ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸದ ಮೆರವಣಿಗೆ

2020 Pic

ಕೊಪ್ಪಳ: ಸಂಸ್ಥಾನಶ್ರೀ ಗವಿಮಠದಜಾತ್ರಾ ಮಹೋತ್ಸವಹದ ಅಂಗವಾಗಿ ನಾಳೆ ದಿನಾಂಕ ೨೮ ರಂದುಗುರುವಾರ ಸಾಯಂಕಾಲ ೫ ಗಂಟೆಗೆಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಮೆರವಣಿಗೆಜರುಗುವುದು.

ಹಿನ್ನೆಲೆ: ಶ್ರೀಗವಿಮಠದ ೧೧ ಪೀಠಾಧೀಪತಿಗಳಾಗಿದ್ದ ಕರ್ತೃಜ|| ಗವಿಸಿದ್ದೇಶ್ವರ ಶಿವಯೋಗಿಗಳವರು ಶ್ರೀ ಗವಿಮಠಕ್ಕೆ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಡರ ಮನೆಯಲ್ಲಿ ಲಿಂಗ ಪೂಜಾನುಷ್ಠಾನ ನಿರತರಾಗಿದ್ದರು.ಶ್ರೀ ಗವಿಮಠಕ್ಕೆ ಬರುವಮುನ್ನಗೌಡರಧರ್ಮಪತ್ನಿಯವರಿಗೆತಮ್ಮ ಶಿಖೆ (ಜಡೆ) ಯನ್ನೇ ಆಶಿರ್ವಾದ ರೂಪದಲ್ಲಿ ಕರುಣಿಸಿದರು.. ಅಂದಿನಿಂದ ಆ ಮನೆತನಕ್ಕೆಜಡೇಗೌಡ್ರ ಎಂಬ ಹೆಸರು ಬಂದಿತು.ಈ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಪೂಜೆಗೊಂಡಶ್ರೀಗವಿಸಿದ್ಧೇಶ್ವರ ಮೂರ್ತಿಯನ್ನುಜಡೇಗೌಡರ ಮನೆಯಲ್ಲಿಯೇ ಮೂಹುರ್ತಗೊಳಿಸಿ, ಪೂಜಾದಿಗಳನ್ನು ಸಲ್ಲಿಸುವರು.ತರುವಾಯ ವಾದ್ಯಗಳ ಸಮೇತ ಪಲ್ಲಕ್ಕಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಶ್ರೀ ಗವಿಮಠಕ್ಕೆತರುವದು ಸತ್‌ಸಂಪ್ರದಾಯವಾಗಿದೆ.

ಕಳಸ ಹಾಗೂ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ:

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದಜಾತ್ರಾ ಮಹೋತ್ಸವಹದ ಅಂಗವಾಗಿ ನಾಳೆ ದಿನಾಂಕ ೨೮ ರಂದುಗುರುವಾರ ಸಾಯಂಕಾಲ ೫ ಗಂಟೆಗೆ ಹಲಗೇರಿಯಿಂದಕಳಸ, ಮುದ್ದಾಬಳ್ಳಿ-ಮಂಗಳಾಪುರ ಗ್ರಾಮಗಳಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಕಾರ್ಯಕ್ರಮಜರುಗುವುದು.
ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ದಿನ ಪ್ರತಿವರ್ಷದ ಸಂಪ್ರದಾಯದಂತೆ ಸಾಯಂಕಾಲ ೫ಗಂಟೆಗೆ ಹಲಗೇರಿಗ್ರಾಮದಲಿಂ.ವೀರನಗೌಡ್ರು ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರರಥದ ಮೇಲಿನ ಕಳಸವು ಗವಿಮಠಕ್ಕೆ ಬರುತ್ತದೆ.ಇದೇಸಂದರ್ಭದಲ್ಲಿ ಮುದ್ದಾಬಳ್ಳಿ-ಮಂಗಳಾಪುರ ಗ್ರಾಮಗಳ ಭಕ್ತರಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಮೆರವಣಿಗೆಯೊಂದಿಗೆ ಹೊರಟು ಮಾರ್ಗ ಮಧ್ಯದಲ್ಲಿ ಕಳಸೋತ್ಸವ ಹಾಗೂ ಪಲ್ಲಕ್ಕಿಉತ್ಸವದ ಮೆರವಣಿಗೆಯಲ್ಲಿಕೂಡಿಕೊಂಡು ಗವಿಮಠಕ್ಕೆತಲುಪುತ್ತದೆ.ಈ ಮೆರವಣಿಗೆಯಲ್ಲಿಅನೇಕ ಭಕ್ತರು ಭಾಗವಹಿಸುತ್ತಾರೆ.ಆಗಮಿಸಿದ ಭಕ್ತಾಧಿಗಳು ಶ್ರೀ ಗವಿಸಿದ್ಧೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಸಾದಪಡೆದುತಮ್ಮತಮ್ಮಗ್ರಾಮಕ್ಕೆ ತೆರಳುತ್ತಾರೆ.

Please follow and like us:
error