಚರಿಸುತ್ತಾರೆ. ಇದು ಎಲ್ಲರಿಗೂ ಗೊತ್ತು. ಆದರೆ ಸಂಕ್ರಾಂತಿ ಹಬ್ಬ ಬಂದರೆ ಈ ಊರಿನ ನಾಯಿಗಳು ಸಂಭ್ರಮಿಸುತ್ತವೆ ಯಾಕಂತೀರಾ ಇಲ್ಲಿದೆ ಮಾಹಿತಿ ನೋಡಿ.. 

ಪ್ರತಿಯೊಂದು ನಾಯಿಗೆ ಒಳ್ಳೆಯ ಕಾಲ ಬರುತ್ತೆ ಅಂತಾರೆ  ಅದು ನಿಜ ಎನ್ನುತ್ತಿದೆ ಈ ಊರು…ಹಬ್ಬ ಎಂದ ಮೇಲೆ ಒಂದೊಂದು ಕಡೆ ಒಂದೊಂದು ರೀತಿ. ಆದರೆ ಈ ಊರಲ್ಲಿ ಆಚರಿಸುವ ರೀತಿ ನೋಡಿದರೆ ನಿಮಗೇ ಆಶ್ಚರ್ಯ ಆಗುತ್ತೆ. ಸಂಕ್ರಾಂತಿ ಹಬ್ಬವನ್ನು  ಆ ಗ್ರಾಮದಲ್ಲಿ  ವಿಭಿನ್ನವಾಗಿ  ಆಚರಿಸ್ತಾರೆ.  ಗಂಡನ  ಮನೆಗೆ  ಹೋಗಿದ್ದ ಮಗಳು ಅಳಿಯನ್ನ ಮನೆಗೆ ಕರೆತಂದು ಸಡಗರ ಸಂಭ್ರದಿಂದ ಹಬ್ಬ  ಮಾಡ್ತಾರೆ. ಹೊಸ ಹೊಸ  ಉಡುಪುಗಳನ್ನ  ಧರಿಸಿ, ನಾನಾ ಬಗೆಯ ಸಿಹಿ ತಿನಿಸುಗಳನ್ನಮಾಡ್ತಾರೆ, ಅಷ್ಟೆ ಅಲ್ಲ, ಸಂಕ್ರಾಂತಿ ಹಬ್ಬ ಬಂದ್ರೆ ನಾಯಿಗಳಿಗೆ ಎಲ್ಲಿಲ್ಲದೆ ಆತಿಥ್ಯ. ನಾಯಿಗಳಿಗಾಗಿ ತುಪ್ಪ ಕಾಳು ಹಾಕಿ ಮಾಡಿದ ಮೃಷ್ಠಾನ್ನ ಭೋಜನ ಬೇರೆ.   .

ಕೊಪ್ಪಳದ ಗಂಗಾವತಿ ತಾಲೂಕಿನ ಸೋಮನಾಳಕ್ಯಾಂಪ್ ನಲ್ಲಿ ಸಂಕ್ರಾಂತಿ ಹಬ್ಬವನ್ನು ಫುಲ್ ಗ್ಯಾಂಡ್ ಆಗಿ ಮಾಡ್ತಾರೆ. ಬೆಳೆಗ್ಗೆಯಿಂದ ಎಣ್ಣೆಸ್ನಾನ ಮಾಡಿ, ಹೊಸ ಉಡುಪುಗಳನ್ನ ಧರಿಸ್ತಾರೆ. ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ  ಹಬ್ಬದ ಕಳೆ ಹೆಚ್ಚುವಂತೆ ಮಾಡ್ತಾರೆ. ಗಂಡನ ಮನೆಯಲ್ಲಿದ್ದ ಮಗಳ ಮತ್ತು ಅಳಿಯನನ್ನು ತವರು ಮನೆಗೆ ಕರೆತಂಡು ತುಂಬು ಕುಟುಂಬಸಮೇತ ಈ ಹಬ್ಬವನ್ನು ಮಾಡ್ತಾರೆ. ಮನೆಯಲ್ಲಿ  ಹತ್ತಾರು ಬಗೆಯ  ಸಿಹಿ ತಿನಿಸು, ಚಕ್ಕಲಿ, ಹುಂಡಿಗಳನ್ನ ಮಾಡಿ ಹಬ್ಬದ ಸವಿಯನ್ನ ಸವಿತಾರೆ. ಸುಗ್ಗಿಕಾಲದ ಸಂಭ್ರದಲ್ಲಿ ಬರುವ ಈ ಮರಕ ಸಂಕ್ರಾತಿ. ಈ ಮಕರ ಸಂಕ್ರಾಂತಿ ಅಂದ್ರೆ ಸೂರ್ಯ ತನ್ನ ಪಥವನ್ನ ಬದಲಿಸುವ ಕಾಲ. ಸುಗ್ಗಿಕಾಲದಲ್ಲಿ ಬೆಳೆದ ದವಸಧಾನ್ಯಗಳನ್ನ ಅಡುಗೆ ಮಾಡಿ ಪೂಜೆ ಸಲ್ಲಿಸಿ ದೇವರಿಗೆ ನೈವೇದ್ಯ ಮಾಡಿ ನಂತರ ಊಟ ಮಾಡ್ತಾರೆ. ಆಕಳ ಸಗಣಿಯಿಂದ ಬೆರಣಿಯಿಂದ ಹಾರ ಮಾಡಿ(ಕುಳ್ಳು) ಚಿಕ್ಕಮಕ್ಕಳ ಕೊರಳಲ್ಲಿ  ಹಾಕಿ ದುಷ್ಟ ನರಕಾಸುರನ ಕಾಟ ಇಂದೆ ಕೊನೆಯಾಯಿತು ಅಂತ ಬೆಂಕಿಗೆ ಹಾಕಿ ಸುಟುತ್ತಾರೆ.

ಈ ಗ್ರಾಮದಲ್ಲಿ ಮತ್ತೊಂದು ವಿಶೇಷ ಏನಂದ್ರೆ. ನಾಯಿಗಳಿಗಾಗಿ ವಿಶೇಷ ಅಡುಗೆ ತಯಾರು ಮಾಡ್ತಾರೆ. ಮಡಿಕೆ ಕಾಳು, ತುಪ್ಪದಿಂದ ಮಾಡಿದ ಮೃಷ್ಟನ್ನವನ್ನು ಗ್ರಾಮದಲ್ಲಿನ ನಾಯಿಗಳಿಗೆ ಉಣಬಡಿಸುತ್ತಾರೆ. ಇದೊಂದೆ ಗ್ರಾಮದ ಅಲ್ಲ, ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಬೀದಿ ನಾಯಿಗಳಿಗೆ ಬಾಳೆ ಎಲೆಯಲ್ಲಿ ಬಿಸಿ ಬಿಸಿ ರೈಸ್ ನೀಡ್ತಾರೆ. ಬೆಳಿಗ್ಗೆ ಐದಾರು ಗಂಟೆಯಿಂದ ನಾಯಿಗಳಿಗೆ ಊಟ ನೀಡುವುದಕ್ಕಾಗಿ ಕ್ಯಾಂಪಿನ ವೆಂಕಟರಮಣ ಎಣ್ಣೆ ಸ್ಥಾನ ಮಾಡಿ ಹೊಸ ಬಟ್ಟೆಗಳನ್ನ ತೊಟ್ಟುಕೊಂಡು ಖಡಕ್ ಆಗಿ ಹೆಗಲ ಮೇಲೆ ಅನ್ನದ ಬುಟ್ಟಿಯನ್ನಿಟ್ಟುಕೊಂಡು ಶ್ವಾನಕ್ಕೆ ಊಟ ನೀಡಲು ಹೋಗ್ತಾನೆ. ಹಿಂದೆ ಇವರ ತಂದೆಯವರು ಮಾಡಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಇತ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ. ಈ ರೀತಿ ನಾಯಿಗಳಿಗೆ ಊಟ ಹಾಕವುದಕ್ಕು ಒಂದು ಅರ್ಥ ಇದೇ. ನಾಯಿಯನ್ನ ಕಾಲ ಬೈರವನೆಂದು ಪೂಜೆ ಮಾಡ್ತಾರಂತೆ ಈ ದಿನ ನಾಯಿಗಳಿಗೆ ಮೃಷ್ಟನ್ನ ಭೋಜನ ಹಾಕುವುದರಿಂದ ಸಾಕ್ಷಾತ್ ದೇವರಿಗೆ ನೈವೇದ್ಯ ನೀಡಿದಂತೆ ಆಗುತ್ತೆ ಎಂಬ ನಂಬಿಕೆ ಇದೇ.

 

ಸಾಮಾನ್ಯವಾಗಿ  ಮಕರ ಸಂಕ್ರಾಂತಿ ಎಂದ್ರೆ  ನದಿಗಳಲ್ಲಿ, ಹಳ್ಳಗಳಲ್ಲಿ ಹೋಗಿ ಎಳ್ಳು ಹಾಕಿಕೊಂಡು ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗಿ ಪುಣ್ಯಪ್ರಾಪ್ತಿಯಾಗುತ್ತೆ ಎಂಬ ವಾಡಿಕೆ ಇದೆ. ಇತ್ತ ಈ ಸೋಮನಾಳಕ್ಯಾಂಪ್ ನಲ್ಲಿ ಇಡೀ ಊರಿಗೆ ಊರೇ ಸಂಕ್ರಾಂತಿ ಸಡಗರದಲ್ಲಿ ತೇಲಾಡುತ್ತಿದ್ದು, ನಾಯಿಗಳಿಗೆ ಮೃಷ್ಟಾನ್ನ ನೀಡುವುದ ಮಾತ್ರ ವಿಶೇಷವಾಗಿದೆ. ಸಾಮಾನ್ಯವಾಗಿ ಬೀದಿ ನಾಯಿಗಳಿಗೆ ತಂಗಳ ಅನ್ನ ಭಾಗ್ಯವಿರುತ್ತಿತ್ತು. ಆದ್ರೆ ಈ ದಿನ ಮೃಷ್ಟಾನ್ನ ಉಣಬಡಿಸುತ್ತಿರುವುದು ಒಂದು ವಿಶೇಷ.